ಮಂಗಳೂರು ‌:ಫ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ : ಪೊಲೀಸರಿಂದ ಮೂವರ ಬಂಧನ..!

0

ಮಂಗಳೂರು ‌: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ವೆಲೆನ್ಸಿಯಾ ಫ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಯ ಮೇಲೆ ಮಂಗಳೂರು ಪೊಲೀಸರು ದಾಳಿ ನಡೆಸಿ ಇಬ್ಬರು ಹುಡುಗಿಯರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.

ಅಪಾರ್ಟ್‌ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆಧಾರದ ಮೇರೆಗೆ ಪಾಂಡೇಶ್ವರ ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಅವರ ಪೊಲೀಸ್ ತಂಡ ದಾಳಿ ನಡೆಸಿದ್ದಾರೆ.ಅಫೀಜ್ ಎಂಬ ವ್ಯಕ್ತಿ ಫ್ಲ್ಯಾಟ್ ಒಂದರಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದ,ದಾಳಿಯ ಸಮಯದಲ್ಲಿ ಇಬ್ಬರು ಬೆಂಗಳೂರು ಮೂಲದ ಹುಡುಗಿಯರನ್ನು ರಕ್ಷಿಸಿದ್ದಾರೆ.ಗಣೇಶ್ ಶೆಟ್ಟಿ, ಅಫೀಜ್ ಮತ್ತು ಮಹಿಳೆ ಹರಿಣಾಕ್ಷಿ ಎಂಬವಳನ್ನು ಬಂಧಿಸಿದ್ದಾರೆ.

ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.


See also  ಉಡುಪಿಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಿಸಲಾಗಿದೆ | Private bus prices in Udupi have been revised.

LEAVE A REPLY

Please enter your comment!
Please enter your name here