ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಪಾಪಿ ಮಕ್ಕಳು ತಮ್ಮನ್ನು ಹೆತ್ತು,ಹೊತ್ತು,ಬೆಳೆಸಿದ ತಾಯಿಯನ್ನು ಬೀದಿಗೆ ಬಿಟ್ಟ ಅಮಾನವೀಯ ಘಟನೆ ಕಳಿಯ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಜನತಾ ಕಾಲೋನಿ ನಿವಾಸಿಯಾದ ವೃದ್ಧೆಯೊಬ್ಬರಿಗೆ ಐದು ಜನ ಮಕ್ಕಳಿದ್ದು ಈಗ ಅನಾಥ ಪರಿಸ್ಥಿತಿ ಉಂಟಾಗಿದೆ.ತಾಯಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರಿದ್ದು ಅವರಿಗೆ ವಿವಾಹವಾಗಿದೆ.ಆದರೆ ಮಕ್ಕಳು ತಾಯಿಯನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ.
ತಾಯಿಯು ಕೆಲವು ದಿನಗಳಿಂದ ಅನಾರೋಗ್ಯ ಗೊಂಡಿದ್ದು,ಮಕ್ಕಳು ಅವರನ್ನು ಆರೈಕೆ ಮಾಡಲಾಗದೆ ಜಗಳ ಮಾಡಿಕೊಂಡು ಈಗ ಆ ವೃದ್ಧೆಯನ್ನು ಬೀದೊ ಬದಿ ಬಿಟ್ಟಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಹಾಯವಾಣಿಯವರು ಬಂದು ವೃದ್ಧೆಯನ್ನು ಮಗಳ ಮನಗೆ ಕರೆದುಕೊಂಡು ಹೋಗಿದ್ದಾರೆ.
ಕ್ರೂರ ವರ್ತನೆ ಮಾಡಿದ ಮಕ್ಕಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.