ಐಪಿಎಲ್ ಟೈಟಲ್ ಸ್ಪೊನ್ಸರ್ಶಿಪ್ ರದ್ದಾಗಿದ್ದು ಆರ್ಥಿಕ ಬಿಕ್ಕಟಲ್ಲ: ಸೌರವ್ ಗಂಗೂಲಿ

0

ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪ್ರಾರಂಭವಾಗುವ 2020 ಐಪಿಎಲ್ನಲ್ಲಿ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಲು ಬಿಸಿಸಿಐ ಮತ್ತು ವಿವೊ ಗುರುವಾರ ನಿರ್ಧರಿಸಿದೆ.

ಶೀರ್ಷಿಕೆ ಪ್ರಾಯೋಜಕತ್ವವು ಐಪಿಎಲ್‌ನ ವಾಣಿಜ್ಯ ಆದಾಯದ ಮಹತ್ವದ ಭಾಗವಾಗಿದೆ, ಅದರಲ್ಲಿ ಅರ್ಧದಷ್ಟು ಭಾಗವನ್ನು ಎಂಟು ಫ್ರಾಂಚೈಸಿಗಳು ಹಂಚಿಕೊಳ್ಳುತ್ತವೆ. ವಿವೋ ಐಪಿಎಲ್ ಶೀರ್ಷಿಕೆ-ಪ್ರಾಯೋಜಕತ್ವವನ್ನು 2018 ರಿಂದ 2022 ರವರೆಗೆ ಐದು ವರ್ಷಗಳ ಕಾಲ 2190 ಕೋಟಿ ರೂ.ಗಳಿಗೆ ಒಪ್ಪಂದ ಮಾಡಲಾಗಿತ್ತು

ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್ ಫೋನ್ ಕಂಪನಿ ವಿವೊ ಹಿಂದೆ ಸರಿದಿರುವುದು ನಮಗೆ ಸಣ್ಣ ಹಿನ್ನಡೆ ಅನ್ನೋದು ಬಿಟ್ಟರೆ ಅದೇನು ಆರ್ಥಿಕ ಬಿಕ್ಕಟಲ್ಲ ಎಂದು ಬಿಸಿಸಿಐ ನ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ‘ಪ್ರತೀ ಸಮಸ್ಯೆಗಳಿಗೂ ಎರಡನೇ ದಾರಿ ಇದ್ದೇ ಇರುತ್ತದೆ. ಸಂವೇದನಾಶೀಲ ಬ್ರಾಂಡ್ ಗಳು , ಕಾರ್ಪೊರೇಟ್ ಗಳು ಪ್ಲಾನ್ ‘ಬಿ’ಗೆ ಕೈ ಜೋಡಿಸಬಲ್ಲದು ಎಂದಿದ್ದಾರೆ’.

See also  ಆರ್‌ಸಿಬಿ ಐಪಿಎಲ್ 2020 ಗೆಲ್ಲಬಹುದೇ?

LEAVE A REPLY

Please enter your comment!
Please enter your name here