ಉಡುಪಿ: ನಗರದ ಸರ್ಕಾರಿ ಆಸ್ಪತ್ರೆಯ ಮುಂದೆ ಎಸೆದ ನವಜಾತ ಶಿಶು ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ನವಜಾತ ಹೆಣ್ಣು ಮಗುವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರಿನ ಮಾಂಸಹಾರಿ ರೆಸ್ಟೋರೆಂಟ್ ಬಳಿ ಕಸದ ಬಕೆಟ್‌ಗೆ ಎಸೆದು ಹೋಗಿದ್ದಾರೆ.
ಇಂದು ಬೆಳಿಗ್ಗೆ ಪುರಸಭೆಯ ಕ್ಲೀನರ್‌ಗಳು ಹೊಟೇಲ್‌ನವರು ಎಸೆದ ತ್ಯಾಜ್ಯಗಳನ್ನು ಸಂಗ್ರಹಿಸಲು ಜಮಾಯಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ನವಜಾತ ಶಿಶು ಅಳುವುದನ್ನು ಗಮನಿಸಿದ ಕಾರ್ಮಿಕರು ತ್ಯಾಜ್ಯ ತುಂಬಿದ ಪೈಂಟ್ ಡಬ್ಬಿಯೊಳಗೆ ಪತ್ತೆಯಾಗಿದ್ದು, ಮಗುವನ್ನು ನಿತ್ಯಾನಂದ ಒಳಕಾಡು ಸಹಾಯದಿಂದ ಆಸ್ಪತ್ರೆಗೆ ಒಪ್ಪಿಸಿದ್ದರು.
ಸದ್ಯಮಗು 1.200 ಗ್ರಾಮ್ ತೂಕವಿದ್ದು, ಎನ್ ಐಸಿಯು ನಲ್ಲಿಟ್ಟು ಶುಶ್ರೂಶೆ ಮಾಡಲಾಗುತ್ತಿದೆ ಎಂದು ವರದಿ ತಿಳಿದು ಬಂದಿದೆ.