ಮೀನುಗಾರಿಕೆ ಶೀಘ್ರದಲ್ಲೇ ಪ್ರಾರಂಭ!!

0

ದಕ್ಷಿಣ ಕನ್ನಡದಲ್ಲಿ ಆಳ ಸಮುದ್ರ ಮೀನುಗಾರಿಕೆ ಸೆಪ್ಟೆಂಬರ್ 1 ರಂದು ಪುನರಾರಂಭಗೊಳ್ಳಲಿದೆ ಎಂದು ಕೋಟೆ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ,ಆಳ ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿರುವ 75% ಕಾರ್ಮಿಕರು ರಾಜ್ಯದ ಹೊರಗಿನವರು ಎಂದು ಸಚಿವರು ಹೇಳಿದರು. ಅವರು ರಾಜ್ಯ ಪ್ರವೇಶಿಸುವ ಮೊದಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅವರು COVID-19 ಪರೀಕ್ಷೆಗೆ ಒಳಗಾಗಬೇಕು.

ಸರ್ಕಾರ ಅವರಿಗೆ ಉಚಿತ COVID ಪರೀಕ್ಷೆಗಳನ್ನು ನಡೆಸಲಿದೆ. ನಂತರ, ಅವರು ಕೆಲಸಕ್ಕೆ ಹೋಗುವ ಮೊದಲು 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕು, ಅಂತಹ ಕಾರ್ಮಿಕರ ಪ್ರಯಾಣ ಮತ್ತು ಪ್ರವೇಶದ ಜವಾಬ್ದಾರಿಯನ್ನು ದೋಣಿ ಮಾಲೀಕರು ತೆಗೆದುಕೊಳ್ಳಬೇಕು.

ಮೀನು ಮಾರುಕಟ್ಟೆಯನ್ನು, ಮೀನುಗಾರಿಕಾ ಇಲಾಖೆಯು ಪ್ರತಿದಿನ ಸ್ವಚ್ಚ ಗೊಳಿಸಬೇಕು ಎಂದು ಹೇಳಿದರು.

 


 

See also  ಅಕ್ರಮ ಆಸ್ತಿ ಪ್ರಕರಣ: ಇನ್ಸ್ಪೆಕ್ಟರ್ ಗಂಗಿರೆಡ್ಡಿ ನ್ಯಾಯಾಂಗ ಬಂಧನ!

LEAVE A REPLY

Please enter your comment!
Please enter your name here