ಸಿಇಟಿ ಫಲಿತಾಂಶ ಪ್ರಕಟ : COVID-19 ಹೊಂದಿರುವ ವಿದ್ಯಾರ್ಥಿ ಉತ್ತಮ ರ‍್ಯಾಂಕ್‌!!

0


ಪರೀಕ್ಷೆಯ ಕೇವಲ 21 ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) 2020 ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ವರ್ಷ 1.53 ಲಕ್ಷ (1,53,470) ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟುಗಳಿಗೆ ಅರ್ಹತೆ ಪಡೆದಿದ್ದಾರೆ.

ಕೃಷಿ- 1,27,627, ಪಶುವೈದ್ಯ ವಿಜ್ಞಾನ- 1,29,666, ಆಯುಷ್- 1,29,611, ಫಾರ್ಮಾ- 1,55,552 ಅರ್ಹತೆ ಪಡೆದ ವಿದ್ಯಾರ್ಥಿಗಳು.

ಇಂಜಿನಿಯರಿಂಗ್ ನಲ್ಲಿ ಬೆಂಗಳೂರಿನ ರಕ್ಷಿತ್ ಎಂ ಮೊದಲ ರ‍್ಯಾಂಕ್ ಪಡೆದಿದ್ದರೆ, ಬಿಎಸ್ ಸಿ ಅಗ್ರಿಕಲ್ಚರ್ ನಲ್ಲಿ ಮಂಗಳೂರಿನ ವರುಣ್ ಗೌಡ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಸಾಯಿ ವಿವೇಕ್ ಪಿ ಅವರು ಬಿವಿಎಸ್ ಸಿ ಮತ್ತು ಬಿ ಫಾರ್ಮಾ / ಫಾರ್ಮಾ ಡಿ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಕೊಡಗು ಶೇ 94.73 ರಷ್ಟು ಉತ್ತೀರ್ಣರಾಗಿದ್ದಾರೆ. ವಿಜಯಪುರ ಶೇ 82.98 ರಷ್ಟು ಉತ್ತೀರ್ಣರಾಗಿ ಕಡಿಮೆ ಅಂಕ ಗಳಿಸಿದ್ದಾರೆ

COVID-19 ಹೊಂದಿರುವ ವಿದ್ಯಾರ್ಥಿ ಉತ್ತಮ ರ‍್ಯಾಂಕ್‌

“ಲಕ್ಷಣರಹಿತ ಮತ್ತು COVID-19 ಪಾಸಿಟಿವ್ ಆಗಿದ್ದ ಇಬ್ಬರು ಅಭ್ಯರ್ಥಿಗಳು ಉತ್ತಮ ಶ್ರೇಯಾಂಕಗಳನ್ನು ಪಡೆದಿದ್ದಾರೆ – ರ‍್ಯಾಂಕ್ 214, ಮತ್ತು 615 ನೇ ಸ್ಥಾನ” ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಹೇಳಿದ್ದರು. COVID ಪಾಸಿಟಿವ್ ಆಗಿದ್ದ 63 ಅಭ್ಯರ್ಥಿಗಳು ಜುಲೈ 30, 31 ರಂದು ಪರೀಕ್ಷೆಗಳನ್ನು ಬರೆದಿದ್ದರು.

ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು– kea.kar.nic.in, karresults.nic.in. ಫಲಿತಾಂಶ ಮಧ್ಯಾಹ್ನ 12: 30 ಕ್ಕೆ ಲಭ್ಯವಿದೆ. ಜುಲೈ 30 ಮತ್ತು 31 ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

 


 

See also  ಇಬ್ಬರು ಯುವಕರ ಆತ್ಮಹತ್ಯೆಗೆ ಕಾರಣವೇನು?

LEAVE A REPLY

Please enter your comment!
Please enter your name here