ಕ್ರಿಕೆಟ್ ಜೀವನಕ್ಕೆ ಯುಗಾಂತ್ಯ : ಎಂಎಸ್ ಧೋನಿ ನಿವೃತ್ತಿ !

0

ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದ್ದಾರೆ. ಸ್ವತಃ  ತಾವೇ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಮೂಲಕ ದೃಡೀಕರಿಸಿದ್ದಾರೆ.

2007ರ ಟಿ20 ವಿಶ್ವಕಪ್, 2011 ರಲ್ಲಿ ಏಕದಿನ ವಿಶ್ವಕಪ್ ಮತ್ತು 2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಎಂಬ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಧೋನಿ ಸೀಮಿತ ಓವರ್ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕನಾಗಿ ನಿವೃತ್ತರಾದರು. 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅವರು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು, ಇದರಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ರೋಚಕ ಹಂತದಲ್ಲಿ ಸೋತಿದ್ದಾದರೂ  ಅದ್ಭುತ ಪ್ರದರ್ಶನ ದಿಂದ ಪ್ರೇಕ್ಷಕರ ಮನ ಗೆದ್ದಿದ್ದರು.

2014 ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡುತ್ತಾ, 2015 ರ ವಿಶ್ವಕಪ್ ಮತ್ತು 2016 ರ ವಿಶ್ವ ಟಿ20 ಸೆಮಿಫೈನಲ್‌ಗೆ ಭಾರತವನ್ನು ಮುನ್ನಡೆಸಿದರು. 350 ಪಂದ್ಯಗಳಿಂದ 10,733 ರನ್ ಗಳಿಸಿರುವ ಧೋನಿ, ಏಕದಿನದಲ್ಲಿ ಭಾರತದ ಸಾರ್ವಕಾಲಿಕ ರನ್-ಸ್ಕೋರರ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

See also  ಭಾರತವು 2020ರ ಅಂತ್ಯದ ವೇಳೆಗೆ ಕರೋನವೈರಸ್ ಲಸಿಕೆ ಹೊಂದಲಿದೆ

LEAVE A REPLY

Please enter your comment!
Please enter your name here