ಯಶವಂತಪುರ -ಕಾರವಾರ ರೈಲು ಸೇವೆ ಇಂದಿನಿಂದ ಆರಂಭ !

0


ಸೆಪ್ಟೆಂಬರ್ 4: ರೈಲ್ವೆ ಇಲಾಖೆಯು ವಿಶೇಷ ಮತ್ತು ನಿಯಮಿತ ರೈಲುಗಳನ್ನು ನಡೆಸಲು ಚಿಂತನೆ ನಡೆಸಿದೆ. ಇಂದಿನಿಂದ ಯಶವಂತಪುರ -ಕಾರವಾರ ರೈಲು ಸೇವೆ ಯನ್ನು ಪ್ರಾರಂಭಿಸುವುದಾಗಿ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ನೆಲಮಂಗಲ – ಶ್ರವಣಬೆಳಗೋಳ – ಪಡಿಲ್ ಮೂಲಕ ಯಶವಂತಪುರದಿಂದ ಕಾರವಾರ ದವರೆಗೆ ಚಲಿಸುವ ರೈಲು ಆರಂಭವಾಗಲಿದೆ. ಮುಂದಿನ ಸೂಚನೆ ಬರುವವರೆಗೆ ಈ ರೈಲುಗಳು ಸಂಚಾರಕ್ಕೆ ಲಭ್ಯವಿದ್ದು, ಕೊರೊನ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಇಲಾಖೆ ಹೇಳಿದೆ.

ರೈಲು ಸಂಖ್ಯೆ 06585 ಯಶವಂತಪುರ-ಕಾರವಾರ ದೈನಂದಿನ ಎಕ್ಸ್‌ಪ್ರೆಸ್ ಶುಕ್ರವಾರ ಸಂಜೆ 6.45 ಕ್ಕೆ ಯಶವಂತಪುರದಿಂದ ಹೊರಡಲಿದೆ ಮತ್ತು ಮರುದಿನ ಬೆಳಿಗ್ಗೆ 8.25 ಕ್ಕೆ ಕಾರವಾರ ತಲುಪಲಿದೆ. ರೈಲು ಸಂಖ್ಯೆ 06586 ಕಾರವಾರ-ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ ಶನಿವಾರ ಸಂಜೆ 6 ಗಂಟೆಗೆ ಕಾರವಾರ ದಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ.

See also  ಉಡುಪಿಯಲ್ಲಿ ನಿಲ್ಲದ ಕೋವಿಡ್-19 ಅಟ್ಟಹಾಸ !!

LEAVE A REPLY

Please enter your comment!
Please enter your name here