ಟಾಯ್ಲೆಟ್ ನಲ್ಲಿ ‌ಬಂಧಿಯಾದ ಚಿರತೆ ಮತ್ತು ನಾಯಿ…!

0

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕೈಕಂಬ ಎಂಬಲ್ಲಿ ಟಾಯ್ಲೆಟ್ ಒಳಗಡೆ ಚಿರತೆ ಮತ್ತು ನಾಯಿ ಬಂಧಿಯಾಗಿದೆ.ಸುಬ್ರಹ್ಮಣ್ಯ ಸಮೀಪದ ಕೈಕಂಬ ರೇಗಪ್ಪ ಎಂಬವರ ಮನೆಯ ಟಾಯ್ಲೆಟ್ ನಲ್ಲಿ ಚಿರತೆ ಮತ್ತು ನಾಯಿ ಬಂಧಿಯಾಗಿದೆ ಎನ್ನಲಾಗಿದೆ.

ನಾಯಿಯನ್ನು ಓಡಿಸಿಕೊಂಡು ಬಂದ ಚಿರತೆ ನಂತರ ಟಾಯ್ಲೆಟ್ ಒಳಗೆ ನಾಯಿ ಮತ್ತು ಚಿರತೆ ನುಗ್ಗಿದೆ. ಹೊರಗಡೆಯಿಂದ ಮನೆಯವರು ಬಾಗಿಲು ಹಾಕಿದ್ದು, ಒಳಗಡೆ ಕೂಡಿ ಹಾಕಿರುತ್ತಾರೆ.ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟದ್ದಾರೆ.ಜನ ಸೇರಿ ಚಿರತೆಯನ್ನು ಕೆರಳಿಸದಂತೆ ಅರಣ್ಯ ಅಧಿಕಾರಿಗಳ ಮನವಿ ಮಾಡಿಕೊಂಡಿದ್ದಾರೆ.
ಮೂಲೆ ಮನೆ ದಿ.ವೆಂಕಪ್ಪಗೌಡ ಅವರ ಮನೆಯ ಟಾಯ್ಲೆಟ್ ಆಗಿದ್ದು,ವೆಂಕಪ್ಪ ಗೌಡ ಅವರ ಪತ್ನಿ ಜಯಲಕ್ಷ್ಮಿ ಅವರು ಟಾಯ್ಲೆಟ್ ಬಾಗಿಲು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

 

ಅರಣ್ಯ ಇಲಾಖೆಯವರು ‌ಚಿರತೆಯನ್ನು‌ ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ.

See also  ಮೃತ ಮಹಿಳೆ 3 ವರ್ಷಗಳ ನಂತರ ಜೀವಂತವಾಗಿ ಬಂದಳು!!

LEAVE A REPLY

Please enter your comment!
Please enter your name here