ದಕ್ಷಿಣ ಕನ್ನಡದ ಎಲ್ಲ ಗಡಿಗಳು ತೆರೆದಿದೆ !

0


ರಾಜ್ಯಸರಕಾರದ ಆದೇಶ ಹೊರಬಂದ ಬೆನ್ನಲ್ಲೇ ದಕ್ಷನ ಕನ್ನಡ ಜಿಲ್ಲೆಯು ಎಲ್ಲ ಅಂತರ್ ರಾಜ್ಯ ಗಡಿಗಳನ್ನು ತೆರೆದಿದೆ ಎಂದು ಘೋಷಿಸಿದ್ದಾರೆ. ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರಾಜೇಂದ್ರ ಕೆ ಅವರು, ಧಕ್ಷಿಣ ಕನ್ನಡ ಜಿಲ್ಲೆಗೆ ಬರುವ ಯಾವ ಪ್ರಯಾಣಿಕರೂ ಕ್ವಾರಂಟೈನ್ ಆಗುವ ಅವಶ್ಯಕತೆ ಇಲ್ಲ ಹಾಗೂ ಯಾವುದೇ ಟೆಸ್ಟ್ಗಳಿಗೆ ಒಳಪಡಬೇಕಿಲ್ಲ. ಅದಲ್ಲದೆ ಈ-ಪಾಸ್ ಮಾಡಿಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸಂಜೆ ಗಡಿಯ ಎಲ್ಲ ತಡೆಗಳನ್ನು ತೆರೆಯಲಾಗಿದೆ ಹಾಗೂ ಅಂತರ್ರಾಜ್ಯ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ . ರಾಜ್ಯಸರಕಾರದ ಮಾರ್ಗಸೂಚಿ ಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಆದರೂ ಕೊರೊನ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿರುವ ಕರಣ ಜನರೇ ಎಚ್ಚೆತ್ತುಕೊಂಡು ಜಾಗೃತವಾಗಬೇಕು.

See also  ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ : ಕಸ್ಟಮ್ಸ್ ಅಧಿಕಾರಿಗಳಿಂದ ಇಬ್ಬರ ಬಂಧನ...!

LEAVE A REPLY

Please enter your comment!
Please enter your name here