ಗೋಪಾಲಕರನ್ನು ಸನ್ಮಾನಿಸಿದ ಯಶ್ ಪಾಲ್ ಸುವರ್ಣ

0

ನೀಲಾವರ ಗೋಶಾಲೆಯ ಗೋವುಗಳ ನಿರ್ವಹಣೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ 33 ಗೋಪಾಲಕರನ್ನು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಯಶ್ ಪಾಲ್ ಸುವರ್ಣ ಸನ್ಮಾನಿಸಿ ಗೌರವಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ನೀಲಾವರ ಗೋಶಾಲೆಯ 25 ಗೋವುಗಳನ್ನು ದತ್ತು ಸ್ವೀಕಾರ ದ ಮೂಲಕ ವಿಶಿಷ್ಟವಾಗಿ ಆಚರಿಸಿರುವ ಶ್ರೀ ಯಶ್ ಪಾಲ್ ಸುವರ್ಣ ರವರು, ಇಂದು ನೀಲಾವರ ಗೋಶಾಲೆಯಲ್ಲಿ ಎಲೆ ಮರೆಯ ಕಾಯಿಯಂತೆ ಅಮೂಲ್ಯ ಸೇವೆ ಸಲ್ಲಿಸುತ್ತಾ ಗೋಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಗೋಪಾಲಕರನ್ನು ಗೌರವಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಅಭಿಯಾನದ ಸಂಚಾಲಕರಾದ ಶ್ರೀ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ರೀ ವಾಸುದೇವ ಭಟ್ ಪೆರಂಪಳ್ಳಿ, ಬಿಜೆಪಿ ಕಾಪು ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಸಚಿನ್ ಪಿತ್ರೋಡಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಶ್ರೀ ಮಹೇಶ್ ಬೈಲೂರು, ಶ್ರೀ ಯಾದವ ಪೂಜಾರಿ ಕಾಪು, ಶ್ರೀಮತಿ ನೀತಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು.


 

See also  ಮೀನುಗಾರರು ಮುಖ್ಯಮಂತ್ರಿಯೊಂದಿಗೆ ಭೇಟಿ | Fishermen meets CM | Udupi News

LEAVE A REPLY

Please enter your comment!
Please enter your name here