Kota ಕೋಟ : ರಾಜ್ಯ ವಿಧಾನ ಪರಿಷತ್ಗೆ ದಕ್ಷಿಣ ಕನ್ನಡ, ಉಡುಪಿ Udupi ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆಯು ಡಿ. 10 ಶುಕ್ರವಾರ ಬೆಳಿಗ್ಗೆನಿಂದ ನಡೆಯುತ್ತಿದ್ದು
ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ Kota Srinivas Poojary ದ.ಕ ಹಾಗೂ ಉಡುಪಿ Udupi ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು ಚುನಾವಣೆ ದಿನದಂದು ಅವರು ಜಿಲ್ಲೆಯ ವಿವಿಧೆಡೆ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.
Read: ಕೋರ್ಟ್ ಮೆಟ್ಟಿಲೇರಿದ ‘ಗರುಡ ಗಮನ ವೃಷಭ ವಾಹನ’ ಚಿತ್ರದ ವಿವಾದ
ಕೋಟತಟ್ಟು ಗ್ರಾಮ ಪಂಚಾಯತ್ಗೆ ಬೇಟಿ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ನ 13 ಜನ ಸದಸ್ಯರು ಕೋಟ ಶ್ರೀನಿವಾಸ್ ಪೂಜಾರಿಯವರ Kota Srinivas Poojary ಭಾವಚಿತ್ರದ ಮುಖವಾಡ ಧರಿಸಿ ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಹಾಲಿ ಸಚಿವರು, ವಿಧಾನ ಪರಿಷತ್ನ ಸ್ಥಳಿಯಾಡಳಿತದ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಇಂದು ನಮ್ಮೂರಾದ ಕೋಟ ಮತ್ತು ಕೋಟತಟ್ಟು ಪಂಚಾಯತ್ಗೆ ಭೇಟಿ ನೀಡಿದ್ದೇನೆ.
ಗ್ರಾಮ ಪಂಚಾಯತ್ ಸದಸ್ಯರು ಅತ್ಯಂತ ಪ್ರೀತಿ ಪೂರ್ವಕವಾಗಿ ನನ್ನನ್ನು ಬರಮಾಡಿಕೊಂಡು ನನ್ನ ಪರವಾಗಿ ಮತ ಚಲಾಯಿಸುತ್ತೇವೆ ಎನ್ನುವ ಮಾತು ಕೇಳಿ ತುಂಬಾ ಸಂತೋಷವಾಗಿದೆ. ಈ ಬಾರಿ ನಾನು ಅತ್ಯಂತ ಹೆಚ್ಚು ಮತಗಳನ್ನು ಗಳಿಸಿ ಜಯಗಳಿಸಲಿಕ್ಕೆ ಒಂದು ಅವಕಾಶ ಆಗಿದೆ ಎಂದು ಬಾವಿಸುತ್ತೇನೆ. ಮತ ದಾನದ ಪ್ರಕ್ರಿಯೆಗಳು ಮತ್ತು ಮತದಾರರ ಪ್ರತಿಕ್ರಿಯೆಗಳು ತುಂಬಾ ಉತ್ಸಾಹದಲ್ಲಿ ಇದೆ ಎನ್ನುವುದು ಬಹಳ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.