ಗಾಂಜಾ ಪ್ರಕರಣ : ಆರೋಪಿ ರೆಡ್ ಹ್ಯಾಂಡ್ ನಲ್ಲಿ ಪೊಲೀಸರ ಬಲೆಗೆ !

0

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಮಾರಾಟದ ಸಲುವಾಗಿ ಓರ್ವನಿಂದ ಗಾಂಜಾ ಖರೀದಿಸಿ ಸಾಗಿಸುತ್ತಿದ್ದ ಆರೋಪಿಯನ್ನು ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿಗಳ ತಂಡ ಗುರುವಾರ ತಡರಾತ್ರಿ ಕುಂದಾಪುರದ ಕೋಡಿಯಲ್ಲಿ ಬಂಧಿಸಿದ್ದಾರೆ.

ಕುಂದಾಪುರದ ಕೋಡಿ ಮುಲ್ಲಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಅಬ್ದುಲ್ ರೆಹಮಾನ್ (24) ಬಂಧಿತ ಆರೋಪಿಯಾಗಿದ್ದಾನೆ.ಆತನಿಗೆ ಗಾಂಜಾ ನೀಡಿದ ಮಸೂದ್ ಯಾನೆ ಚಿನ್ನು ಪರಾರಿಯಾಗಿದ್ದಾನೆ. ಬಂಧಿತನಿಂದ 33 ಸಾವಿರ ಮೌಲ್ಯದ 1 ಕೆ.ಜಿ.100 ಗ್ರಾಂ ಗಾಂಜಾ ಹಾಗೂ 10,000 ರೂಪಾಯಿ ಮೌಲ್ಯದ ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ಕುಂದಾಪುರ ತಾಲೂಕು ಕೋಡಿಯ ಮೊಹಮ್ಮದ್ ಅಬ್ದುಲ್ ರೆಹಮಾನ್ ಎನ್ನುವಾತ ಗುರುವಾರ ರಾತ್ರಿ10 ಗಂಟೆಯ ನಂತರ ಮಸೂದ್ ಯಾನೆ ಚಿನ್ನು ಎಂಬವನಿಂದ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ತೆಗೆದುಕೊಂಡು ಹೋಗುತ್ತಾನೆಂದು ಖಚಿತ ವರ್ತಮಾನವೊಂದು ಬಂದಿದ್ದು ಅದರಂತೆಯೇ ಸಿಬ್ಬಂದಿಯವರ ಜೊತೆ ಕೋಡಿ ಮುಲ್ಲಾ ಸ್ಟ್ರೀಟ್ 4 ನೇ ಕ್ರಾಸ್ ಬಳಿ ಕಾದು ಕುಳಿತಿದ್ದರು. ಅದೇ ಸಮಯಕ್ಕೆ ಓರ್ವ ವ್ಯಕ್ತಿಯು ಕೈಯಲ್ಲಿ ಒಂದು ಪ್ಲಾಸ್ಟಿಕ್ ತೊಟ್ಟೆ ಹಿಡಿದುಕೊಂಡು ನಡೆದು ಬರುತ್ತಿದ್ದು ಆತನೇ ಗಾಂಜಾ ಸಾಗಾಟದ ವ್ಯಕ್ತಿಯೆಂದು ಪೊಲೀಸರು ಖಚಿತಪಡಿಸಿಕೊಂಡು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ತಾನು ಎಂ.ಕೋಡಿಯ ಮಸೂದ್ ಯಾನೆ ಚಿನ್ನು ಎನ್ನುವಾತನಿಂದ ಗಾಂಜಾ ತೆಗೆದುಕೊಂಡು ಬಂದಿದ್ದು ಈಗ ಮನೆಯಲ್ಲಿಟ್ಟು ನಾಳೆ ದಿನ ಅಧಿಕ ಬೆಲೆಗೆ ಮಾರಾಟ ಮಾಡುವ ಉದ್ಡೇಶದಿಂದ ಬಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಪೊಲೀಸ್ ಕಾರ್ಯಾಚರಣೆಯಲ್ಲಿ ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್, ಎಎಸ್ಐ ರವಿಚಂದ್ರ, ರಾಘವೇಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ಶಿವಾನಂದ, ಸುರೇಶ್, ಚಂದ್ರ ಶೆಟ್ಟಿ, ರಾಜಕುಮಾರ್, ದಯಾನಂದ ಪ್ರಭು, ಚಾಲಕ ರಾಘವೇಂದ್ರ ಭಾಗವಹಿಸಿದ್ದರು.

 


 

See also  ಕುಂದಾಪುರ: ಹಾನಿಗೊಳಗಾದ ಹೆದ್ದಾರಿ - ಶಾಸಕ ಹಲಾಡಿ ಅವರಿಂದ ತುರ್ತು ರಿಪೇರಿ!

LEAVE A REPLY

Please enter your comment!
Please enter your name here