Ashika Ranganath Biography | ಆಶಿಕಾ ರಂಗನಾಥ್ ಕನ್ನಡದ ನಟಿ

0
Ashika Ranganath

Ashika Ranganath Biography – ಸ್ಯಾಂಡ್ ವುಡ್ ನಟಿ

Ashika Ranganath ಈಕೆ 2014ರಲ್ಲಿ ಮಹೇಶ್ ಪ್ರಕಾಶ್ ನಿರ್ದೇಶನದ, ದಿಲೀಪ್ ರಾಜ್ ನಾಯಕ ನಟನಾಗಿ ಅಭಿನಯಿಸಿದ ಕ್ರೇಜಿ ಬಾಯ್ ಚಿತ್ರದ ಮೂಲಕ ಸ್ಯಾಂಡ್ ವುಡ್ ಗೆ ಆಶಿಕಾ ಅವರು ಪಾದಾರ್ಪಣೆ ಮಾಡಿದ್ದಾರೆ. ಆದರೆ ಆ ಚಲನಚಿತ್ರದಲ್ಲಿ ಈಕೆಯ ನಟನೆಗೆ ಸ್ವಲ್ಪ ಪ್ರಾಶಸ್ತ್ಯ ದೊರೆಯಿತೆ ಹೊರತು ಹೆಚ್ಚೆನು ಹೆಸರು ಗಳಿಸಿರಲಿಲ್ಲ.

ನಿನ್ನ ಸ್ನೇಹದಿಂದ ಎಲ್ಲ ಚೆಂದ ಚೆಂದ ನಿಂಗೆ ಧನ್ಯವಾದ ತುಂಬು ಹೃದಯದಿಂದ ಈ ಹಾಡು ಬಹುತೇಕರಿಗೆ ಬಹುಬೇಗನೆ ಇಷ್ಟವಾಗಿ ಬಿಡುತ್ತದೆ.
ಕೆಲವರಿಗೆ ಅದರ ಸಾಹಿತ್ಯ ಹಿಡಿಸಿದರೇ ಅದಕ್ಕೂ ಮಿಗಿಲಾಗಿ ಚೆಂದದ ಬೆಡಗಿಯ ಕಿರುನಗೆ ಮನಸ್ಸಿಗೆ ಹಿಡಿಸಿ ಇನ್ನೊಂದೆರೆಡು ಬಾರಿ ನೋಡಬೇಕೆಂಬ ಆಸೆಯನ್ನು ಇಮ್ಮಡಿಗೊಳಿಸುತ್ತದೆ.
ಈ ಚೆಲುವೆ ಅಪ್ಪಟ ಕನ್ನಡದ ಕುವರಿ ಆಶಿಕಾ ರಂಗನಾಥ್. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆದಂತೆ ಕನ್ನಡದ ಸ್ಯಾಂಡಲ್ ವುಡ್ ನಲ್ಲಿ ಕರ್ನಾಟಕದ ಕ್ರಶ್ ಎಂದೇ ಗುರುತಿಸಿಕೊಂಡವಳು.

 

View this post on Instagram

 

A post shared by Ashika Ranganath (@ashika_rangnath)

ಮೆಲ್ಲನೆ ಕಿರುನಗೆ ಮುದ್ದಾದ ಮಾತು, ನಟನೆ ಬಹುತೇಕ ಸಿನಿ ಪ್ರಿಯರ ಮನಗೆದ್ದು ಅಭಿಮಾನಿ ಬಳಗವು ಸೃಷ್ಠಿಯಾಗಿದೆ.

ಬಳಿಕ ಗಣೇಶ್ ಅಭಿನಯದ ಮುಗುಳುನಗೆ ಚಿತ್ರದಲ್ಲಿ 5 ನಾಯಕಿಯರಲ್ಲಿ ಒಬ್ಬರಾಗಿ ಸಿನಿಪ್ರಿಯರ ಮನಗೆದ್ದರು. ಈ ಚಲನಚಿತ್ರದ ಆರಂಭದಲ್ಲಿಯೇ ನಾಯಕನ ಮೊದಲ ಪ್ರೇಯಸಿಯಾಗಿ ಈಕೆಯನ್ನು ತೆರೆ ಮೇಲೆ ತರಲಾಗುತ್ತೆ.

Film Career

ಹಾಲ್ಗೆನ್ನೆ ಬಣ್ಣ, ಕಡಕ್ ಲುಕ್, ಬೋಲ್ಡ್ ಕ್ಯಾರೆಕ್ಟರ್ ಮೂಲಕ ಅಯ್ಯೊ ನನಗೂ ಇಂಥಾ ಒಬ್ಬಳು ಚೆಲುವೆ ಸಿಗಬೇಕಿತ್ತು ಅನ್ನೊ ಲೆವಲ್ಲಿನ ವರೆಗೂ ಇವರ ಅಭಿನಯವಿತ್ತು. ಈ ಚಿತ್ರದಲ್ಲಿ ಆಕೆಗೆ ಡಸ್ಟ್ ಅಲರ್ಜಿ ರೋಗವಿದ್ದು ಪದೇ ಪದೇ ಸೀನುವ ಹಾಸ್ಯ ಇನ್ನೂ ನೆನಪಿಗೆ ಬರುತ್ತೆ.

ಪುಲ್ಕು ಅಂತ ಸ್ವೀಟಾಗಿ ಕರೆಯೊ ಈಕೆ ಟ್ಯಾಲೆಂಟ್ ಅನ್ನು ಈ ಸಿನೆಮಾ ಚೆನ್ನಾಗಿ ಸೆರೆಹಿಡಿದು ಬಹುತೇಕ ಅಭಿಮಾನಿಗಳು ನಟನೆಗೆ ಫಿದಾ ಅನ್ನೊ ಹಾಗೇ ಮಾಡಿಬಿಟ್ಟಿದ್ದಾರೆ.

ಅನಂತರ ಗರುಡಾ ಚಿತ್ರದಲ್ಲಿ ಪೂಜಾ ಎನ್ನುವ ಕಾಲೇಜು ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು.

ಹೇಳಿಕೊಳ್ಳುವ ಮಟ್ಟಿನ ಹೆಗ್ಗಳಿಕೆ ಗಿಟ್ಟಿಸಿರಲಿಲ್ಲ. ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರನಲ್ಲಿ ನಾಯಕನ ತಂಗಿ ಪಾತ್ರದಲ್ಲಿ ಲೀಡ್ ರೋಲ್ ನಲ್ಲಿ ಕಥೆಯ ಮುಖ್ಯ ಪಾತ್ರಗಳಲ್ಲಿ ಒಂದೆಂಬ ಸ್ಥಾನವನ್ನು ತುಂಬಿದರು.

ಬಳಿಕ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಿದರು.

ಈ ಕನ್ನಡ ಮೀಡಿಯಂ ಮೂಲಕ ಹೊಸ ತಲೆಮಾರಿನ ವಿನೂತನ ಸಿನಿ ಪ್ರಯೋಗ ಕ್ಕೂ ಸೈ ಎಂಬಂತೆ ಇವರ ನಟನಾ ಲೋಕ ಸಾಗಿತ್ತು.

ಇದೇ ಸಮಯದಲ್ಲಿ ಕಿರುತರೆಯ ಅತಿಥಿಪಾತ್ರ ಮುಂತಾದ ಸಿನೆಮಾದಲ್ಲಿ ಪೊಷಕನಟನೆಯಲ್ಲು ಮಿಂಚಿದರು. ಅನಂತರ ಹಾಸ್ಯನಟ ಚರಣ್ ಮತ್ತು ಆಶಿಕಾ ರಂಗನಾಥ್ ಸಾರಥ್ಯದಲ್ಲಿ ರಾಂಬೋ 2 ಚಿತ್ರದ ಮೂಲಕ ಹಾಸ್ಯ ಮಿಶ್ರಿತ ಸಾಮಾಜಿಕ ಸಂದೇಶ ಸೇರುವ ಕತೆಗೆ ಗ್ಲಾಮರ್ ಮತ್ತು ಮಿಲ್ಕ್ ಬ್ಯೂಟಿ ನಟಿ ಎಂದೆ ಗುರುತಿಸಲ್ಪಟ್ಟರು.

ಈ ಚಿತ್ರದಲ್ಲಿ ಹಸಿಬಿಸಿ ಮೈ ಮಾಟದಿಂದ ರೊಮ್ಯಾಂಟಿಕ್ ಲುಕ್ ನಲ್ಲಿ ಪಡ್ಡೆ ಹೈದರ ಮನ ಕದ್ದಿದ್ದಾರೆ ಆಶಿಕಾ.

ಇದೇ ಸಿನೆಮಾದಲ್ಲಿ ಚುಟುಚುಟು ಅಂದೈತೆ ಹಾಡಿನಲ್ಲಿ ಸೂಪರ್ ಸ್ಟೇಪ್ ಇಡುವ ಮೂಲಕ ಸುಮಾರು 150 ಮಿಲಿಯನ್ ವೀಕ್ಷಿಸಲ್ಪಟ್ಟ, 2018 ತೆರೆಕಂಡ ಚಿತ್ರದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಹಾಡು ಎಂಬ ಖ್ಯಾತಿಯ ಪಾಲುದಾರರು ಆದರು.

Ashika Ranganath Movies

ನಟ ವಿಜಯ್ ಕೃಷ್ಣ ಜೊತೆ ತಾಯಿಗೆತಕ್ಕ ಮಗ ಚಿತ್ರದಲ್ಲಿ ಕ್ಲಾಸಿಕ್ ಟಚ್ ನೊಂದಿಗೆ ನಾಯಕಿ ಆಶಿಕಾ ಗುರುತಿಸಿಕೊಂಡರು. ಇದೇ ಚಲನಚಿತ್ರದಲ್ಲಿ ಸುಮಲತಾ ಅಂಬರೀಶ್ ನಂತಹ ಹಿರಿಯ ನಟಿಯೊಂದಿಗೆ ಸಿನೆಮಾ ಸ್ಕ್ರೀನ್ ನನ್ನು ಹಂಚಿಕೊಂಡು ಕ್ಲಾಸ್ ಗೂ ಸೈ ಮಾಸ್ ಗೂ ಜೈ ಎಂಬರ್ಥದಲ್ಲಿ ತೊಡಗಿಕೊಂಡದ್ದು ಕಾಣಬಹುದು.

ಇದರೊಂದಿಗೆ ಇತ್ತೀಚೆಗೆ ತೆರೆಕಂಡ ಕೋಟಿಗೊಬ್ಬ 3ರಲ್ಲಿ ಅತಿಥಿ ಪಾತ್ರದಲ್ಲಿ ಐಟಂ ಡ್ಯಾನ್ಸ್ ನಲ್ಲಿ ಪಟಾಕಿ ಪೊರಿಯಾಗಿ ಮಿಂಚಿದ್ದು ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದಾಗಿತ್ತು.

 

View this post on Instagram

 

A post shared by Ashika Ranganath (@ashika_rangnath)

ಇದರೊಂದಿಗೆ ಹಾಸ್ಯನಟ ಚರಣ್ ರೊಂದಿಗೆ 2ನೇ ಬಾರಿ ಅವತಾರ್ ಪುರುಷ ಚಿತ್ರದಲ್ಲು ಕಾಣಿಸಲಿದ್ದಾರೆ. 25ರ ಈ ಬೆಡಗಿ ಇದೀಗ ಶ್ರೀ ಮುರುಳಿ ಅಭಿನಯದ ಮದಗಜ, ರೆಮೊ, ರಂಗಮಂದಿರ ಇನ್ನೂ ಅನೇಕ ಸಿನೆಮಾಗಳ ಸುರಿಮಳೆ ನಡುವೆ ಬ್ಯೂಸಿಆಗಿಬಿಟ್ಟಿದ್ದಾರೆ. ಈ ನಡುವೆ ಭಾರತೀಯ ಇತರ ಚಿತ್ರ ತಂಡಗಳೂ ಒಂದರಮೆಲೊಂದರಂತೆ ಆಫರ್ ಗಳನ್ನು ನೀಡುತ್ತಿದೆ.

See also  ಕಾಸರ್‌ಗೋಡ್: ಅಕ್ರಮ ಶ್ರೀಗಂಧದ ವ್ಯಾಪಾರದಲ್ಲಿ ಪ್ರಮುಖ ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ

ಸದ್ಯ ತಮಿಳಿನ ಕಾಲಿವುಡ್ ನಲ್ಲಿ ತೆರೆಕಾಣಬೇಕಾದ ಸ್ಪೋರ್ಟ್ಸ್ ಜಾನರ್ ನಲ್ಲಿ ಕನ್ನಡದ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ ಅಥರ್ವ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

ಗ್ರಾಮೀಣ ಭಾಗದಕ್ರೀಡೆಯೂ ಈ ಚಿತ್ರದ ಕಥಾವಸ್ತುವಾಗಿದ್ದು ಇದರಲ್ಲಿ ಆಶಿಕಾ ಅವರು ಖಡಕ್ ಹಳ್ಳಿ ಹುಡುಗಿ ಪಾತ್ರದಲ್ಲಿ ಭರ್ಜರಿ ಎಂಟ್ರಿ ಸಿಗೊ ಸಾಧ್ಯತೆ ಇದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ನಟಿಯರು ಪರಭಾಷೆಯಲ್ಲಿ ಮಿಂಚಿ ಕನ್ನಡ ಚಿತ್ರರಂಗದಿಂದ ಮರೆಯಾಗುತ್ತಿದ್ದಾರೆ ಆ ಸಾಲಿನಲ್ಲಿ ಆಶಿಕಾ ಬರದಿರುವ ಸಾಧ್ಯತೆ ಹೆಚ್ಚಿದೆ ಯಾಕೆಂದರೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಪರಭಾಷೆಯಲ್ಲಿ ನಟಿಸುವ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುವುದರೊಂದಿಗೆ ಅದರ ಜೊತೆ ಕನ್ನಡದ ಉತ್ತಮ ಕಥೆ ಬಂದರೆ ಅದಕ್ಕೆ ಮೊದಲ ಆಧ್ಯತೆ ನೀಡುವುದಾಗಿ ತಿಳಿಸಿದ್ದು ಆಶಿಕಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದರೊಂದಿಗೆ ಇನ್ನು ಮುಂದಿನ ಸಿನೆಮಾಗಳನ್ನು ರಾಕಿಂಗ್ ಸ್ಟಾರ್ ಯಶ್(Rocking star Yash), ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan), ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನೂ ಅನೇಕರೊಂದಿಗೆ ಅಭಿನಯಿಸಿ ಸಿನಿ ಪ್ರಿಯರಿಗೆ ಮನೊರಂಜನೆ ನೀಡುವ ಕನಸು ಹೊತ್ತಿದ್ದಾರೆ.

Ashika Ranganath Age, Date of Birth, Height, Weight

  • ತುಮಕೂರು, ಹಾಸನ ಮೂಲದವರಾಗಿದ್ದು ಕನ್ನಡ ನಿರರ್ಗಳ ವಾಗಿ ಮಾತನಾಡಲು ಇವರಿಗೆ ತುಂಬಾನೇ ಇಷ್ಟವಂತೆ. 1996ರ ಅಗಸ್ಟ್ 5 ರಂದು ಹಾಸನದಲ್ಲಿ ಜನಿಸಿದರು.
  • ಇವರ ಎತ್ತರ 5.5 ಅಡಿ, ತೂಕ 54 ಕೆಜಿ.

 

View this post on Instagram

 

A post shared by Ashika Ranganath (@ashika_rangnath)

Ashika Ranganath Father name and Profession

ತಂದೆ ಪ್ರಖ್ಯಾತ ಸಿವಿಲ್ ಗುತ್ತಿಗೆದಾರು ಎನ್ ರಂಗನಾಥ್ ರವರಾಗಿದ್ದು N. Ranganath ಇವರು ಹುಟ್ಟಿದ್ದು, ಶೈಕ್ಷಣಿಕ ಚಟುವಟಿಕೆಗಳೆಲ್ಲ ತುಮಕೂರು ಮತ್ತು ಬೆಂಗಳೂರಿನಲ್ಲಿಯೇ. ತಾಯಿ ಸುಧಾರಂಗನಾಥ್ Sudha Ranganath ನಟನಾ ಕ್ಷೇತ್ರದಲ್ಲಿ ರಾಜು ಕನ್ನಡ ಮಿಡಿಯಂ, ಮಾಸ್ ಲೀಡರ್, ಮುಗುಳುನಗೆ ಚಲನಚಿತ್ರದಲ್ಲಿ ಸಣ್ಣ ಪುಟ್ಟ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರ ಜೊತೆಗೆ ಮಗಳಿಗೆ ಬೇಕಾದ ಸಲಹೆ ನೀಡುವಲ್ಲಿ ಇವರು ಸಧಾ ಜೊತೆಯಾಗಿದ್ದಾರೆ.

Ashika Ranganath Sister

ಇನ್ನು ಇವರ ಅಕ್ಕ ಅನುಷಾ ರಂಗನಾಥ್ Anusha Ranganath ಕೂಡ ನಟಿಯಾಗಿದ್ದು ಈ ಇಬ್ಬರು ಬೆಡಗಿಯರು ಅವರ ಕುಟುಂಬದ ಕೀರ್ತಿ ಕಳಶವೆಂಬ ಹೆಗ್ಗಳಿಕೆ ಅವರ ಪೋಷಕರಲ್ಲಿದೆ.

 

View this post on Instagram

 

A post shared by Anusha Ranganath (@anusha.ranganath_)

Ashika Ranganath Kannada actor

ಆಕೆಯ ತಾತ ನಾರಾಯಣ ಗೌಡ ಅವರು ನಟನಾ ಕ್ಷೇತ್ರದಲ್ಲಿ ಇರಬೇಕೆಂಬ ಆಸೆ ಹೊತ್ತವರು.‌ ಆದರೆ ಹಿಂದಿನ ಕಾಲದಲ್ಲಿ ಸಿನೆಮಾ ಕ್ಷೇತ್ರಕ್ಕೆ ಜಿಗಿಯಲು ಪ್ರೋತ್ಸಾಹವಿರದ ಕಾರಣ ಚಲನಚಿತ್ರ ನಿರ್ಮಾಪಕರಾಗಿ ಬಹು ಖ್ಯಾತಿಯನ್ನು ಪಡೆದರು ಮತ್ತು ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಅವರ ಜೊತೆ ಪೊಷಕ ಪಾತ್ರವೊಂದೆಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಆಶಿಕಾ ಅವರು ಬಹುತೇಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತುಮಕೂರಿನಲ್ಲಿ.ಬಳಿಕ ಪಿಯು ಶಿಕ್ಷಣವನ್ನು ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿಮಾಡಿದರಯ.

ನಟನೆ ಮತ್ತು ನೃತ್ಯ ಎರಡು ಇವರ ಅಚ್ಚುಮೆಚ್ಚಾಗಿದ್ದು ಕಾಲೇಜು ಶಿಕ್ಷಣದ ಅವಧಿಯಲ್ಲಿ ನೃತ್ಯ ತರಬೇತಿಗೂ ಸೇರಿದ್ದು ಇವರ ಸಿನಿ ಬದುಕಿಗೂ ಪ್ರೇರಣೆಯಾಯಿತು.

ಶೈಕ್ಷಣಿಕ ಕಾರ್ಯ ಚಟುವಟಿಕೆ ಜೊತೆ ಪಠ್ಯೇತರದಲ್ಲಿ ಸಕ್ರಿಯರಾಗಿ ಸಾರ್ವಜನಿಕ ರಂಗದಲ್ಲಿ ಗುರುತಿಸಲ್ಪಟ್ಟರು. ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿಇದ್ದ ಇವರು ಬೆಂಗಳೂರಿನ ಪ್ರಖ್ಯಾತ ಪ್ರೇಶ್ ಫೇಸ್ ಬೆಂಗಳೂರು ಎನ್ನುವ ಸ್ಪರ್ಧೆ ಮೂಲಕ ಕ್ರೇಜಿ ಬಾಯ್ ಚಿತ್ರತಂಡಕ್ಕೆ ಆಯ್ಕೆಯಾಗಿ ಈ ಮೂಲಕ ಫ್ರೇಶ್ ಫೇಸ್ ಒಂದು ಸ್ಯಾಂಡಲ್ ವುಡ್ ಸಿನೆಮಾ ಕೆರಿಯರ್ ಗೆ ಕಾಲಿಟ್ಟಿತು.

See also  ಮಧೂರು ಶ್ರೀ ಕ್ಷೇತ್ರದ ಅರ್ಚಕರಾಗಿದ್ದ ವೆಂಕಟಕೃಷ್ಣ ಕಲ್ಲೂರಾಯ ವಿಧಿವಶ!

ಅನಂತರ 2014ರಲ್ಲಿ ಮಿಸ್ ಫ್ರೇಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ರನರ್ ಅಪ್ ಆಗಿ ಸಾಮಾಜಿಕ ಜಾಲತಾಣದಲ್ಲೂ ಮನೆಮಾತಾದರು. ಬೆಂಗಳೂರಿನ ಎಂಇಎಸ್ ಕಾಲೇಜಿನ ಪದವಿಧರರಾದ ಇವರು ಇಲ್ಲಿಯೂ ನೃತ್ಯ ಕಲಿಕೆಗೆ ಹೆಚ್ಚಿನ ಆಧ್ಯತೆ ನೀಡಿದರು.

ಫ್ರೀ ಸ್ಟೈಲ್, ಬೆಲ್ಲಿ, ಹಿಪ್ ಹಾಪ್, ವೆಸ್ಟರ್ನ್, ಬಾಲಿವುಡ್ ನ ವಿವಿಧ ನೃತ್ಯ ಪ್ರಕಾರವನ್ನು ಕಲಿತು ರಿಯಾಲಿಟಿ ಶೋನಲ್ಲಿಯೂ ಮಾನ್ಯತೆ ಪಡೆದರು. ಸಿನೆಮಾ ಕೆರಿಯರ್ ಜೊತೆ ಪ್ರವಾಸಕ್ಕೆ ತೆರಳುವುದೆಂದರೆ ಆಶಿಕಾಗೆ ಅಚ್ಚು ಮೆಚ್ಚಂತೆ.

ವಿದೇಶಿ ಸ್ಥಳದಲ್ಲಿ ಶೂಟಿಂಗ್ ಫ್ರೀ ಶಡ್ಯೂಲ್ ನಲ್ಲಿ ಅಕ್ಕ ಪಕ್ಕದ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದರು.

Ashika Ranganath Instagram

ಇತ್ತೀಚೆಗೆ ಸ್ವಿಟ್ಜರ್ಲೆಂಡ್‌‌ಗೆ ಹೋದ ತಮ್ಮ ಪ್ರವಾಸಿ ಪ್ರಿಯತೆ ಕುರಿತು ಇನ್ಸ್ಟ್ರಗ್ರಾಂ ನಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದು ಬಹುತೇಕ ಅಭಿಮಾನಿಗಳು ಮನಸೊರೆಗೊಂಡಿದ್ದಾರೆ.

ಇನ್ನೂ ಕರ್ನಾಟಕದ ಚಿಕ್ಕಮಗಳೂರು ಮತ್ತು ಕೊಡಗು ಇವರ ನೆಚ್ಚಿನ ಪ್ರವಾಸಿತಾಣವಾಗಿದ್ದು ಸಿನೆಮಾ ಶೋಟಿಂಗ್ ಬ್ಯೂಸಿ ನಡುವೆ ಮೈಂಡ್ ಫ್ರೆಶ್ ಆಗಲು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ.

 

View this post on Instagram

 

A post shared by Ashika Ranganath (@ashika_rangnath)

ಅವರ ಆಸಕ್ತಿ ಕ್ಷೇತ್ರವಾದ ಮಾಡಲಿಂಗ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡುತ್ತಿದ್ದಾರೆ.

ಅದರ ಜತೆ ದೇಶಿಯ ಸೊಬಗಿ ಕೃಷಿಯನ್ನು ಮೆಚ್ಚಿ ತಮ್ಮ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಕುರಿತು ವೀಡಿಯೋ ಒಂದು ಭಾರಿ ವೈರಲ್ ಆಗಿದ್ದು ಇತ್ತೀಚೆಗೆ ಸಿನೆಮಾ ತಾರೆಯರು ಕೃಷಿ ಬದ್ಧ ಸಾಂಪ್ರದಾಯಿಕ ಹಳ್ಳಿ ಜೀವನ ಶೈಲಿಗೆ ಮಾರುಹೋದವರ ಪಟ್ಡಿಯಲ್ಲಿ ಕಾಣಬಹುದು.

 

View this post on Instagram

 

A post shared by Ashika Ranganath (@ashika_rangnath)

ಉಳಿದಂತೆ ಫಿಟ್ನೆಸ್ ಗಾಗಿ ಜಿಮ್,ಯೋಗ, ಧಾನ್ಯಕ್ಕೆ ಹೆಚ್ಚಿನ ಆಧ್ಯತೆಯನ್ನು ಇವರು ನೀಡುತ್ತಿದ್ದಾರೆ. ಅವರ ಫಿಟ್ ನೆಸ್ ಚ್ಯಾಂಲೇಜ್ ಅನ್ನು ಸಹ ಇನ್ಟ್ರಗ್ರಾಂ ನಲ್ಲಿ ಅಪ್ಲೋಡ್ ಮಾಡುತ್ತಿದ್ದು ಇವರಿಗೆ 1.3 ಮಿಲಿಯನ್ ಫ್ಯಾನ್ಸ್ Instagram Followers ಫಾಲೋವರ್ಸ್ ಇನ್ಸ್ಟ್ರಾ ಗ್ರಾಂ ನಲ್ಲಿದ್ದು ಸಿಕ್ಕಾಪಟ್ಟೆ ಲೈಕ್ ಕಾಮೆಂಟ್ ಬಂದಿರುವುದನ್ನು ಕಾಣಬಹುದು. ಅಷ್ಟುಮಾತ್ರವಲ್ಲದೆ ಇನ್ಸ್ಟ್ರಾಗ್ರಾಂ ಆ್ಯಪ್ ಇವರ ಫೇವರೇಟ್.

Ashika Ranganath Diet, Food Habits and Life Style

ಇನ್ನು ಗೇಮ್ ಆ್ಯಪ್ ನಲ್ಲಿ ಪಬ್ಜಿ ಮತ್ತು ರಮ್ಮಿ ಆಡಲು ಇಷ್ಟ ಆದರೆ ತುಂಬಾ ಮೊಬೈಲ್ ಅಡಿಕ್ಷನ್ ನನ್ನು ಅವರು ಇಷ್ಟಪಡಲಾರರು. ನೋಡಲು ಸ್ಲಿಮ್ ಮತ್ತು ಫಿಟ್ ಆಗಿ ಕಾಣೊ‌ ಇವರು ಜಂಕ್ ಫುಡ್ ಸ್ವಲ್ಪ ಇಷ್ಟವಾದರೂ ಆರೋಗ್ಯ ದೃಷ್ಟಿಯಿಂದ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ದೇಹಕ್ಕೆ ಅನಗತ್ಯ ಕೊಬ್ಬಿನಾಂಶವನ್ನು ನೀಡಿ ಡಯಟ್ ಮಾಡುವುದಕ್ಕಿಂತಲೂ ಆರೋಗ್ಯಪೂರ್ಣ ಪೌಷ್ಟಿಕ ನೈಸರ್ಗಿಕ ಆಹಾರ ಸೇವಿಸುವುದು ಉತ್ತಮವೆಂಬ ಸಲಹೆಯನ್ನು ಅಭಿಮಾನಿಗಳಿಗೆ ಆಶಿಕಾ ನೀಡುತ್ತಾರೆ. ಅಷ್ಟು ಮಾತ್ರವಲ್ಲದೇ ಅವರು ಸೇವಿಸುವ ಆಹಾರ ಪದಾರ್ಥಗಳನ್ನು ಗ್ರಾಂ ಲೆಕ್ಕದಲ್ಲಿ ಅಂದರೆ ಹೆಚ್ಚು ಆಗಬಾರದು ದೇಹ ಸಮತೋಲನ ಸ್ಥಿತಿ ಇರಿಸಬೇಕೆಂದು ಸೇವಿಸುತ್ತಾರೆ.

ಹಾಗೆಂದು ಇವರು ಶುದ್ಧ ಸಸ್ಯಹಾರಿಯಲ್ಲ. ಮಾಂಸ ಭಕ್ಷ್ಯ ಆಶಿಕಾರ ಅಚ್ಚು ಮೆಚ್ಚಾದರು ಸಿನೆಮಾ ಕೆರಿಯರ್ ಗೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಪತ್ಯೆ ಮಾಡುತ್ತಾರಂತೆ.

ರೋಡ್ ಸೈಡ್ ತಿಂಡಿಗಳನ್ನು ಇಷ್ಟ ಪಡುವ ಆಶಿಕಾಗೆ ಮಳೆಯೊಂದಿಗೆ ಪಾನಿಪುರಿ ಸವಿಯೊದೆ ಒಂದು ಖುಷಿ. ಇದರೊಂದಿಗೆ ಚೆನ್ನಾಗಿ ಅಡುಗೆ ಮಾಡುವುದು ಸಹ ಇವರ ಹವ್ಯಾಸದಲ್ಲೊಂದು.

Skin Care Routine

ಚರ್ಮದ ಕಾಂತಿ‌ಹೆಚ್ಚಲು ಹಣ್ಣು, ಮೊಳಕೆ ಕಾಳು, ಹಸಿ ಶುದ್ಧ ತರಕಾರಿ ಸೇವನೆ ಉತ್ತಮ ಇದರೊಂದಿಗೆ ವರ್ಕ್ ಔಟ್ ಕೂಡ ಮಾಡುವುದು ಇವರ ದೇಹದ ಫಿಟ್ನೆಸ್ ಗುಟ್ಟಂತೆ.

ಇನ್ನು ಮೇಕಪ್ ವಿಚಾರಕ್ಕೆ ಬಂದರೆ ವೇದಿಕೆ ಕಾರ್ಯಕ್ರಮ ಸಿನೆಮಾ ಶೂಟಿಂಗ್, ಸಂದರ್ಶನ ಸಂದರ್ಭದಲ್ಲಿ ಲೈಟ್ ಮೇಕಪ್ ಗೆ ಆಧ್ಯತೆ ನೀಡುತ್ತಿದ್ದಾರೆ.

ಅದಕ್ಕಿಂತಲೂ ಮಿಗಿಲಾಗಿ ನ್ಯಾಚುರಲ್ ಬ್ಯುಟಿನೇ ಉತ್ತಮ ಎಂಬ ಅಭಿಪ್ರಾಯ ಆಶಿಕಾರದ್ದು. ಇನ್ನು ಸಿನೆಮಾ ಕೆರಿಯರ್ ಬಗ್ಗೆ ಚಿಂತನೆಯಲ್ಲಿರುವ ಇವರು ವಿಭಿನ್ನ ಪಾತ್ರ ನಿರ್ವಹಿಸುವುದು ಅಚ್ಚು ಮೆಚ್ಚಂತೆ.

See also  ಸ್ವರ್ಣ ನದಿ ಸೇತುವೆಯ ಬಳಿ ಕೃಷ್ಣ ವಿಗ್ರಹ ಪತ್ತೆ!!

ಇನ್ನು ಚಲನಚಿತ್ರದಲ್ಲಿ ನಿಮಗೆ ಕ್ಲಾಸಿಕ್ ಸಾಂಪ್ರದಾಯಿಕ ಶೈಲಿ ಮತ್ತು ಮಾಡರ್ನ್ ಲುಕ್ ಇಷ್ಟವೋ ಎಂದರೆ ಎರಡು ಇಷ್ಟವೆನ್ನುತ್ತಾರೆ. ಆದರೂ ಹೆಚ್ಚಾಗಿ ಅವರು ಕಾಣಿಸಿದ್ದು ಗ್ಲಾಮರಸ್ ಮಾಡರ್ನ್ ಲುಕ್ನಲ್ಲಿಯೇ.

ಕತೆಯ ಆಯ್ಕೆಯಲ್ಲಿ ಆ ಪಾತ್ರಕ್ಕೆ ತಾನು ಹೊಂದುವ ವಿಶ್ವಾಸ ವಿದ್ದಾಗ ಮಾತ್ರವೇ ಸ್ಕ್ರಿಪ್ಟ್ ಒಕೆ ಎನ್ನುತ್ತಾರೆ ಆಶಿಕಾ.

ಓರ್ವ ನಟಿಯಾಗಿ ಆಕೆಯ ಮೆಚ್ಚಿನ ನಟಿಯೆಂದು ಕನ್ನಡದಲ್ಲಿ ಹಿರಿಯ ನಟಿ ಲಕ್ಷ್ಮೀ ಮತ್ತು ಮೋಹಕ ತಾರೆ ರಮ್ಯಾರನ್ನು, ತಮಿಳಿನಲ್ಲಿ ಸಮಂತಾರನ್ನು, ಸಿನೆಮಾ ಇಂಡಸ್ಟ್ರೀಯ ಕ್ರಶ್ ಎಂದು ತಮಿಳಿನ ಸಿದ್ಧಾರ್ಥ್ ಅವರನ್ನು ಹಾಗೂ ಡ್ಯಾನ್ಸ್ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇವರ ಫೇವರೆಟ್ ಅನ್ನುತಾರೆ ಆಶಿಕಾ.

College Life

ಆಶಿಕಾ ರಂಗನಾಥ್ ರಂತೆಯೇ ಅವರ ಅಕ್ಕ ಕೂಡ ಓರ್ವ ಕಿರುತೆರೆ ಮತ್ತು ಹಿರಿತೆರೆಯ ನಟಿ. ಇವರ ಅಕ್ಕ ಅನುಷಾ ರಂಗನಾಥ್ ಅವರು ಗೋಕುಲದಲ್ಲಿ ಸೀತೆ ಎಂಬ ಧಾರವಾಹಿಯಲ್ಲು ನಾಯಕಿಯಾಗಿ ಅಭಿನಯಿಸಿ ಬಳಿಕ ಸೋಡಾಬುಡ್ಡಿ ಚಿತ್ರದಲ್ಲಿ ನಾಯಕಿಯಾಗಿ ಏನೊ ಕಣ್ಣಲ್ಲೇ ಶುರುವಾಗಿದೆ ಹೋಸ ಲೋಕವಿದು ಏನೊ ಎಂಬ ಸೂಪರ್ ಫಾಸ್ಟ್ ಸಾಂಗ್ ಗೆ ತಂಗಿಯ ವೇಸ್ಟರ್ನ್ ಶೈಲಿಯಲ್ಲಿ ಹೆಜ್ಜೆ ಇಟ್ಟು ಅನುಷಾ ಕೂಡ ಸೈ ಎನಿಸಿದ್ದಾರೆ.

ಈ ಇಬ್ಬರ ನಡುವೆ 3 ವರ್ಷದ ಅಂತರವಿದ್ದು ಕಾಲೇಜು ಮತ್ತು ಪ್ರೌಢ ಶಿಕ್ಷಣದ ಅವಧಿಯಲ್ಲಿ ಆಶಿಕಾ ಮತ್ತು ಅನುಷಾ ಇಬ್ಬರು ರೂಂಮೆಟ್ಸ್ ಆಗಿದ್ದು ಅವರು ತಮ್ಮ ಅಕ್ಕನನ್ನು ಪ್ರೀತಿಯಿಂದ ಚಿನ್ನು ಎಂದು ಕರೆಯುತ್ತಾರೆ.

ಕೆಲಸ ಇನ್ನಿತರ ಚಟುವಟಿಕೆ ಚಿಕ್ಕಂದಿನಿಂದಲೂ ಮಾಡಿ ರೂಢಿ ಇದೆಯಂತೆ.

ಅಮ್ಮನ ಮುದ್ದು ಮಕ್ಕಳಿಬ್ಬರಿಗೂ ಸಲುಗೆಯೂ ಜಾಸ್ತಿ ಪ್ರೀತಿಯೂ ಜಾಸ್ತಿನೆ ಅದೇ ರೀತಿ ಮನೆ ಕೆಲಸದ ವಿಚಾರದಲ್ಲಿ ಟಾಮ್ ಆ್ಯಂಡ್ ಜರಿ ತರ ಆಡುತ್ತೇವೆ ಈಗೀಗ ಸ್ವಲ್ಪ ಕಡಿಮೆಯಾಗಿದೆ ಎಂದು ಸಂದರ್ಶನವೊಂದರಲ್ಲಿ ಅಕ್ಕನ ಜೊತೆಗಿನ ಅನುಬಂಧವನ್ನು ಹಂಚಿಕೊಂಡಿದ್ದಾರೆ.

ಹುಟ್ಟಿನಿಂದ ಅನ್ವಿತಾ, ಅಂಕಿತಾ, ಸುಚಿತ್ರಾ, ಸಂಸ್ಕ್ರತಿ ಹಾಗೂ ತೇಜಸ್ವಿ ನಿ ಅವರು ಇವರ ನೆಚ್ಚಿನ ಸ್ನೇಹಿತೆಯರು.

Ashika Rangnath

ಆಶಿಕಾ ಅವರಿಗೆ ಯಾವಾಗಲೂ ಕ್ರಿಯೇಟಿವ್ ಆಗಿ ಜೀವಿಸೊದು ತುಂಬಾ ಇಷ್ಟ. ಹೊಸದನ್ನು ಕಲಿಬೇಕು ಅನ್ನೊ ಈ ಬೆಡಗಿಗೆ ಮೊಬೈಲ್ ಬಳಸುವುದು ಸ್ವಲ್ಪ ದೂರವಂತೆ.

ಏನಿದ್ದರು ಸಹಜ ಪ್ರಕೃತಿ ಸವಿಯೊದು, ಅಡುಗೆ ಮಾಡುವುದು, ಗಾರ್ಡನಿಂಗ್, ನೃತ್ಯ ಸಂಗೀತಾ ಕೇಳುವುದು ಮತ್ತು ಹಾಡುವುದು ಇತ್ಯಾದಿ ಸೃಜನ ಶೀಲ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಇವರ ಅಚ್ಚು ಮೆಚ್ಚು.

ಅದರೊಂದಿಗೆ ನಿದ್ದೆ ಎಂದರೆ ತುಂಬಾ ಇಷ್ಟ ಪಡುವ ಆಶಿಕಾ ಪಿನ್ ಡ್ರಾಪ್ ಸೈಲೆಂಟ್ ಮತ್ತು ಕಗ್ಗತ್ತಲಲ್ಲಿ ನಿದ್ದೆ ಮಾಡುವುದನ್ನು ಇಷ್ಟ ಪಡುತ್ತಾರೆ.

Ashika Ranganath Fitness Secret

ಆಶಿಕಾ ಫಿಟ್ನೆಸ್ ಸಿಕ್ರೆಟ್ ಏನು

  • ವಾರದಲ್ಲಿ ನಾಲ್ಕುದಿನ ವರ್ಕ್ಔಟ್ ಮಾಡುವುದು.
  • ಮಾನಸಿಕ ಸಮತೋಲನ ಕಾಯ್ದಿರಿಸಲು ಯೋಗ.
  • ಸುಂದರ ಸ್ಲಿಮ್ ದೇಹಕ್ಕಾಗಿ ಸ್ವಿಮಿಂಗ್ (ಈಜು).
  • ತ್ವಚೆಯ ಕಾಂತಿ ಹೆಚ್ಚಲು ನಿತ್ಯ 3ಲೀ ನೀರಿನ ಸೇವನೆ ಮಾಡುತ್ತಾರೆ.
  • ದೇಹವನ್ನು ಸಮತೋಲನದಲ್ಲಿಟ್ಟು ಪ್ರೋಟಿನ್ ಒದಗಿಸಲು ಇಚ್ಛಿಸುವ ಆಶಿಕಾ ಬೆಳಗ್ಗೆ ಮೊಟ್ಟೆಯ ಬಿಳಿಭಾಗ ಮತ್ತು ಹಣ್ಣಿನ ಜ್ಯೂಸ್ ನ್ಯಾಚುರಲ್ ಆಗಿ ಇರವುದನ್ನೇ ಇಷ್ಟಪಡುತ್ತಾರೆ.
  • ಕೂದಲ ಆರೈಕೆ ದೃಷ್ಟಿಯಿಂದ ಅದರ ಪೋಷಣೆಗೆ ತೆಂಗಿನ ಎಣ್ಣೆ ಮಸಾಜ್ ಅನ್ನು ವಾರದಲ್ಲಿ ಮೂರು ಬಾರಿ ಮಾಡುತ್ತಾರೆ.
ಧನಾತ್ಮಕ ಚಿಂತನೆ (ಪಾಸಿಟಿವಿಟಿ)
ಪ್ರತಿಯೊಬ್ಬರ ಜೀವನದಲ್ಲಿ ಧನಾತ್ಮಕ ಚಿಂತನೆ ಅತೀ ಅಗತ್ಯ. ಹಾಗೆಂದು ಹೇಳುವುದು ಸುಲಭ ಪಾಸಿಟಿವ್ ಆಗಿ ಇರುವುದೇ ಒಂದು ಸವಾಲಿದ್ದಂತೆ.
ಇಂತಹ ಪಾಸಿಟಿವಿಟಿ ಎಲ್ಲರೂ ಒಗ್ಗೂಡಿಸಿಕೊಳ್ಳ ಬೇಕು. ನಮದಲ್ಲದ ಸಮಸ್ಯೆ, ಅನಗತ್ಯ ಚಿಂತನೆ ಇತ್ಯಾದಿಗಳು ನಮ್ಮ ಧನಾತ್ಮಕ ಚಿಂತನೆಯನ್ನು ಬದಿಗೊತ್ತುತ್ತವೇ ಅದಕ್ಕಾಗಿ ಋಣಾತ್ಮಕ ಚಿಂತನೆಯನ್ನು ಗಮನದಲ್ಲಿರಿಸಿ ಧನಾತ್ಮಕ ಚಿಂತನೆಯ ಈಡೇರಿಕೆಗೆ ನಮ್ಮ ಸಮಯ ಸದುಪಯೋಗಿಸಬೇಕೆಂಬುದು ಆಶಿಕಾ ರಂಗನಾಥ್ ಅವರ ನಿಲುವಾಗಿದೆ.
ಸದ್ಯಕ್ಕೆ ಮದುವೆ ಆಲೋಚನೆಯಿಂದ ದೂರಾನೇ ಉಳಿದಿದ್ದು ಇನ್ನಷ್ಟು ಸಿನಿ ಕೆರಿಯರ್ ಅನ್ನು ಮುಂದುವರೆಸುವತ್ತ ಗಮನಹರಿಸುತ್ತಿದ್ದಾರೆ.
-ಚಿನ್ಮಯಿರಾಧೆ

LEAVE A REPLY

Please enter your comment!
Please enter your name here