ಉಡುಪಿ : ಜಿಲ್ಲಾ ಆಸ್ಪತ್ರೆಯ ವಿರುದ್ಧ ಜನರ ಆಕ್ರೋಶ..!

0

ಮಹಿಳೆಗೆ ಕೊರೋನಾ ಸೋಂಕು ಸುಳ್ಳು ವರದಿ ಪ್ರಕರಣ : ಜಿಲ್ಲಾ ಆಸ್ಪತ್ರೆಯ ವಿರುದ್ಧ ಜನರ ಆಕ್ರೋಶ…

ಉಡುಪಿ : ಉಡುಪಿ ಜಿಲ್ಲೆಯ ಇಂದಿರನಗರದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಅವರ ಪತ್ನಿ ರಕ್ಷಾ ಎನ್ನುವವರು ಅಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ದಿಂದ ಮೃತ ಪಟ್ಟಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

ಮರೋಣೋತ್ತರ ಪರೀಕ್ಷೆಯಲ್ಲಿ ಮೃತ ಮಹಿಳೆಗೆ ಕೊರೊನಾ ಪಾಸಿಟಿವ್ ಇದೆ ವರದಿ ನೀಡಿದ್ದು ಇದು ಸುಳ್ಳು ಎಂದು ಆರೋಪಿಸಿ ಮೃತ ಮಹಿಳೆಯ ಕುಟುಂಬಸ್ಥರು ಜಿಲ್ಲಾಸ್ಪತ್ರೆಯ ಎದುರುಗಡೆ ಇಂದು ಪ್ರತಿಭಟನೆ ನಡೆಸಿದ್ದಾರೆ.

ಕೊರೊನಾ ಪಾಸಿಟಿವ್ ವರದಿಯಲ್ಲೂ ಜಿಲ್ಲಾಸ್ಪತ್ರೆ ತಪ್ಪು ಮಾಹಿತಿ ನೀಡಿದೆ.ನಮಗೆ ಮಹಿಳೆಯ ಮೃತ ದೇಹ ಕೊಡಿ ಎಂದು ಕುಟುಂಬಸ್ಥರು ಅಗ್ರಹಿಸಿದ್ದಾರೆ.ಆದರೆ ಕೊವಿಡ್ ಪಾಸಿಟಿವ್ ಬಂದ ಕಾರಣ ಮೃತ ದೇಹ ನೀಡಲಾಗುವುದಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶ ಗೊಂಡ ಮಹಿಳೆಯ ಕುಟುಂಬಸ್ಥರುಕೊರೊನಾ ಹೆಸರಲ್ಲಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ಸ್ಥಳಕ್ಕೆ ಬಂದ ಶಾಸಕರು ಸೇರಿದ್ದ ಜನರನ್ನು ಸಮಾಧಾನ ಗೊಳಿಸಲು ಮುಂದಾದಾಗ ಅಕ್ರೋಶ ಭರಿತ ವ್ಯಕ್ತಿಯೊಬ್ಬ “ಈ ವಿಷಯದಲ್ಲಿ ನಿಮ್ಮದೂ ಪಾಲಿದೆ”ಎಂದು ಏರು ಧ್ವನಿಯಲ್ಲಿ ಆರೋಪಿಸಿದ್ದಾನೆ ಎನ್ನಲಾಗಿದೆ.ಈ ಸಂಧರ್ಭದಲ್ಲಿ ಶಾಸಕ ರಘುಪತಿ ತಾಳ್ಮೆಯಿಂದ ಕುಟುಂಬಸ್ಥರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು ಎಂದು ತಿಳಿದು ಬಂದಿದೆ.

ಆ. 21 ರಂದು ಮಹಿಳೆ ಮಿಷನ್ ಆಸ್ಪತ್ರೆಯ ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಮ್ರತ್ಯು ಆಗಿದೆ ಎನ್ನಲಾಗಿದೆ.ದಿನಾಂಕ ನಮೂದಿಸಿಕೊರೋನಾ ಪಾಸಿಟಿವ್ ಎಂದು ಅಜ್ಜರಕಾಡು ಆಸ್ಪತ್ರೆಯ ವೈದ್ಯರು ವರದಿ ನೀಡಿದ್ದಾರೆ.

ಕುಟುಂಬಿಕರು,ಸ್ಥಳೀಯರು,ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಉಡುಪಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಸೇರಿದ್ದರು.ನಂತರ ಅವರೆಲ್ಲಾ ಆಕ್ರೋಶಗೊಂಡು ಮ್ರತದೇಹ ನೀಡುವಂತೆ ಆಗ್ರಹಿಸಿದ್ದಾರೆ.ನಂತರ ಅಜ್ಜರಕಾಡು ಆಸ್ಪತ್ರೆಯ ಶವಗಾರದ ಬಳಿ ಉದ್ವಿಗ್ನ ಪರಿಸ್ಥಿತಿ ಕಂಡು ಬಂತ್ತು.ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದರು.

ಸ್ಥಳಕ್ಕೆ ಡಿವೈಸ್ಪಿ ಜಯಶಂಕರ್ ,ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ ಭೇಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿಜನಕದ್ದಾರೆ.

See also  ಎನ್‌ಎಚ್ ರಸ್ತೆ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ

LEAVE A REPLY

Please enter your comment!
Please enter your name here