ಕಷ್ಟ ಕಾಲದಲ್ಲಿ ಧರ್ಮ ಭೇದ ಮರೆತು ರಕ್ಷಣೆ ಮಾಡಿದ ಬಜರಂಗ ದಳದ ಕಾರ್ಯಕರ್ತರು (ಹಾವಳಿ ಟೀಮ್ ).
ಮಾಗುಂಡಿಯಲ್ಲಿ ಸಲಾಂ ಎಂಬ ಮುಸ್ಲಿಂ ಕುಟುಂಬದ ಸದಸ್ಯರಾದ 1 ಮಗು 2 ಜನ ಮಹಿಳೆಯರು ಒಬ್ಬ ಯುವಕ ಕಾರಿನಲ್ಲಿ ಬರುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಮಾಗುಂಡಿಯ ಸುಬ್ಬೇಗೌಡ ಅವರ ಮನೆಯ ಅಂಗಳಕ್ಕೆ ಅಂಗತಾನ ಬಂದು ಬಿದ್ದು ಸ್ಥಳದಲ್ಲಿ ಗಂಭೀರ ವಾತಾವರಣ ನಿರ್ಮಾಣವಾಗಿದ್ದು ನಂತರ ಸ್ಥಳದಲ್ಲೇ ಇದ್ದ ಹಾವಳಿ ಟೀಮ್ ಸದಸ್ಯರು ತುರ್ತಾಗಿ ಎಚ್ಚೆತ್ತುಕೊಂಡು.
ಕಾರನ್ನು ಎತ್ತಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆಗಾಗಿ ಧರ್ಮ ಭೇದ ಮರೆತು ಬಜರಂಗದಳದ ಜಿಲ್ಲಾ ಸಂಚಾಲಕರಾದ ಶಶಾಂಕ್ ಹೇರೂರು ಅವರು ಕೊಟ್ಟಿಗೆಹಾರ ಅಶ್ವತ್ಥ್ ಅವರ ಕಾರಿನಲ್ಲಿ ಅವರನ್ನು ಕರೆದುಕೊಂಡು ಹೋಗಿರುತ್ತಾರೆ ಜೊತೆಯಲ್ಲಿ ಸಂತೋಷ್ ಅತ್ತಿಗೆರೆ ಸಮರ್ಥ್ ಮಾಳಿಗನಾಡು ಸಂತೋಷ್ ಹಾದಿಹೂಣಿ ಮದನ್ ಜೈದೀಪ್ ಮೋಹನ್ ಸಂದೇಶ್ ಸುಬ್ಬೇಗೌಡ ಅಪ್ಪಣ್ಣಿ ಸತೀಶ್ ಬೀರ್ಗೂರು ಪೃಥ್ವಿ ಮಣಬೂರು ನವೀನ್ ಹಾವಳಿ ಇರುವವರು.