ಮಂಗಳೂರು, ಆಗಸ್ಟ್ 20: ನಗರದ ಕೆಪಿಟಿ ಬಳಿ ಗುರುವಾರ ಸಂಭವಿಸಿದ ಆಘಾತಕಾರಿ ಘಟನೆಯಲ್ಲಿ,ವೇಗವಾಗಿ ಬಂದ ಕಾರು ಲಾರಿ ಮತ್ತು ಇನ್ನೊಂದು ಕಾರಿಗೆ ಮೂರು ರೀತಿಯಲ್ಲಿ ಡಿಕ್ಕಿ ಹೊಡೆದಿದೆ. ಈ ಕಾರು ಕೆಪಿಟಿಯಿಂದ ಕುಂಟಿಕಾನಕ್ಕೆ ಪ್ರಯಾಣಿಸುತ್ತಿದ್ದು, ಅಗತ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಹೋಗುತಿತ್ತು ಎಂದು ಹೇಳಲಾಗಿದೆ.
ಅತಿಯಾದ ವೇಗದಿಂದಾಗಿ ಕಾರು ಡಿವೈಡರ್‌ಗೆ ನುಗ್ಗಿ, ಲಾರಿಯೊಂದಕ್ಕೆ ಮತ್ತು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ
ಅಪಘಾತಕ್ಕೀಡಾದ ಕಾರುಗಳಲ್ಲಿ ಒಂದಾದ ಜೊಸ್ಸಿ ವಿನ್ಸೆಂಟ್ ಪಿಂಟೊಗೆ ಸೇರಿದ್ದು, ಅವರು ಜಿಲ್ಲಾ ಪಂಚಾಯತ್‌ನಿಂದ ಪಚನಾಡಿಗೆ ಹೋಗುತ್ತಿದ್ದರು.
ಈ ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ – ಪಚನಾಡಿಯ ಜೋಸ್ಸಿ ವಿನ್ಸೆಂಟ್ ಪಿಂಟೊ, ಕಾಟಿಪಲ್ಲಾದ ಮಜೆನ್ ಮನ್ಸೂರ್ ಮತ್ತು ಅಹ್ಮದ್ ಮತ್ತು ಲಾರಿಯ ಚಾಲಕ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.