ಇದು ಭಾರತದ ರಿಟೇಲ್ ಮಾರ್ಕೆಟ್ ನ ಗ್ರಾಹಕರ ಮೇಲೆ ಹಿಡಿತ ಸಾದಿಸಲು ನಡೆಯುತ್ತಿರುವ ಕಾದಾಟ. ಭಾರತದ ಎರಡು ದೈತ್ಯ ಕಂಪನಿಗಳ ಸಂಘರ್ಷವು ಈಗ ದೆಹಲಿ ಹೈಕೋರ್ಟ್ ನ ಮೆಟ್ಟಿಲೇರಿದೆ. ಈ ಕಾರ್ಪೊರೇಟ್ ಕದನದ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ರಿಲೆಯನ್ಸ್ – ಫ್ಯೂಚರ್ ರಿಟೇಲ್ ಡೀಲ್ ?
ಮಾರ್ಚ್ ನಲ್ಲಿ ಕೋವಿಡ್ -19 ರ ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್ಡೌನ್ ನಂತರ ಫ್ಯೂಚರ್ ಗ್ರೂಪ್ನ ರಿಟೇಲ್ ವ್ಯಾಪಾರವು ಭಾರಿ ಮೊತ್ತದ ನಷ್ಟಕ್ಕೆ ಒಳಗಾಯಿತು. ಅದರ ಅನೇಕ ಪ್ರೀಮಿಯಂ ಫುಡ್ ಮಾರಾಟ ವಿಭಾಗದ ಫುಡ್ಹಾಲ್ ಮತ್ತು ಬ್ರಾಂಡ್ ಫ್ಯಾಕ್ಟರಿಯಲ್ಲಿನ ಮಾರಾಟವು ಲಾಕ್ಡೌನ್ನಲ್ಲಿ ಸ್ಥಗಿತಗೊಂಡಿತ್ತು.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಗಸ್ಟ್ ನಲ್ಲಿ ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್ನ ವ್ಯವಹಾರಗಳನ್ನು, 24,713 ಕೋಟಿಗೆ ರೂ ಗೆ ಸ್ವಾಧೀನಪಡಿಸಿಕೊಂಡಿತು. ಕಳೆದ ವರ್ಷ 2020 ರ ಆಗಸ್ಟ್ನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ನೊಂದಿಗೆ ಬಿಯಾನಿಯ ಫ್ಯೂಚರ್ ಗ್ರೂಪ್ ರಿಟೇಲ್ , ಸಗಟು, ಲಾಜಿಸ್ಟಿಕ್ಸ್ ಅನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿತು. ಒಪ್ಪಂದದ ಒಂದು ಭಾಗವಾಗಿ, ಫ್ಯೂಚರ್ ರಿಟೇಲ್ ತನ್ನ ಸೂಪರ್ಮಾರ್ಕೆಟ್ ಭಾಗವಾದ ಬಿಗ್ ಬಜಾರ್, ಪ್ರೀಮಿಯಂ ಫುಡ್ ಸಪ್ಲೈ ಘಟಕ , ಫುಡ್ಹಾಲ್ ಮತ್ತು ಫ್ಯಾಷನ್ ಮತ್ತು ಸೂಪರ್ಮಾರ್ಟ್ ಬ್ರಾಂಡ್ ಫ್ಯಾಕ್ಟರಿಯ ರಿಟೇಲ್ ಹಾಗೂ ಮತ್ತು ಸಗಟು ಘಟಕಗಳನ್ನು ರಿಲಯನ್ಸ್ ರಿಟೇಲ್ ಗೆ ಮಾರಾಟ ಮಾಡುತ್ತದೆ.
ಅಮೆಜಾನ್ ನ್ಯಾಯಾಲಯದ ಮೊರೆ ಹೋಗಿ ಡೀಲ್ ಸ್ಥಗಿತಗೊಳ್ಳುವಂತೆ ಮಧ್ಯಸ್ಥಿಕೆ ಆದೇಶವನ್ನು ಪರಿಗಣಿಸಲು ಮತ್ತು ಒಪ್ಪಂದವನ್ನು ಅನುಮೋದಿಸಬಾರದು ಎಂದು ಒತ್ತಾಯಿಸಿತು.
ಫ್ಯೂಚರ್-ರಿಲಯನ್ಸ್ ಒಪ್ಪಂದಕ್ಕೆ ಅಮೆಜಾನ್ ನ ತಡೆ ಯಾಕೆ?
ಕಳೆದ ವರ್ಷ, ಬಿಯಾನಿಯ ಫ್ಯೂಚರ್ ರಿಟೇಲ್ ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಜೊತೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದದ ಭಾಗವಾಗಿ, ಫ್ಯೂಚರ್ ರಿಟೇಲ್ ವ್ಯಾಪಾರದ ಪ್ರೊಮೋಟರ್ ಫ್ಯೂಚರ್ ಕೂಪನ್ಗಳಲ್ಲಿ ಶೇ 49 ರಷ್ಟು ಪಾಲನ್ನು ಅಮೆಜಾನ್ ಸ್ವಾಧೀನಪಡಿಸಿಕೊಂಡಿತ್ತು.
ಫ್ಯೂಚರ್ ರಿಟೇಲ್ ತನ್ನ ಉತ್ಪನ್ನಗಳನ್ನು ಅಮೆಜಾನ್ನ ಆನ್ಲೈನ್ ಮಾರುಕಟ್ಟೆ ಸ್ಥಳದಲ್ಲಿ ಇರಿಸಲು ಸಾಧ್ಯವಾಗುತ್ತದೆ, ಆದರೆ ಫ್ಯೂಚರ್ ರಿಟೇಲ್ ಉತ್ಪನ್ನಗಳು ಅಮೆಜಾನ್ನ ಹೊಸ ಯೋಜನೆಯ ಒಂದು ಭಾಗವಾಗಲಿದೆ ಎಂದು ಇಬ್ಬರೂ ಒಪ್ಪಿಕೊಂಡಿದ್ದರು, ಇದು ಗ್ರಾಹಕರ ಎರಡು ಗಂಟೆಗಳ ಒಳಗೆ ಆಯ್ದ ನಗರಗಳಲ್ಲಿ ಉತ್ಪನ್ನಗಳನ್ನು ತಲುಪಿಸುವ ಉದ್ದೇಶವನ್ನು ಹೊಂದಿತ್ತು.
ಅಮೆಜಾನ್ ಈಗ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಗೆ ಪತ್ರವನ್ನು ಕಳುಹಿಸಿದೆ, ಏಕೆಂದರೆ ಮಧ್ಯಂತರ ತಡೆ ಆದೇಶ ಇರುವುದರಿಂದ ಫ್ಯೂಚರ್ ಗ್ರೂಪ್-ರಿಲಯನ್ಸ್ ಒಪ್ಪಂದವನ್ನು ಅನುಮೋದಿಸಬೇಡಿ ಎಂದು ಕೇಳಿದೆ.
ತನ್ನ ಕಡೆಯಿಂದ, ಫ್ಯೂಚರ್ ಗ್ರೂಪ್ ತಾನು ಕಂಪನಿಯ ಯಾವುದೇ ಪಾಲನ್ನು ಮಾರಾಟ ಮಾಡಿಲ್ಲ ಮತ್ತು ಕೇವಲ ತನ್ನ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಮತ್ತು ಆದ್ದರಿಂದ ಒಪ್ಪಂದದ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.
ದೆಹಲಿ ನ್ಯಾಯಾಲಯದ ತೀರ್ಪು ಈ ಎರಡು ದೈತ್ಯ ಕಂಪನಿಗಳು ಭಾರತದ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.