ಕಟೀಲ್ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ

0

ಪಾವನ ನಂದಿನಿ ನದಿಯ ದಡದಲ್ಲಿ ನಿಂತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯಸ್ಥಳ ಶ್ರೀ ಕಟೀಲು  ಕ್ಷೇತ್ರ. ಪ್ರತಿನಿತ್ಯ ಹಸಿದವರಿಗೆ ಅನ್ನಸಂತರ್ಪಣೆಯ  ಮೂಲಕ  ಸಾವಿರಾರು ಭಕ್ತರ ಸಲಹುವ ತಾಯಿ ಶ್ರೀ ದುರ್ಗಾಪರಮೇಶ್ವರಿ ಇಲ್ಲಿಯ ಪ್ರಮುಖ ದೇವರು. ನೋಡಲು ಅತೀ  ಸುಂದರ, ಮನಮೋಹಕ , ಮನಸ್ಸಿಗೆ ಮುದ ನೀಡುವ ಪುಣ್ಯಸ್ಥಳ ಎಂದರೆ ತಪ್ಪಾಗಲಾಗದು. ಒಂದು ರೀತಿಯಲ್ಲಿ  ಹೇಳಬೇಕಾದರೆ ಇಡೀ ಭಕ್ತರ ಪಾಲಿಗೆ ಇದೊಂದು ಸ್ವರ್ಗ ಸ್ಥಳ ಇದ್ದಂತೆ.

ಕ್ಷೇತ್ರ  ಹಿನ್ನಲೆ

ಪುರಾಣಗಳ ಪ್ರಕಾರ ಶುಂಭ ನಿಶುಂಭರ ವಧೆಯಾದ ನಂತರದ ಸಮಯದಲ್ಲಿ , ಅರುಣಾಸುರ ನೆಂಬ ಅಸುರನು ರಾಕ್ಷಸ ಚಕ್ರಾಧಿಪತ್ಯವನ್ನು ಸ್ಥಾಪಿಸಿ , ದೇವತೆಗಳ  ಹವಿಸ್ಸಿಗೆ ಮೂಲ ಕಾರಣವಾದ ಋಷಿಗಳ ಯಜ್ಞ -ಯಾಗಾದಿಗಳನ್ನು ತಡೆದು ಅವರುಗಳನ್ನು ಪೀಡಿಸತೊಡಗಿದನು . ಇದರಿಂದ ನಿಸ್ತೇಜರಾದ ದೇವೆತೆಗಳು ಸಾಮಾನ್ಯ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ನೀಗುವಲ್ಲಿ ಅಸಮರ್ಥರಾದರು. ಇದರಿಂದ  ತುಂಬಾ ನೊಂದು , ಸಾಮಾನ್ಯ ಜನರ ಕಷ್ಟ ಬವಣೆಗಳನ್ನು ನೋಡಲಾಗದೆ ಋಷಿ ಜಾಬಾಲಿ ಮಹರ್ಷಿಗಳು ನೇರವಾಗಿ ಸುರಪುರಕ್ಕೆ ಹೋಗಿ , ದೇವೇತಗಳ  ರಾಜ  ಇಂದ್ರನನ್ನು  ಕಂಡು , ಸೃಷ್ಟಿಯಲ್ಲಿ ಆಗುತ್ತಿರುವ ವಿದ್ಯಮಾನಗಳನ್ನುಹಾಗು ಅದಕ್ಕೆ ಪರಿಹಾರವಾಗಿ ತಾವು ಮಾಡಬೇಕೆಂದಿರುವ ಯಜ್ಞ -ಯಾಗದ ಬಗ್ಗೆಯೂ ವಿವರವಾಗಿ ತಿಳಿಸಿದರು. ಇದಕ್ಕೆ ಪರಿಹಾರವಾಗಿ ಗೋಮಾತೆ ಕಾಮಧೇನು ವನ್ನು ಭೂಮಿಗೆ ಕಳಿಸಿಕೊಡಬೇಕಾಗಿ ವಿನಂತಿಸಿದರು.  ಆಗ ಸುರನಾಥನು , “ಮಹರ್ಷಿಗಳೇ, ಗೋಮಾತೆ  ಈಗ  ಸ್ವರ್ಗ ಲೋಕದಲ್ಲಿ ಇಲ್ಲ. ಯಾವುದೊ ಕಾರ್ಯನಿಮಿತ್ತ  ವರುಣ ಲೋಕಕ್ಕೆ ತೆರಳಿದ್ದಾಳೆ . ಹಾಗಾಗಿ, ನಿಮ್ಮ ಅಭ್ಯಂತರವಿಲ್ಲದಿದ್ದರೆ ಅವಳ ಮಗಳು ನಂದಿನಿಯನ್ನು  ಜೊತೆಗೆ ಕರೆದುಕೊಂಡು ಹೋಗಿ”  ಎಂದು ಸಲಹೆಯನ್ನು ಇತ್ತನು. ಹಾಗೂ ಇದಕ್ಕೆ ಅವಳ ಒಪ್ಪಿಗೆ ಅತಿ ಮುಖ್ಯ ಎಂದನು.

ಇದಕ್ಕೆ ಒಪ್ಪಿದ  ಋಷಿ ಜಾಬಾಲಿ , ನಂದಿನಿಯ ಬಳಿಗೆ ತೆರೆಳಿ , ಭೂಲೋಕದ  ಜನರ ಕಷ್ಟಗಳನ್ನು , ಅದಕ್ಕೆ ಪರಿಹಾರವಾಗಿ ತಾವು ಮಾಡಬೇಕೆಂದಿರುವ ಯಜ್ಞದ ಬಗ್ಗೆಯೂ ಅವಳಿಗೆ ತಿಳಿಸುತ್ತ , ತಮ್ಮೊಡನೆ ಬರಬೇಕಾಗಿ ವಿನಂತಿಸಿಕೊಂಡರು . ಆಗ ಉತ್ತರವಾಗಿ ನಂದಿನಿಯು ಭೂಲೋಕವನ್ನು ಹಾಗೂ ಭೂಲೋಕದ ನಿವಾಸಿಗಳನ್ನು ಜರೆದು , ಭೂಲೋಕದ ಜೀವಿಗಳು  ನನ್ನ ಕೃಪೆಗೆ ಅಯೋಗ್ಯರು ಎಂದು ನಿಂದಿಸಿದಳು ಹಾಗೂ ತಾನು ಅಲ್ಲಿಗೆ ಬರುವುದಿಲ್ಲ ಎಂದು ಖಂಡ -ತುಂಡವಾಗಿ ಉತ್ತರಿಸಿದಳು . ಇದರಿಂದ ಕುಪಿತಗೊಂಡ ಋಷಿ  ಜಾಬಾಲಿ , ನಂದಿನಿಗೆ ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ಶಾಪವಿತ್ತರು . ಆಗ ತನ್ನ ಅಪರಾಧದ ಬಗ್ಗೆ ಅರಿವಾಗಿ ,ನೊಂದು , ಪಶ್ಚಾತ್ತಾಪದಿಂದ ತನ್ನನ್ನು  ಕ್ಷಮಿಸುವಂತೆ ಬೇಡಿಕೊಂಡಾಗ , ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯ ಶ್ರೀ ಆಧಿಶಕ್ತಿಯನ್ನು ಪೂಜಿಸುತ್ತ , ತನ್ನ ತಪ್ಪಿಗೆ ಪಶ್ಚಾತ್ತಾಪಪಡುತ್ತಾ  ದೇವಿಯನ್ನು ಬೇಡಿಕೊಂಡಾಗ , ಅವಳ ಭಕ್ತಿಗೆ ಪ್ರಸನ್ನಳಾಗಿ ಒಲಿದು ಬಂದು ಶಾಪವಿಮೋಚನೆಯ ದಾರಿಯನ್ನು ತಿಳಿಸುತ್ತ , ಋಷಿವಾಕ್ಯ  ಎಂದೂ ಪ್ರಭಾವಹೀನವಾಗದು, ಅದರನ್ನು ಯಾರೂ  ತಡೆಯಲಾರರು . ಅವರ ವಾಕ್ಯದಂತೆ ನೀನು ಭೂಲೋಕದಲ್ಲಿ ನದಿಯಾಗಿ ಅವತರಿಸಲೇಬೇಕು . ಮುಂದೆ ನಾನೇ ನಿನ್ನ  ಮಗಳಾಗಿ ಬಂತು ಮುಕ್ತಿಯನ್ನು ನೀಡುವೆನು  ಎಂದು ಅಭಯವಿತ್ತಳು. ನಂತರದಲ್ಲಿ  ತಾಯಿಯ ಮಾತಿನಂತೆ ಮಾಘ ಶುಧ್ಧ ಪೂರ್ಣಿಮೆಯಂದು  ಭೂಮಿಯಲ್ಲಿ ನಂದಿನಿಯು ನದಿಯಾಗಿ ಹರಿದಳು.

See also  ಬೈಂದೂರು: ಒತ್ತಿನೆಣೆ ಎಂಬ ಸ್ವರ್ಗ

ಹೀಗೆ  ಸಮಯ  ಕಳೆಯುತ್ತಿದ್ದಂತೆ , ಇತ್ತ ಅರುಣಾಸುರನು  ಬ್ರಹ್ಮ ದೇವರನ್ನು ತನ್ನ ತಪಸ್ಸಿನಿಂದ ಮೆಚ್ಚಿಸಿ ವರವನ್ನು ಪಡೆಯಲು , ಹಾಗೆಯೆ ಇದರಿಂದ ಮದಾಂಧನಾಗಿ  ದೇವೆತೆಗಳ ಮೇಲೆ  ಆಕ್ರಮಣ ಮಾಡಲು , ಇವನನ್ನು  ಎದುರಿಸಲು ಅಸಮರ್ಥರಾದ ದೇವೆತೆಗಳು ಶ್ರೀ ಆಧಿಶಕ್ತಿಗೆ ಕಾಪಾಡುವಂತೆ ಮೊರೆಹೋಗಲು ,ಅವರಿಗೆ ಅಭಯವನ್ನಿತ್ತಳು .

ಮುಂದೆ ಶ್ರೀ ದೇವಿಯ ಲೀಲೆಯಂತೆ . ಕ್ರೂರ ಅರುಣಾಸುರನನ್ನು ವಧಿಸಲು , ವಿದ್ಯಾಚಲ ಪರ್ವತದ ತಪ್ಪಲಿನಲ್ಲಿ , ಕದಂಬ ವನದ  ಸುಂದರ ಪರಿಸರದಲ್ಲಿ  ವಿಚರಿಸತೊಡಗಿದಳು .

ಇದನ್ನು ಮನಗಂಡ ರಾಕ್ಷಸ ಧೂತರು , ತಮ್ಮ ಅಸುರ ರಾಜ ಅರುಣಾಸುರನಲ್ಲಿ ಅವಳ ಸೌಂದರ್ಯದ ಬಗ್ಗೆ ವಿವರಿಸಿ ಹೇಳಿದರು.  ಇದರಿಂದ ಮೋಹಿತನಾದ ಅಸುರನು,ಅವಳನ್ನು ಮದುವೆಯಾಗಲು ಬಯಸಿ, ತನ್ನ ನಿವೇದನೆಯನ್ನು  ತಿಳಿಸಿದಾಗ , ಅದನ್ನು ತಿರಸ್ಕರಿಸಿದನ್ನು  ಕಂಡು , ಕೋಪೋದ್ರಕ್ತನಾದ ಅಸುರನು ಅವಳ ಮೇಲೆ ಧಾಳಿ ಮಾಡಲು , ಮುಂದೆ ಶ್ರೀ  ದೇವಿ ಬ್ರಾಮರಿಯ ರೂಪವನ್ನು ತಳೆದು ಅರುಣಾಸುರನನ್ನು ಸಂಹರಿಸಿದಳು. ತದನಂತರ ಶ್ರೀ ದೇವಿಯು ದುರ್ಗಾಪರಮೇಶ್ವರಿಯ ರೂಪದಲ್ಲಿ ನಂದಿನಿ ನದಿಯ ಮಧ್ಯೆ ಲಿಂಗ ರೂಪದಲ್ಲಿ ಉದ್ಭವಿಸಿದಳು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು.


ಸೇವೆಗಳು
 • ಕಾರ್ತಿಪೂಜೆ
 • ಹೂವಿನಪೂಜೆ
 • ದುರ್ಗಾನಮಸ್ಕಾರ
 • ಕುಂಕುಮಾರ್ಚನೆ
 • ಪಂಚಕಜ್ಜಾಯ
 • ಕರ್ಪೂರಾರತಿ
 • ಸಹಸ್ರನಾಮಾರ್ಚನೆ
 • ಪಂಚಾಮೃತಅಭಿಷೇಕ
 • ಶ್ರೀಸೂಕ್ತಾಭಿಷೇಕ
 • ಅಮೃತಪಡಿನಂದಾದೀಪ
 • ಅಲಂಕಾರಪೂಜೆ
 • ಮಹಾಪೂಜೆ
 • ಸರ್ವಸೇವೆ
 • ರಂಗಪೂಜೆ
 • ಮೃಷ್ಟಾನ್ನ
 • ಲಡ್ಡು ಪ್ರಸಾದ
 • ಸಮೂಹ ಸೇವೆ
 • ತ್ರಿಮಧುರನೈವೇದ್ಯ
 • ತೀರ್ಥಬಾಟ್ಲಿ
 • ಅನ್ನಪ್ರಾಶನ
 • ನಾಮಕರಣ
 • ಹೂಪ್ರಶ್ನೆ
 • ಕ್ಷೀರಪಾಯಸ
 • ರಥಹೂವಿನಪೂಜೆ (ಉತ್ಸವ ಸಂದರ್ಭ)
 • ಅನ್ನದಾನಸೇವೆ
 • ಮಹಾಅನ್ನದಾನಸೇವೆ
 • ಚಿನ್ನದಪಾಲಕಿ ಉತ್ಸವ

ಇದು ಮಂಗಳೂರಿನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿದೆ. ಉಡುಪಿ ಇಂದ ಸುಮಾರು 43 ಕಿಲೋಮೀಟರ್ ದೂರದಲ್ಲಿದೆ.. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಬಜ್ಪೆ ಮತ್ತು ಕಿನ್ನಿಗೋಲಿ ನಡುವೆ ಒಂದು ಪ್ರಮುಖ ಜಂಕ್ಷನ್.

 


 

LEAVE A REPLY

Please enter your comment!
Please enter your name here