ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಅರವಿಂದ ಬೋಳಾರ್ ವಿರುದ್ಧ ದೂರು ದಾಖಲು !

0


ಮಂಗಳೂರು: ತುಳು ಸಿನಿಮಾ ರಂಗದ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಮತ್ತು ಮಂಗಳೂರು ಖಾಸಗಿ ವಾಹಿನಿಯ ನಿರೂಪಕರೊಬ್ಬರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿದ ದೂರು ಕಾವೂರು ಪೊಲೀಸ್ ಠಾಣೆಯಲ್ಲಿ ಧಾಖಲಾಗಿದೆ.

ಆ ಕಾರ್ಯಕ್ರಮದಲ್ಲಿ ಬೋಳಾರ್ ಅವರು ಜ್ಯೋತಿಷ್ಯರ ವೇಷ ಧರಿಸಿ ಪುರೋಹಿತರಿಗೆ ಮತ್ತು ಜ್ಯೋತಿಷಿಗಳಿಗೆ ಕೀಳು ಮಟ್ಟದಲ್ಲಿ ಅಪಹಾಸ್ಯ ಮಾಡಿದ್ದಾರೆ  ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ದೂರು ಧಾಖಲಿಸಲಾಗಿದೆ.

ನಂತರ ಫೇಸ್ಬುಕ್ ನಲ್ಲಿ ಮಾತನಾಡಿದ ಅರವಿಂದ್ ಬೋಳಾರ್ ಮತ್ತು ವಾಲ್ಟರ್  ನಂದಳಿಕೆಯವರು, ಧರ್ಮಕ್ಕೆ ಅವಹೇಳನವಾಗುವಂತೆ ನಡೆದಿಲ್ಲ. ಯಾವುದೊ ಒಂದು ವರ್ಗದ ಜನ ಇದನ್ನು ಅಪಪ್ರಚಾರ ಮಾಡುತಿದ್ದಾರೆ. ಆದರೂ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು. 

See also  ‘ಬಿಎಸ್‌ಎನ್‌ಎಲ್ ಸಿಬ್ಬಂದಿ ದ್ರೋಹಿಗಳು, ಕೆಲಸ ಮಾಡಲು ಬಯಸುವುದಿಲ್ಲ’ - ಅನಂತ್‌ಕುಮಾರ್ ಹೆಗ್ಡೆ

LEAVE A REPLY

Please enter your comment!
Please enter your name here