ದ್ವಿಚಕ್ರ ವಾಹನಗಳ ಬೆಲೆ ಕಡಿಮೆಯಾಗುತ್ತಾ ? ಇಂದು ಮಹತ್ವದ ನಿರ್ಧಾರ !

0

ಆಗಸ್ಟ್ 27: ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಲು ಜಿಎಸ್ಟಿ ಕೌನ್ಸಿಲ್ ಪರಿಗಣಿಸುತ್ತದೆ, ಐಷಾರಾಮಿ ಅಥವಾ ಸಿನ್ ತೆರಿಗೆಯ ಗುಂಪಿಗೆ ದ್ವಿಚಕ್ರ ವಾಹನಗಳ ಮಾರಾಟ ಸೇರದಿದ್ದುದರಿಂದ ತೆರಿಗೆ ದರ ಪರಿಸ್ಕರಣೆ ಅಗತ್ಯ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ಮಾರಾಟ ಮತ್ತು ಬೇಡಿಕೆ ಇನ್ನಷ್ಟು ಉತ್ತಮವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ದ್ವಿಚಕ್ರ ವಾಹನಗಳ ಜಿಎಸ್‌ಟಿ ದರ ಪ್ರಸ್ತುತ 28% ರಷ್ಟಿದೆ. ಇದನ್ನು 18% ಗೆ ಇಳಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಂದು ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ನ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ. ಈ ಸಭೆಯಲ್ಲಿ ರಾಜ್ಯಗಳಿಗೆ ಪರಿಹಾರದ ಏಕ-ಹಂತದ ಕಾರ್ಯಸೂಚಿಯನ್ನು ಚರ್ಚಿಸಲು ಸಜ್ಜಾಗಿದೆ ಹಾಗೂ ಪರಿಹಾರದ ಸಮಸ್ಯೆಯನ್ನು ಪರಿಹರಿಸಲು ಮಾರುಕಟ್ಟೆ ಸಾಲ ಪಡೆಯುವ ವಿಷಯದಲ್ಲಿ ಒಮ್ಮತವನ್ನು ತಲುಪಲು ಸಭೆ ಪ್ರಯತ್ನಿಸಲಿದೆ.

ಆಗಸ್ಟ್ 2019 ರಿಂದ ಸೆಸ್ ವಿಧಿಸುವುದರಿಂದ ಬರುವ ಆದಾಯವು ಕ್ಷೀಣಿಸಲು ಪ್ರಾರಂಭಿಸಿದ ನಂತರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದು ಷೇರುಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ದ್ವಿಚಕ್ರ ವಾಹನಗಳಿಗೆ ಸಂಬಂದಿಸಿದ ಕಂಪನಿಗಳು ಭಾರೀ ಪ್ರಮಾಣದ ಏರಿಕೆ ಕಂಡಿದ್ದು ಇಂದಿನ ನಿರ್ಧಾರ ಕೂಡ ಪರಿಣಾಮ ಬೀರಲಿದೆ.

See also  ಪ್ರಾಥಮಿಕ ಸಂಪರ್ಕಗಳನ್ನು ಕಂಡುಹಿಡಿಯಲು ಸಾರ್ವಜನಿಕರ ಸಹಕಾರವನ್ನು ಬಯಸುತ್ತದೆ - ಉಡುಪಿ ಡಿಸಿ

LEAVE A REPLY

Please enter your comment!
Please enter your name here