ಕರಾವಳಿಯಲ್ಲಿ ಮಳೆರಾಯನ ಆರ್ಭಟ! ಸಂಚಾರ ಅಸ್ಥವ್ಯಸ್ಥ ! Watch Video

0

ಸೆಪ್ಟೆಂಬರ್ 20 : ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ಥವ್ಯಸ್ಥವಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ, ಮಳೆಯ ಆರ್ಭಟ ಕಡಿಮೆಯಾಗದ ಕಾರಣ ನೀರಿನ ಮಟ್ಟ ಹೆಚ್ಚುವ ಭೀತಿ ಇದೆ.

ಉಡುಪಿ- ಮಣಿಪಾಲ ಸಂಪರ್ಕ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಂಡಿದೆ. ಹಾಗೂ ಜಿಲ್ಲೆಯ ಹಲವಾರು ರಸ್ತೆಗಳು ನೀರಿನಿಂದ ತುಂಬಿ ನದಿಯ ಸ್ವರೂಪವನ್ನು ಪಡೆದಿದೆ.

ಕೊಡವೂರು : ನೀರು ಅಪಾಯ ಮಟ್ಟ ತಲುಪಿದ್ದು, ಜನರು ದೋಣಿಯನ್ನು ಉಪಯೋಗಿಸಿ ಸುರಕ್ಷಿತ ಪ್ರದೇಶಗಳಿಗೆ ತೆರಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೊಡವೂರಿನಲ್ಲಿ ಸುರಕ್ಷಿತ ಪ್ರದೇಶಗಳಿಗೆ ಹೊರಟಿರುವ ವಿಡಿಯೋ ಇಲ್ಲಿದೆ.

See also  ಮಂಗಳೂರು: ಸಸ್ಯ ತಜ್ಞರ ತಂಡದಿಂದ 987 ಪವಿತ್ರ ನಾಗಬನಗಳ ಪತ್ತೆ!

LEAVE A REPLY

Please enter your comment!
Please enter your name here