ಪುತ್ತೂರು: ಬಾವಿಯ ಆವರಣಗೋಡೆಗೆ ಢಿಕ್ಕಿ ಹೊಡೆದ ಲಾರಿ!

0


ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಅಟಲ್ ನಗರ ಎಂಬಲ್ಲಿ ಲಾರಿಯೊಂದು ರಸ್ತೆಗೆ ತಾಗಿಕೊಂಡಿರುವ ಬಾವಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಾವಿಯ ರಸ್ತೆಗೆ ಅಭಿಮುಖವಾಗಿರುವ ಗೋಡೆಯ ಪಾರ್ಶ್ವ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಲಾರಿಯು ಬಾವಿಯ ಅಂಚಿನಲ್ಲಿ ನಿಂತಿದ್ದು ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಆದರೇ ತಡೆಗೋಡೆಯು ಸಂಪೂರ್ಣ ಕುಸಿದಿರುವುದರಿಂದ ಲಘು ವಾಹನಗಳಿಗೆ ಅಪಾಯ ಎದುರಾಗಿದೆ. ಬಾವಿಯು ರಸ್ತೆಯ ಅಂಚಿನಲ್ಲಿರುವುದರಿಂದ, ಘನ ವಾಹನಗಳಿಗೆ ರಸ್ತೆ ಕಲ್ಪಿಸುವ ಸಮಯದಲ್ಲಿ ಲಘು ವಾಹನಗಳು ಎಡ ಬದಿಗೆ ಸರಿದರೇ ತೆರೆದ ಭಾವಿ ಭಾರೀ ಅನಾಹುತಕ್ಕೆ ಕಾರಣಾವಾಗುವ ಸಾಧ್ಯತೆ ಇದೆ.

See also  ಮಂಗಳೂರು : ಸೊಳ್ಳೆ ಉತ್ಪತ್ತಿ ಜಾಗ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಿ - ಜಿಲ್ಲಾಧಿಕಾರಿ

LEAVE A REPLY

Please enter your comment!
Please enter your name here