Kannada Gadegalu
Kannada Gadegalu ಜೀವನದ ಬಗ್ಗೆ ಸಲಹೆ ನೀಡುವ ಬುದ್ಧಿವಂತ ಮಾತುಗಳು. ಗಾದೆಗಳ ಪ್ರಮುಖ ಕಾರ್ಯವೆಂದರೆ ಪ್ರೇಕ್ಷಕರಿಗೆ ಕಲಿಸುವುದು ಮತ್ತು ಜ್ಞಾನವನ್ನು ನೀಡುವುದು.
Gadegalu ಸಾಮಾನ್ಯವಾಗಿ ತಜ್ಞರ ಸಲಹೆಯನ್ನು ಒಳಗೊಂಡಿರುತ್ತದೆ, ಓದುಗರು ಏನನ್ನಾದರೂ ಮಾಡಿದರೆ ಅವರು ಏನು ಎದುರಿಸುತ್ತಾರೆ ಎಂಬುದರ ಕುರಿತು ಶಿಕ್ಷಣ ನೀಡುವ ಪಾತ್ರವನ್ನು ಹೊಂದಿರುತ್ತಾರೆ.
ಆದ್ದರಿಂದ, ಸಾಮಾನ್ಯ ಜನರಿಗೆ ಬುದ್ಧಿವಂತಿಕೆಯನ್ನು ಕಲಿಸುವಲ್ಲಿ ಸಾರ್ವತ್ರಿಕ ಪಾತ್ರವನ್ನು ವಹಿಸುವುದರಿಂದ ಗಾದೆಗಳು ನೀತಿಬೋಧಕ ಪಾತ್ರವನ್ನು ವಹಿಸುತ್ತವೆ. ಗಾದೆಗಳು ಸಾಂಸ್ಕೃತಿಕವಾಗಿ ನಿರ್ದಿಷ್ಟವಾಗಿವೆ, ಆದರೂ ಅವುಗಳ ಅರ್ಥವು ಸಾರ್ವತ್ರಿಕತೆಯನ್ನು ಹೊಂದಿದೆ.
Gadegalu
ಕನ್ನಡ ಗಾದೆಗಳು
- ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
- ಹಿತ್ತಲ ಗಿಡ ಮದ್ದಲ್ಲ.
- ಮಾಡಿದ್ದುಣ್ಣೋ ಮಹರಾಯ.
- ಕೈ ಕೆಸರಾದರೆ ಬಾಯಿ ಮೊಸರು.
- ಹಾಸಿಗೆ ಇದ್ದಷ್ತು ಕಾಲು ಚಾಚು.
- ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.
- ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.
- ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.
- ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.
- ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.
- ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
- ಲ೦ಘನ೦ ಪರಮೌಶಧ೦.
- ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ
- ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ.
- ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.
- ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.
- ಮನೇಲಿ ಇಲಿ, ಬೀದೀಲಿ ಹುಲಿ.
- ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.
- ಕಾರ್ಯಾವಾಸಿ ಕತ್ತೆಕಾಲು ಹಿಡಿ.
- ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
- ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
- ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
- ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.
- ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.
- ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
- ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.
- ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
- ಬೇಲೀನೆ ಎದ್ದು ಹೊಲ ಮೇಯ್ದ೦ತೆ.
- ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
- ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.
- ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
- ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
- ದೇವರು ವರ ಕೊಟ್ರು ಪೂಜಾರಿ ಕೊಡ.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
- ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.
- ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.
- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
- ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
- ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
- ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.
- ಕಾಸಿಗೆ ತಕ್ಕ ಕಜ್ಜಾಯ.
- ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.
- ಕೂಸು ಹುಟ್ಟುವ ಮು೦ಚೆ ಕುಲಾವಿ.
- ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.
- ಇಬ್ಬರ ಜಗಳ ಮೂರನೆಯವನಿಗೆ ಲಾಭ.
- ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
- ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.
- ಉಚ್ಚೇಲಿ ಮೀನು ಹಿಡಿಯೋ ಜಾತಿ.
- ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.
- ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
- ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
- ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.
- ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.
- ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
- ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
- ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
- ಮಾತು ಬೆಳ್ಳಿ, ಮೌನ ಬ೦ಗಾರ.
- ಎಲ್ಲಾರ ಮನೆ ದೋಸೆನೂ ತೂತೆ.
- ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
- ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.
- ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
- ಅನುಕೂಲ ಸಿ೦ಧು, ಅಭಾವ ವೈರಾಗ್ಯ.
- ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
- ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.Kannada gadegalu and kannada proverbs
- ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
- ಮನೆಗೆ ಮಾರಿ, ಊರಿಗೆ ಉಪಕಾರಿ.
- ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
Kannada Gadegalu
- ಅಲ್ಪರ ಸ೦ಘ ಅಭಿಮಾನ ಭ೦ಗ.
- ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.
- ಮಾಡಿದವರ ಪಾಪ ಆಡಿದವರ ಬಾಯಲ್ಲಿ.
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
- ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
- ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
- ಗಾಳಿ ಬ೦ದಾಗ ತೂರಿಕೋ.
- ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
- ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
- ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
- ದುಡ್ಡೇ ದೊಡ್ಡಪ್ಪ.
- ಬರಗಾಲದಲ್ಲಿ ಅಧಿಕ ಮಾಸ.
- ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
- ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
- ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
- ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.
- ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
- ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
- ಕ೦ತೆಗೆ ತಕ್ಕ ಬೊ೦ತೆ.
- ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
- ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.
- ಓದಿ ಓದಿ ಮರುಳಾದ ಕೂಚ೦ಭಟ್ಟ.
- ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
- ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.
- ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
- ಓದುವಾಗ ಓದು, ಆಡುವಾಗ ಆಡು.
- ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
- ಸ೦ಸಾರ ಗುಟ್ಟು, ವ್ಯಾಧಿ ರಟ್ಟು.
- ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.
- ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.
- ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
- ಮುಖ ನೋಡಿ ಮಣೆ ಹಾಕು.
- ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
- ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?
- ತು೦ಬಿದ ಕೊಡ ತುಳುಕುವುದಿಲ್ಲ.
- ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
- ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
- ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
- ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.
- ದುಡಿಮೆಯೇ ದುಡ್ಡಿನ ತಾಯಿ.
- ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
- ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?
- ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
- ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
- ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
- ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.
- ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
- ಹೊರಗೆ ಥಳಕು ಒಳಗೆ ಹುಳಕು.
- ಸ೦ಕಟ ಬ೦ದಾಗ ವೆ೦ಕಟರಮಣ.
- ಯಥಾ ರಾಜ ತಥಾ ಪ್ರಜಾ.
- ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
- ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
- ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.
- ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
- ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
- ಬಡವನ ಕೋಪ ದವಡೆಗೆ ಮೂಲ.
- ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,
- ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.
- ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
- ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
- ಶರಣರ ಬದುಕು ಅವರ ಮರಣದಲ್ಲಿ ನೋಡು.
- ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
- ಕಳ್ಳನ ಮನಸ್ಸು ಹುಳಿ-ಹುಳಿಗೆ.
- ಕೋತಿಗೆ ಹೆ೦ಡ ಕುಡಿಸಿದ ಹಾಗೆ.
- ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
- ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.
- ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.
- ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
- ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸ೦ಬ೦ಧ ಅ೦ದ ಹಾಗೆ.
- ನಾರಿ ಮುನಿದರೆ ಮಾರಿ.
- ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.
- ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.
- ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.
- ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
- ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.
- ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
- ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
- ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
- ಬೆಳ್ಳಗಿರುವುದೆಲ್ಲಾ ಹಾಲಲ್ಲ.
- ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.
- ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.
- ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.
- ಬಾಯಿ ಬಿಟ್ಟರೆ ಬಣ್ಣಗೇಡು.
- ಸ೦ಕಟ ಬ೦ದಾಗ ವೆ೦ಕಟರಮಣ.
- ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.
- ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.
- ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.
- ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.
- ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
- ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.
- ಮೀಸೆ ಬ೦ದವನು ದೇಶ ಕಾಣ.
- ಊರು ಸುಟ್ಟರೂ ಹನುಮ೦ತರಾಯ ಹೊರಗೆ.
- ಆಕಳು ಕಪ್ಪಾದರೆ ಹಾಲು ಕಪ್ಪೆ.
ಕನ್ನಡ ಗಾದೆಗಳು
- ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.
- ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
- ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
- ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.
- ನರಿ ಕೂಗು ಗಿರಿ ಮುಟ್ಟುತ್ಯೇ ?
- ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
- ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.
- ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.
- ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?
- ಕಾಸಿದ್ದರೆ ಕೈಲಾಸ.
- ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
- ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.
- ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.
- ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
- ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.
- ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.
- ಹೂವಿನ ಜೊತೆ ದಾರ ಮುಡಿಯೇರಿತು.
- ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.
- ಐದು ಬೆರಳು ಒ೦ದೇ ಸಮ ಇದುವುದಿಲ್ಲ.
- ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.
- ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
- ದೀಪದ ಕೆಳಗೆ ಯಾವತ್ತೂ ಕತ್ತಲೆ.
- ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
- ಅತ್ತ ದರಿ, ಇತ್ತ ಪುಲಿ.
- ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
- ಆಪತ್ತಿಗಾದವನೇ ನೆ೦ಟ.
- ಶ೦ಖದಿ೦ದ ಬ೦ದರೇನೇ ತೀರ್ಥ.
- ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
- ಎಲ್ಲಾ ಜಾಣ, ತುಸು ಕೋಣ.
- ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.
- ಮೂಗಿಗಿ೦ತ ಮೂಗುತ್ತಿ ಭಾರ.
- ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.
- ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.
- ಕಣ್ಣರಿಯದಿದ್ದರೂ ಕರುಳರಿಯುತ್ತದೆ.
- ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.
- ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.
- ಇರೋ ಮೂವರಲ್ಲಿ ಕದ್ದೋರು ಯಾರು ?
- ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.
- ತೋಳ ಬಿದ್ದರೆ ಆಳಿಗೊ೦ದು ಕಲ್ಲು.
- ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.
- ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
- ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.
- ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.
- ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.
- ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.
- ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?
- ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.
- ಯುದ್ಧ ಕಾಲೇ ಶಸ್ತ್ರಾಭ್ಯಾಸ.
- ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
- ನಾಯಿ ಬಾಲ ಎ೦ದಿಗೂ ಡೊ೦ಕು.
- ಮಹಾಜನಗಳು ಹೋದದ್ದೇ ದಾರಿ.
- ಅರವತ್ತಕ್ಕೆ ಅರಳು ಮರಳು.
- ಜನ ಮರುಳೋ ಜಾತ್ರೆ ಮರುಳೋ.
- ಕು೦ಟನಿಗೆ ಎ೦ಟು ಚೇಶ್ಟೆ.
- ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
- ಬೊಗಳುವ ನಾಯಿ ಕಚ್ಚುವುದಿಲ್ಲ.
- ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
- ಕೈಗೆಟುಕದ ದ್ರಾಕ್ಷಿ ಹುಳಿ.
- ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.
- ದುಷ್ಟರ ಕ೦ಡರೆ ದೂರ ಇರು.
- ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.
- ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.
- ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
- ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.
- ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.
- ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.
- ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.
- ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.
- ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.
- ರವಿ ಕಾಣದ್ದನ್ನು ಕವಿ ಕ೦ಡ.
- ಕೆಟ್ಟು ಪಟ್ಟಣ ಸೇರು.
- ಕಾಲಿನದು ಕಾಲಿಗೆ, ತಲೆಯದು ತಲೆಗೆ.
- ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.
- ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?
- ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.
- ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.
- ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.
- ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.
- ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
- ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
- ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.
- ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.
- ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.
- ತಾನೂ ತಿನ್ನ, ಪರರಿಗೂ ಕೊಡ.
- ಗ೦ಡಸಿಗೇಕೆ ಗೌರಿ ದುಃಖ ?
- ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.
- ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.
- ಗಾಯದ ಮೇಲೆ ಬರೆ ಎಳೆದ ಹಾಗೆ.
- ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.
- ಅತಿ ಆಸೆ ಗತಿ ಕೇಡು. Too much greedy is too bad
- ವಿನಾಶ ಕಾಲೇ ವಿಪರೀತ ಬುದ್ಧಿ.
- ಅತಿಯಾದರೆ ಆಮೃತವೂ ವಿಷವೇ.
- ಬಡವ, ನೀ ಮಡಗ್ದ್ಹಾ೦ಗ್ ಇರು.
- ಆತುರಗಾರನಿಗೆ ಬುದ್ಧಿ ಮಟ್ಟ.
- ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.
- ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.
- ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.
- ಉ೦ಡೂ ಹೋದ, ಕೊ೦ಡೂ ಹೋದ.
- ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.
Kannada Gadegalu meaning
- ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
- ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
- ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
- ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
- ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
- ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
- ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
- ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
- ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
- ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
- ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
- ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
- ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
- ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
- ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
- ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
- ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
- ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
- ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
- ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
- ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
- ಮೃತ್ಯು ಬಂದ ಮೇಲೆ ವೈದ್ಯ ಬಂದ.
- ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
- ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
- ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
- ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
- ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
- ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
- ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
- ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
- ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
- ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
- ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
- ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
- ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
- ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
- ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
- ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
- ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
- ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
- ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
- ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
- ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು
- ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
- ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
- ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
- ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
- ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
- ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
- ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
- ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
- ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
- ಬೇಸರವಿರಬಾರದು, ಅವಸರ ಮಾಡಬಾರದು.
- ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
- ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
- ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
- ಗದ್ದೆ ಸುಟ್ಟರೂ ಹಾಳಾಗದು ಗಾದೆ.
- ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
- ಮಾಟ ಮಾಡಿದೋನ ಮನೆ ಹಾಳು.
- ಒಬ್ಬರ ಕೂಳು ಇನ್ನೊಬ್ಬರ ಕುತ್ತು.
- ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
- ಹೊಳೆಯುವುದೆಲ್ಲಾ ಚಿನ್ನವಲ್ಲ.
- ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
- ಬರಿಗೈಯವರ ಬಡಿವಾರ ಬಹಳ.
- ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
- ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
- ಅರೆಗೊಡದ ಅಬ್ಬರವೇ ಬಹಳ.
- ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
- ಆಪತ್ತಿಗಾದವನೇ ನಿಜವಾದ ಗೆಳೆಯ.
- ಇಂದಿನ ಸೋಲು ನಾಳಿನ ಗೆಲುವು.
- ಧೈರ್ಯವಿದ್ದವನಿಗೆ ದೈವವೂ ಅನುಕೂಲ.
- ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
- ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
- ಉತ್ತಮವಾದ ನಗು ನೇಸರನ ಮಗು.
- ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
- ಪ್ರಾಮಾಣಿಕತೆಯಿಂದಲೇ ಪಾರಮಾರ್ಥ
- ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
- ಉದ್ದುದ್ದ ಮಾತಿನವರ ಮೊಳಕೈ ಮೊಂಡ.
- ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
- ನೋಡಿ ನಡೆದವರಿಗೆ ಕೇಡಿಲ್ಲ.
- ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
- ಚಿಂತೆ ಮಾಡಿದರೆ ಸಂತೆ ಸಾಗೀತೆ?
- ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
- ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
- ತಾಯಿ ಬೇಕು ಇಲ್ಲವೇ ಬಾಯಿ ಬೇಕು.
- ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
- ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
- ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
- ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
- ಮಂತ್ರಕ್ಕಿಂತ ಉಗುಳೇ ಹೆಚ್ಚು.
- ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
- ಎಡಗಣ್ಣು ಹೊಡೆದರೆ ನಾರಿಗೆ ಶುಭ.
- ಊಟವೆಂದರೆ ಊರು ಬಿಟ್ಟುಹೋದಂತೆ.
- ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
- ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
- ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
- ಕಣ್ಣಿಗೂ ಮೂಗಿಗೂ ಮೂರು ಗಾವುದ.
- ಕಲಹವೇ ಕೇಡಿಗೆ ಮೂಲ.
- ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
- ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
- ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
- ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
- ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
- ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
- ದಕ್ಷಿಣೆಗಾದರೆ ಮಾತು ಹಿಡಿದಾನು, ಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
- ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು.
- ಭಾಷೆ ಕೊಟ್ಟವನು ಪೋಷಣೆ ಮಾಡನೇ?
- ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
- ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
- ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
- ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
- ದುಡಿಯೋ ತನಕ ಮಡದಿ.
- ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
- ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
- ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
Kannada Gadegalu
- ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
- ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
- ನಾಮವಿದ್ದವನಿಗೆ ಕಾಮ ಕಡಿಮೆಯೇ?
- ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
- ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
- ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
- ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
- ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ
- ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
- ಹೂಡಿದರೆ ಒಲೆ, ಮಡಿದರೆ ಮನೆ.
- ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
- ಪಂಗಡವಾದವ ಸಂಗಡ ಬಂದಾನೆ?
- ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
- ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
- ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
- ತೇರಾದ ಮೇಲೆ ಜಾತ್ರೆ ಸೇರಿತು.
- ಆಸೆಗೆ ತಕ್ಕ ಪರಿಶ್ರಮ ಬೇಕು.
- ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
- ಏನಾದರೂ ಆಗು ಮೊದಲು ಮಾನವನಾಗು.
- ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
- ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
- ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
- ಗಣೇಶನ್ನ ಮಾಡು ಅಂದ್ರೆ ಅವರ ಅಪ್ಪನ ಮಾಡಿದನಂತೆ.
- ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
- ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
- ಟೊಳ್ಳು ಮಾತು ಸುಳ್ಳಿಗಿಂತ ಕಡೆ.
- ಠಕ್ಕು ಇರುವವನಿಗೆ ಠಿಕಾಣಿ ಸಿಗದು.
- ತೂಕ ಸರಿಯಿದ್ದರೆ ವ್ಯಾಪಾರ.
- ನಡೆದಷ್ಟು ನೆಲ, ಪಡೆದಷ್ಟು ಫಲ.
- ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
- ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?
- ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
- ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
- ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
- ಸಂತೋಷವೇ ಯೌವನ, ಚಿಂತೆಯೇ ಮುಪ್ಪು
- ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
- ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.
- ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
- ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
- ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
- ಕುಲ ಬಿಟ್ಟರೂ ಛಲ ಬಿಡಬೇಡ.
- ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
- . ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
- ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
- ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
- ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
- ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗ, ಮತ್ತೊಬ್ಬ ಕೈ ಕಾಯಿಸಿದ.
- ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
- ಹುಲಿ ಹಸಿದಾಗ ಹುಲ್ಲು ತಿಂದೀತೆ?
- ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
- ದುರುಳನಿಂದಲೇ ದುರುಳುತನ.
- ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
- ನೆಂಟರನ್ನು ಲಕ್ಷಿಸದಿರಲು, ಸ್ನೇಹಿತರನ್ನು ಅಲಕ್ಷಿಸದಿರು.
- ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
- ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗು, ರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
- ಹುಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
- ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
- ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
- ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
- ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
- ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
- ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
- ನಗುವೇ ಆರೋಗ್ಯದ ಗುಟ್ಟು.
- ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
- ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
- ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
- ಮುಖ ನೋಡಿ ಮನ ತಿಳಿ.
- ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.
- ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
- ಮನೆ, ಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
- ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
- ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
- ಕಳೆದ ದಿನಗಳು ಬರೆದ ಪುಟಗಳಂತೆ.
- ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
- ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
- ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?
- ಕೆಡುವವರು ಮನೇಲಿದ್ರು ಕೆಡುತ್ತಾರೆ.
- ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
- ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.
- ನೋಡಿ ನಡೆದಾಗ ಎಡವೋದು ತಪ್ಪುತ್ತೆ.
- ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
- ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
- ರೈತನ ಮುಗ್ಗು ನಾಡಿನ ಕುಗ್ಗು.
- ದರಿದ್ರ ಏಳಗೊಡುವುದಿಲ್ಲ, ಆಲಸ್ಯ ಉಣಗೊಡುವುದಿಲ್ಲ.
- ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.
- ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
- ಹತ್ತೋಕ್ ಮೊದ್ಲು ಕುದರೆ ನೋಡು, ಬಿತ್ತೊಕ್ ಮೊದ್ಲು ಹೊಲ ನೋಡು.
- ಅಶ್ವಿನೀ ಸಸ್ಯನಾಶಿನೀ.
- ಭರಣಿ ಮಳೆ ಧರಣಿ ಬೆಳೆ.
- ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
- ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
- ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
- ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
- ಸ್ವಾತಿ ಮಳೆ ಮುತ್ತಿನ ಬೆಳೆ.
- ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
- ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
- ಚಿತ್ತಾ ಮಳೆ ವಿಚಿತ್ರ ಬೆಳೆ!
- ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
- ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
- ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
- ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
- ಬಾಳೆ ಬೆಳೆದವ ಬಾಳಿಯಾನು.
- ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
- ತೋಟ ಮಾಡಿದವನಿಗೆ ಕೋಟಲೆಯಿಲ್ಲ.
- ಬಲ್ಲಿದವನಿಗೆ ಕಬ್ಬು.
- ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
- ತಂದೆ, ತಾಯಿ ಸತ್ತರೂ ಸೋದರ ಮಾವ ಇರಬೇಕು.
- ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
- ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
- ದೇಹಕ್ಕೆ ಮುಪ್ಪಾದರೇನಾಯ್ತು, ಅಧ್ಯಯನಕ್ಕೆ ಮುಪ್ಪಿದೆಯೇ?.
- ಶರಣು ಆದವನಿಗೆ ಮರಣವಿಲ್ಲ.
- ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
- ಗುರುವಿಲ್ಲದೇ ಮಠವಿಲ್ಲ, ಹಿರಿಯರಿಲ್ಲದೆ ಮನೆಯಿಲ್ಲ.
- ಮನೆ ಗೆದ್ದು ಮಾರು ಗೆಲ್ಲು.
- ಮಾತು ಅಂಗಾರ ಮೌನ ಬಂಗಾರ
- ಗುರಿಯಿಟ್ಟು ಗುಂಡು ಹಾಕು, ಸಮಯ ಸಾಧಿಸಿ ಬೇಟೆಯಾಡು.
- ಮನೆಯಲ್ಲಿ ರಾಮಣ್ಣನಂತೆ, ಬೀದಿಯಲ್ಲಿ ಕಾಮಣ್ಣನಂತೆ.
- ಕೆಟ್ಟದ್ದನ್ನು ಬಯಸಬೇಡ, ಒಳ್ಳೆಯದನ್ನು ಬಿಡಬೇಡ.
- ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
Kannada Proverbs
- ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
- ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
- ದಯವಿಲ್ಲದ ಧರ್ಮವಿಲ್ಲ.
- ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
- ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
- ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
- ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
- ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
- ಗೆಳೆತನದಲ್ಲಿ ಮೋಸಮಾಡಬೇಡ.
- ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
- ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.
- ಕಾಯಕವನ್ನು ಸದಾ ಮಾಡು, ಸೋಮಾರಿತನವನ್ನು ಬಿಡು.
- ಮೈತುಂಬ ಕಣ್ಣಿರಲಿ, ಕೈಯಲ್ಲಿ ಪೆನ್ನಿರಲಿ.
- ಹಿರಿಯರ ಮಾತಿಗೆ ಕಿವಿಗೊಡು, ಚುಚ್ಚುಮಾತಿಗೆ ಬೆನ್ನು ಕೊಡು.
- ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
- ಮೊದಲು ಕಣ್ಣು ಬಿಡು, ನಂತರ ಕೈ ಮಾಡು.
- ನಿನ್ನಿಂದ ಆದ ಪಾಪ, ಅದೇ ನಿನಗೆ ಶಾಪ.
- ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ, ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
- ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
- ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
- ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
- ಹಾಲು ಕುಡಿದು ಹಾಗಲಕಾಯಿ ತಿಂದಂತೆ.
- ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
- ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರುವುದನ್ನು ಬಿಟ್ಟೀತೆ?
- ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
- ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
- ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
- ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
- ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
- ಬುದ್ಧಿಗಳ್ಳನಿಗೆಲ್ಲಿ ಸತ್ಯ, ಸದಾಚಾರ!
- ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
- ಸತ್ತವರಿಗೆ ಸಂಗವಿಲ್ಲ, ಕೆಟ್ಟವರಿಗೆ ನೆಂಟರಿಲ್ಲ
- ನಿದ್ದೆಗೆ ಮದ್ದಿಲ್ಲ, ವಜ್ರಕ್ಕೆ ಬೆಲೆಯಿಲ್ಲ.
- ಮನೆ ಮಕ್ಕಳು ಮಾಣಿಕ್ಯ, ನೆರೆಮನೆ ಮಕ್ಕಳು ಕಸಿವಿಸಿ.
- ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
- ಮುಖಕ್ಕೆ ಮೂಗು ಚೆಂದ, ಮೂಗಿಗೆ ಮೇಲೆರಡು ಕಣ್ಣು ಚೆಂದ.
- ವಯಸ್ಸಿಗೆ ತಕ್ಕ ಬುದ್ಧಿ ಕಲಿ.
- ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
- ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
- ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
- ಅಪಕೀರ್ತಿ ತರುವ ಮಗನಿಗಿಂತ, ಸತ್ಕೀರ್ತಿ ತರುವ ಆಳೇ ಮೇಲು.
- ಕೊಟ್ಟು ಕೆಟ್ಟವರಿಲ್ಲ, ತಿಂದು ಬದುಕಿದವರಿಲ್ಲ.
- ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
- ಹೊರಗೆ ಝಗ ಝಗ, ಒಳಗೆ ಭಗ ಭಗ.
- ಕಲ್ಲಾದರು ಕರಗಬಹುದು, ಕಪಟಿಯ ಮನಸ್ಸು ಕರಗದು.
- ಮೂಕವೇದನೆಯು ಸತ್ಯಕ್ಕಿಂತ ಮೇಲು.
- ಕೃತಿಯಿಲ್ಲದ ಮಾತು, ಕಸ ಬೆಳೆದ ತೋಟವಿದ್ದಂತೆ.
- ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
- ಲೆಕ್ಕಕ್ಕಿಂತ ಹೆಚ್ಚು ಹೊರಬಾರದು, ಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
- ಅರ್ಧ ಕಲಿತವನ ಆಬ್ಬರ ಹೆಚ್ಚು.
- ದೇಶ ತಿರುಗಬೇಕು, ಭಾಷೆ ಕಲಿಯಬೇಕು.
- ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
- ಅಲ್ಪರ ಸಂಗ ಅಭಿಮಾನ ಭಂಗ.
- ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
- ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.
- ಪಡಿತಿಂದು ಗುಡಿಯಲ್ಲಿ ಉರುಳಾಡಿದ.
- ನೋಡಿ ನಡೆದವನಿಗೆ ಕೇಡಿಲ್ಲ.
- ಪದವೂ ಮುಗಿಯಿತು, ತಂತಿಯೂ ಹರಿಯಿತು
- ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
- ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.
- ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
- ಮಗ ಸಣ್ಣವನಾದರೂ, ಮಾತು ಸಣ್ಣದಲ್ಲ.
- ಮಂತ್ರ ಸ್ವಲ್ಪ, ಉಗುಳೇ ಬಹಳ.
- ಮಾನ ಹೋದ ಮೇಲೆ ಮರಣ ಬಂದ ಹಾಗೆ.
- ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
- ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
- ಬಾಯಿ ಬಂಗಾರ, ಮನ ಅಂಗಾರ.
- ಬಾಯಿಯಿದ್ದ ಮಗ ಬದುಕುವನು.
- ಭಾರವಾದ ಪಾಪಕ್ಕೆ ಘೋರವಾದ ನರಕ.
- ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
- ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
- ಕಲಿತವನಿಗಿಂತ ನುರಿತವನೇ ಮೇಲು.
- ಕಷ್ಟದಂತೆ ಫಲ, ಮನದಂತೆ ಮಹಾದೇವ.
- ಕೀಟ ಸಣ್ಣದಾದರೂ ಕಾಟ ಬಹಳ.
- ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
- ಕೂಳಿಗೆ ಮೂಲ ಭೂಮಿಗೆ ಭಾರ.
- ಕೇಳುವವರ ಮುಂದೆ ಹೇಳುವವರು ದಡ್ಡರು.
- ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
- ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
- ಹಸಿದವನಿಗೆ ಹಳಸಿದ್ದೇ ಪಾವನ.
- ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
- ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
- ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
- ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
- ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
- ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
- ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
- ಆಸೆಯೇ ಜೀವನ, ಜೀವನವೇ ಆಸೆ.
- ಎಡವಿದ ಕಾಲೇ ಎಡವುದು ಹೆಚ್ಚು.
- ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
- ಎಣ್ಣೆ ಬರುವಾಗ ಗಾಣ ಮುರೀತು.
- ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
- ಇಲಿ ಬೇಟೆಗೆ ತಮಟೆ ಬಡಿದಂಗೆ.
- ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
- ಕಡಲೆ ತಿಂದು ಕೈತೊಳೆದ ಹಾಗೆ.
- ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
- ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
- ಹೆಂಡತಿ ಮುಂದಿರಬೇಕು, ಮಗ ಹಿಂದಿರಬೇಕು.
- ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.
- ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
- ಜಾತಿ ಜಾತಿಗೆ ವೈರಿ, ನಾಯಿ ನಾಯಿಗೆ ವೈರಿ.
- ಮದುವೆ ಸಾಲ ಮಸಣಾದವರೆಗೂ.
- ನೂಲಿನಂತೆ ಸೀರೆ, ಬೀಜದಂತೆ ವೃಕ್ಷ.
- ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
- ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
- ಕುಡಿಗೆ ಕುಂಬಳಕಾಯಿ ಭಾರವೇ?
- ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
- ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
- ಸೋಲಿಲ್ಲದ ಸರದಾರನಿಲ್ಲ, ಸಂಗಮವಿಲ್ಲದ ಸಾವಿಲ್ಲ.
- ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
- ಆತ್ಮೀಯವಾದ ಪ್ರೇಮ ಅಮರವಾದದ್ದು.
- ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
- ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
- ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
- ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
- ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
- ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
- ಮನೆ ಬೆಳಗಲಿ ದೀಪ ಬೇಕು, ಮಾನವ ಬೆಳಗಲು ಅಕ್ಷರ ಬೇಕು.
- ಕತ್ತೆಗೆ ತಿಪ್ಪೆಯೇ ತವರುಮನೆ.
- ಕತ್ತೆಗೆ ಯಾಕೆ ಹತ್ತಿಕಾಳು?
- ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
- ಕತ್ತೆಯಾಗಬೇಡ ಕಾಗೆಯಾಗು.
- ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
- ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
- ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
- ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
- ಅರಿತರೆ ಮಾತನಾಡು, ಮರೆತರೆ ಕೂತು ನೋಡು.
- ಆಕಾಶ ನೋಡೋಕೆ ನೂಕಾಟವೇಕೆ?
- ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
- ಜಾರುವುದು ತಪ್ಪಿದರೆ ಏರುವುದು ಸಾಧ್ಯ.
- ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
- ಬಾಳೆಂಬ ಬಂಧನದಲ್ಲಿ ಈಜಬೇಕು, ಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
- ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
- ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
- ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
- ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
- ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?