ಉಡುಪಿ : ವೈದ್ಯರ ನಿರ್ಲಕ್ಷ್ಯ, ಮಹಿಳೆಯ ಸಾವು: ತನಿಖೆಗೆ ಮನೆಯವರ ಒತ್ತಾಯ

0

ಉಡುಪಿ : ಕಳೆದ ಎರಡು ದಿನಗಳ ಹಿಂದೆ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಉಡುಪಿಯ ಮಿಶನ್ ಆಸ್ಪತ್ರೆಯ ವೈದ್ಯರು ನೀಡಿದ ಇಂಜೆಕ್ಷನ್‌ ನಿಂದ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಪತಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಇಂದು ನೆಡೆದಿದೆ ಎಂದು ತಿಳಿದು ಬಂದಿದೆ.

ಉಡುಪಿಯ ಬಿಜೆಪಿ ನಗರ ಮೋರ್ಚಾ ಉಪಾಧ್ಯಕ್ಷರಾದ ಇಂದಿರಾನಗರ ನಿವಾಸಿ ಶಿವಪ್ರಸಾದ್ ಯಾನೆ ಪಚ್ಚು ಅವರ ಪತ್ನಿ ಶ್ರೀರಕ್ಷಾ (26) ಕಳೆದ ಎರಡು ದಿನದಿಂದ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಶ್ರೀರಕ್ಷಾ ಅವರಿಗೆ ಗುರುವಾರ ರಾತ್ರಿ ತಲೆ ನೋವು ಮತ್ತು ವಿಪರೀತ ವಾಂತಿಯಿಂದಾಗಿ ಬಳಲುತ್ತಿದ ಇವರು ಶುಕ್ರವಾರ ಮುಂಜಾನೆ ಮನೆಯಲ್ಲಿ ತಲೆ ತಿರುಗಿ ಬಿದ್ದಿದ್ದರು ಎನ್ನಲಾಗಿದೆ.ತಕ್ಷಣ ಅವರು ಉಡುಪಿ ನಗರದ ಮಿಶನ್ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು ಯಾವುದೋ ಚುಚ್ಚುಮದ್ದು ನೀಡಿ ಗುಣಮುಖರಾಗುತ್ತಾರೆಂದು ಶ್ರೀರಕ್ಷಾ ಅವರನ್ನು ಮನೆಗೆ ಕಳುಹಿಸಿಕೊಟ್ಟಿದ್ದರು.

ಆನಂತರ ಮನೆಗೆ ಹೋಗಿ ಮಲಗಿದ್ದ ಇವರ ಬಾಯಿಯಲ್ಲಿ ನೊರೆ ಬರುವುದನ್ನು ಕಂಡ ಮನೆಯವರು ತಕ್ಷಣ ಉಡುಪಿ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಆದಾಗಲೇ ಶ್ರೀರಕ್ಷಾ ಮೃತ ಪಟ್ಟಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಶ್ರೀರಕ್ಷಾ ಅವರಿಗೆ ಎರಡು ವರ್ಷದ ಮತ್ತು ಒಂದು ವರ್ಷದ ಗಂಡು ಮಕ್ಕಳಿದ್ದಾರೆ.ಪತ್ನಿ ಸಾವಿನಲ್ಲಿ ಸಂಶಯವಿದೆಂದು ಪತಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮೃತ ದೇಹವು ಈಗ ಉಡುಪಿಯ ಜಿಲ್ಲಾಸ್ಪತ್ರೆಯ ಶವಗಾರದಲ್ಲಿದ್ದು ನಾಳೆ ಶವ ಪರೀಕ್ಷೆ ನಡೆಯಲಿದೆ ಎಂದು ತಿಳಿಯಲಾಗಿದೆ.ವೈದ್ಯರ ನಿರ್ಲಕ್ಷ್ಯದಿಂದ ಶ್ರೀರಕ್ಷಾ ಅವರ ಸಾವಿಗೆ ಕಾರಣವಾಗಿದೆ ಎಂದು ಮನೆಯವರು ಆರೋಪಿಸಿದ್ದಾರೆ.ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿ ನಗರ ಠಾಣೆಯ ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.


 

See also  ಕೊಟೆರಾಯನ ಬೆಟ್ಟಾದಲ್ಲಿ ಭೂಕುಸಿತ

LEAVE A REPLY

Please enter your comment!
Please enter your name here