ಕರಾವಳಿಯಲ್ಲಿ ಹೆಚ್ಚುತ್ತಿದೆಯೇ ಗಾಂಜಾ ದಂಧೆ ?

0


ದಿನೇ ದಿನೇ ಗಾಂಜಾ ಪ್ರಕರಣಗಳು ಕರಾವಳಿಯಲ್ಲಿ ಜಾಸ್ತಿಯಾಗುತ್ತಿದ್ದು, ಇಂದು ಮತ್ತೆರಡು ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ಧಾಖಲಾಗಿದೆ. ಕಳೆದ ವಾರವಷ್ಟೇ ನಾಲ್ಕೈದು ಪ್ರಕರಣಗಳನ್ನು ಭೇದಿಸಿದ ಕರಾವಳಿ ಪೋಲಿಸರು ಈ ವಾರವೂ ತಮ್ಮ ಬೇಟೆಯನ್ನು ಮುಂದುವರಿಸಿದ್ದಾರೆ.

ಬ್ರಹ್ಮಾವರ : ಉಡುಪಿಯ ಬ್ರಹ್ಮಾವರದ ಧರ್ಮಾವರ ಅಡಿಟೋರಿಯಂ ಬಳಿ ಕಾರಿನಲ್ಲಿ ಇಬ್ಬರು ಗಾಂಜಾ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅರೋಪಿಗಳಿಬ್ಬರನ್ನ ವಶಕ್ಕೆ ಪಡೆದಿದ್ದಾರೆ. ಅಸಿಫ್ ಪಾಶ (38) ಹಾಗೂ ರಿಯಾಜ್ ಎಂಬವರು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಬರೋಬ್ಬರಿ ಎರಡು ಮೂವತ್ತೆಂಟು ಗ್ರಾಮ್ ಗಾಂಜಾ ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಮಾರಾಟಕ್ಕೆ ಬಳಸಿದ ಸ್ವಿಫ್ಟ್ ಡಿಸೈರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕುಂದಾಪುರ: ಜಪ್ತಿಗ್ರಾಮದ ಇಂಬಾಳಿಯ ಕೃಷ್ಣಯ್ಯ ಶೆಟ್ಟಿ ಎಂಬುವವರಿಗೆ ಸೇರಿದ ಶೆಡ್ಡಿನಲ್ಲಿ ಗಾಂಜಾ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸಿ ಆರೋಪಿತರಾದ ಕರಾಣಿ ಮಹಮ್ಮದ್ ನದೀಮ್ ಹಾಗೂ ಬೆಟ್ಟಿ ಮಹಮ್ಮದ್ ಅಫ್ಜಲ್ ರನ್ನು ಬಂಧಿಸಿದ್ದಾರೆ. ರಯಾನ ಎನ್ನುವ ಮತ್ತೊಬ್ಬ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು‌ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು ಎಂಟು ಸಾವಿರ ಮೌಲ್ಯದ ಮೂನ್ನರ ಅರವತ್ತು ಗ್ರಾಮ್ ಗಾಂಜ ವಶ ಪಡಿಸಿಕೊಳ್ಳಲಾಗಿದ್ದು ,ಮಾರಾಟಕ್ಕೆ ಬಳಸಲಾಗಿದ್ದ ಎರಡು ಸ್ಕೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

See also  ಬಿಜೆಪಿ ಕಾರ್ಯಕರ್ತರೊಂದಿಗೆ ಶಾಸಕ ರಘುಪತಿ ಭಟ್ ಸಭೆ

LEAVE A REPLY

Please enter your comment!
Please enter your name here