ಮಧೂರು ಶ್ರೀ ಕ್ಷೇತ್ರದ ಅರ್ಚಕರಾಗಿದ್ದ ವೆಂಕಟಕೃಷ್ಣ ಕಲ್ಲೂರಾಯ ವಿಧಿವಶ!

0

ಕಾಸರಗೋಡು : ಮಧೂರು ಶ್ರೀ ಮಧನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 70 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಹಿರಿಯ ಅರ್ಚಕ ವೆಂಕಟಕೃಷ್ಣ ಕಲ್ಲೂರಾಯ(88) ಅವರು 13 ಸೆಪ್ಟೆಂಬರ್ ಭಾನುವಾರದಂದು ವಿಧಿವಶರಾಗಿದ್ದಾರೆ. ಮೂವರು ಪುತ್ರರನ್ನು ಹಾಗೂ ಒಬ್ಬಳು ಪುತ್ರಿಯನ್ನು ಅಗಲಿದ ಇವರು ಕೊಕ್ಕಡದಲ್ಲಿರುವ ಮಗಳ ಮನೆಯಲ್ಲಿ ನಿಧನ ಹೊಂದಿದರು.

ಕಲಾಪ್ರಿಯರಾಗಿದ್ದ ಇವರು ಸ್ವತಃ ಯಕ್ಷಗಾನ ಕಲಾವಿದರಾಗಿದ್ದರು. ಉತ್ಸವಗಳಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವಾಗ ಮಾಡುವ ನೃತ್ಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದರು .

ಇವರಿಗೆ ದೇವರು ಚಿರಶಾಂತಿಯನ್ನು ನೀಡಲಿ.

See also  ಭಾರತದ ಕಾರ್ಪೊರೇಟ್ ಮಹಾಯುದ್ದ! Reliance Vs Amazon

LEAVE A REPLY

Please enter your comment!
Please enter your name here