ಹಿರಿಯಡ್ಕ : ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ ಕಾರು!

0
ಹಿರಿಯಡ್ಕ : ಉಡುಪಿ ಜಿಲ್ಲೆಯ ಕೊಂಡಾಡಿ ಭಜನೆ ಕಟ್ಟೆ ಬಳಿ ಕಾರಿನ ಚಾಲಕ ನಿಯಂತ್ರಣ ತಪ್ಪಿ ಕಾರೊಂದು ಮನೆಗೆ ಡಿಕ್ಕಿ ಹೊಡೆದು ಮನೆಯ ತೊಟ್ಟಲಿನಲ್ಲಿದ್ದ ಮಗ ಅದೃಷ್ಟವಶಾತ್ ಪರಾದ ಘಟನೆ ಇಂದು ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಸಾಧು ಶಟ್ಟಿಯವರ ಮಗ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹುಂಡೈ ಐ ಟ್ವೆಂಟಿ ಕಾರಿನಲ್ಲಿ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಕೊಂಡಾಡಿ ಪುತ್ತು ನಾಯಕ್ ಅವರ ಮನೆಗೆ‌ ಕಾರು ಡಿಕ್ಕಿ ಹೊಡೆದಿದೆ.ಮನೆಯ ತೊಟ್ಟಲಿನಲ್ಲಿ ಪುತ್ತು ನಾಯಕ್ ಅವರ ಮೊಮ್ಮಗು‌ ಇತ್ತು ಎನ್ನಲಾಗಿದೆ.ಮಗು‌ ಅಪಾಯದಿಂದ ಪಾರಾಗಿದೆ‌ ಎಂದು ತಿಳಿದು ಬಂದಿದೆ. ಮನೆಗೆ‌ ಹಾನಿ ಉಂಟಾಗಿದೆ‌ ಎಂದು ತಿಳಿದು ಬಂದಿದೆ.
 ಹಿರಿಯಡ್ಕ ಪೊಲೀಸರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

See also  Basavanna Vachana in Kannada - ಕನ್ನಡದಲ್ಲಿ ಬಸವಣ್ಣನ ವಚನಗಳು

LEAVE A REPLY

Please enter your comment!
Please enter your name here