ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನ !

0

ಆಗಸ್ಟ್ 29: ಭಾರತ ಕಂಡ ಅತ್ಯದ್ಭುತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಮೂರು ಬಾರಿ ಗೆದ್ದ ಯಶಸ್ವೀ ಆಟಗಾರ. ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನವಾದ ಇಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಒಲಂಪಿಕ್ ನಲ್ಲಿ 1928, 1932 ರಲ್ಲಿ ಆಟಗಾರನಾಗಿ ಮತ್ತು 1936 ರಲ್ಲಿ ಭಾರತ ತಂಡದ ನಾಯಕನಾಗಿ ಮುನ್ನಡೆಸಿ ಸ್ವರ್ಣ ಪದಕಗಳನ್ನು ಪಡೆದ ಕೀರ್ತಿ ಇವರಿಗಿದೆ. 1926 ರಿಂದ 1948 ರವರೆಗಿನ ತಮ್ಮ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದಿದ್ದಾರೆ.

1905 ರ ಆಗಸ್ಟ್ 29 ರಂದು ಅಲಹಾಬಾದ್‌ನಲ್ಲಿ ಶಾರದಾ ಸಿಂಗ್ ಮತ್ತು ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದ ಸಮೇಶ್ವರ ಸಿಂಗ್ ದಂಪತಿಗೆ ಜನಿಸಿದ ಧ್ಯಾನ್ ಸಿಂಗ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಹಾಕಿ ಕಡೆಗೆ ಆಕರ್ಷಿತರಾದರು. ತನ್ನ ತಂದೆಯಂತೆ, ಅವನು ಕೂಡ ತನ್ನ 16 ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿಕೊಂಡರು ಮತ್ತು ಅಲ್ಲಿ ತನ್ನ ನೆಚ್ಚಿನ ಕ್ರೀಡೆಯನ್ನು ಮುಂದುವರೆಸಿದರು.

ಧ್ಯಾನ್ ಆಟದಲ್ಲಿ ಎಷ್ಟು ಮಗ್ನನಾಗಿರುತ್ತಾನೆಂದರೆ, ಅವರು ತನ್ನ ಕರ್ತವ್ಯ ಸಮಯದ ನಂತರ ರಾತ್ರಿಯಿಡೀ ಚಂದ್ರನ ಬೆಳದಿಂಗಳಿನಲ್ಲಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಇದು ಅವರಿಗೆ ಧ್ಯಾನ್ ಚಂದ್ ಎಂಬ ಹೆಸರನ್ನು ಗಳಿಸಿತು ಹಾಗೂ ಅವರ ಆಟದ ನೈಪುಣ್ಯತೆ ಅವರಿಗೆ ‘ಹಾಕಿ ಮಾಂತ್ರಿಕ’ ಎಂಬ ಬಿರುದನ್ನು ತಂದು ಕೊಟ್ಟಿತು.

ಅಂತರರಾಷ್ಟ್ರೀಯ ಹಾಕಿ ರಂಗದಲ್ಲಿ ತನ್ನ ವೈಭವದ ಪರಾಕಾಷ್ಠೆಗಳನ್ನು ಅನೇಕ ಬಾರಿ ತಲುಪಿ ತನ್ನ ದೇಶಕ್ಕೆ ಸೇವೆ ಸಲ್ಲಿಸಿದ ನಂತರ. ಅವರು ಭಾರತೀಯ ಮತ್ತು ವಿಶ್ವ ಹಾಕಿಯಲ್ಲಿ ಐತಿಹಾಸಿಕ ವ್ಯಕ್ತಿ ಎಂದು ಗುರುತಿಸಿ ಭಾರತದಲ್ಲಿ ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನದ ಸಾಧನೆಗಾಗಿ ಅತ್ಯುನ್ನತ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಎಂದು ಹೆಸರಿಟ್ಟರು. ಮತ್ತು ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

See also  ಕಾಸರ್‌ಗೋಡ್: ಅಕ್ರಮ ಶ್ರೀಗಂಧದ ವ್ಯಾಪಾರದಲ್ಲಿ ಪ್ರಮುಖ ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ

LEAVE A REPLY

Please enter your comment!
Please enter your name here