ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ : ಕಸ್ಟಮ್ಸ್ ಅಧಿಕಾರಿಗಳಿಂದ ಇಬ್ಬರ ಬಂಧನ…!

0
ಮಂಗಳೂರು : ನಗರದ ಬಜ್ಪೆಯ ಮಂಗಳೂರು  ‌ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರು ಲಕ್ಷಾಂತರ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುವಾಗ ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿ,ಇಬ್ಬರನ್ನು ಬಂಧಿಸಿದ್ದಾರೆ.

 

ಅಂತರಾಷ್ಟ್ರೀಯ ವಿಮಾನವು ಶಾರ್ಜಾದಿಂದ ಏರ್ ಪೋರ್ಟ್ ಗೆ‌ ಆಗಮಿಸಿದಾಗ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸುವಾಗ ಅಕ್ರಮ ಚಿನ್ನ ಮತ್ತು ಕಾಸ್ಮೆಟಿಕ್ ವಸ್ತುಗಳು ಪತ್ತೆಯಾಯಿತು ಎನ್ನಲಾಗಿದೆ.

 

ಬಂಧಿತರ ಬಳಿ 5.84 ಲಕ್ಷ ಮೌಲ್ಯದ 120.38 ಗ್ರಾಂ ತೂಕದ  24 ಕ್ಯಾರೆಟ್ ಚಿನ್ನ ಕಾಲಿನಡೊಯಲ್ಲಿ ಇಟ್ಟು ಸಾಗಾಟ ಮಾಡುತ್ತಿದ್ದರು. ನಂತರ 1.71 ಲಕ್ಷ ಮೌಲ್ಯದ ಕಾಸ್ಮೆಟಿಕ್ ವಸ್ತುಗಳನ್ನು ವಶಪಡಿಕೊಂಡಿದ್ದಾರೆ.

 

ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

See also  ಮಂಗಳೂರು: ಕಾವೂರಿನಲ್ಲಿ ರಸ್ತೆಬದಿಯಿಂದ ಅನಧಿಕೃತ ಸಣ್ಣ ಅಂಗಡಿಗಳ ತೆರವು.

LEAVE A REPLY

Please enter your comment!
Please enter your name here