ಎಸ್ ಪಿಬಿ ಚಿಕಿತ್ಸೆಗಾಗಿ ವಿದೇಶದಿಂದ ಬಂದ ವೈದ್ಯರ ತಂಡ?

0


ಗಾನ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ನಡುವೆ ಎಸ್ ಪಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅಂತರಾಷ್ಟ್ರೀಯ ವೈದ್ಯರ ತಂಡವನ್ನು ಕರೆಸಲಾಗಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ಬಿಗಡಾಯಿಸಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಅಂತರಾಷ್ಟ್ರೀಯ ತಜ್ನ ವೈದ್ಯರ ತಂಡ ಆಸ್ಪತ್ರೆಗೆ ಆಗಮಿಸಿದ್ದು, ಇಂದಿನಿಂದ ಚಿಕಿತ್ಸೆ ಆರಂಭಿಸಿದೆ.

ಆ.5ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಸುಬ್ರಹ್ಮಣ್ಯಂ ಅವರಿಗೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಾನ ಸಾಮ್ರಾಟ ಬಹುಬೇಗ ಗುಣಮುಖರಾಗಿ ಬಂದು ಮತ್ತೆ ಹಾಡುವಂತಾಗಲಿ ಎಂಬುದೇ ಕೋಟ್ಯಂತರ ಅಭಿಮಾನಿಗಳ ಹಾರೈಕೆ.


See also  ಸ್ವಾತಂತ್ರ್ಯೋತ್ಸವ ಧ್ಜಜಾರೋಹಣ‌ದಲ್ಲಿ ಉಲ್ಟಾ ಪಲ್ಟಾ ಆದ ಧ್ವಜ‌

LEAVE A REPLY

Please enter your comment!
Please enter your name here