ಉಡುಪಿ : ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಗ್ರಾಹಕರು ಬಾಕಿ ಪಾವತಿಸದಿದ್ದರೂ ವಿದ್ಯುತ್ ಕಡಿತ ಇರುವುದಿಲ್ಲ ಎಂದು ರಾಜ್ಯ ಇಂಧನ ಇಲಾಖೆ ಘೋಷಿಸಿತ್ತು.
ಆದರೆ, ಈಗ ಮೆಸ್ಕಾಮ್ ಮಳೆಗಾಲ ಸಮಯದಲ್ಲಿ ಭಾರಿ ನಷ್ಟವನ್ನು ಅನುಭವಿಸಿರುವುದರಿಂದ ತಮ್ಮ ಬಾಕಿ ಹಣವನ್ನು ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸುತ್ತಿದೆ.
ಬಾಕಿ ಪಾವತಿಸದವರು ತಮ್ಮ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಘೋಷಿಸಿದೆ.
ಜಿಲ್ಲೆಯ 3,87,104 ಗ್ರಾಹಕರಿಂದ ಮೆಸ್ಕಾಮ್ ಸುಮಾರು 27.8Cr. ಪಡೆಯಬೇಕಾಗಿದೆ ಎಂದು ಹೇಳಲಾಗಿದೆ.