ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕ ರಾಜೀವಗಾಂಧಿ; ಸೊರಕೆ

0

ಭಾರತ ದೇಶದಾದ್ಯಂತ ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿಯನ್ನು ಮಾಡಿದ, ದೇಶದಲ್ಲಿ ಕಂಪ್ಯೂಟರನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿದ, ಪಂಚಾಯತ್ ರಾಜ್ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು, ಹದಿನೆಂಟು ವರ್ಷ ವಯೋಮಾನದ ಯುವಕ-ಯುವತಿಯರಿಗೆ ಮತದಾನದ ಹಕ್ಕನ್ನು ನೀಡುವ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟ ಯುವ-ಭಾರತದ ಪರಿಕಲ್ಪನೆಯೊಂದಿಗೆ ಪರಿಣಾಮಕಾರಿ ಆಡಳಿತ ನಡೆಸಿದ್ದ ಭಾರತ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.

ಅದೇ ರೀತಿ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರಾಗಿ, ಸಮಗ್ರ ಭೂ-ಮಸೂದೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಬಡವರ ಪಾಲಿನ ಆಶಾಕಿರಣ ವಾಗಿ ಮೂಡಿಬಂದಿದ್ದವರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಎಂದರು.

ಅವರು, ಇಂದು ಕಾಪು ರಾಜೀವ್ ಭವನದಲ್ಲಿ ನಡೆದ ಈ ಇಬ್ಬರು ಮಹಾನ್ ನಾಯಕರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರ ಭಾವಚಿತ್ರವಿನ್ನಿಟ್ಟು ದೀಪವನ್ನು ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅವರ ರಾಜಕೀಯ ಬದ್ಧತೆ, ಜನಪರ ಕಾಳಜಿ ಮತ್ತು ಕ್ರಾಂತಿಕಾರಿ ಸಾಧನೆಗಳನ್ನು ಸ್ಮರಿಸಿದರು.

ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್ ಮಾತನಾಡಿ ಈ ಇಬ್ಬರು ಮಹಾನ್ ನಾಯಕರುಗಳ ಸಾಧನೆಗಳನ್ನು ಉಲ್ಲೇಖಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ವಂದಿಸಿದರು.

ಕಾರ್ಯಕ್ರಮದಲ್ಲಿ ಶಿವಾಜಿ ಎಸ್. ಸುವರ್ಣ, ಯು.ಸಿ.ಶೇಕಬ್ಬ, ಪ್ರಭಾ ಬಿ. ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಳ,ನವೀನ್ ಎನ್.ಶೆಟ್ಟಿ, ಅಖಿಲೇಶ್ ಕೋಟ್ಯಾನ್, ಸರಸು ಡಿ. ಬಂಗೇರ, ಫಾರೂಕ್ ಚಂದ್ರನಗರ, ಪ್ರಶಾಂತ್ ಜತ್ತನ್ನ, ಅಶೋಕ್ ರಾವ್ ಕಟಪಾಡಿ, ಶಾಂತಲತ ಶೆಟ್ಟಿ, ಸೌಮ್ಯಾ ಎಸ್., ಇಮ್ರಾನ್ ಮಜೂರ್, ನಾಗೇಶ್ ಸುವರ್ಣ, ಹರೀಶ್ ನಾಯಕ್, ಲಕ್ಷ್ಮೀಶii ತಂತ್ರಿ, ದೀಪಕ್ ಎರ್ಮಾಳ್, ಸುನಿಲ್ ಡಿ. ಬಂಗೇರ, ಕೇಶವ ಹೆಜಮಾಡಿ, ಸುಧೀರ್ ಕರ್ಕೇರ, ಪ್ರಭಾಕರ್ ಪೂಜಾರಿ, ನಿತಿನ್ ಸಾಲ್ಯಾನ್ ಪೊಲಿಪು ಮತ್ತಿತರ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


 

See also  ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟ :

LEAVE A REPLY

Please enter your comment!
Please enter your name here