Milana Nagaraj Kannada Actress Biography | ಮಿಲನ ನಾಗರಾಜ್ ಜೀವನಚರಿತ್ರೆ

0
Milana Nagaraj

Milana Nagaraj Biography

Milana Nagaraj ಮಿಲನಾ ಬಗ್ಗೆ ನಿಮಗೆಷ್ಟು ಗೊತ್ತು?

ಕೊಲ್ಗೇಟ್ ಸ್ಮೈಲ್ ಎಂದಾಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ತಟ್ಟನೆ ನೆನಪಿಗೆ ಬರೊದು ಮಿಲನ ನಾಗರಾಜ್.
ಲವ್ ಯು ಚಿನ್ನಾ ಅಂತಲೇ ರೀಲ್ ಲೈಫ್ ನಿಂದ ರಿಯಲ್ ಜೋಡಿ ಆಗೋದಕ್ಕು ಯೋಗ ಕೂಡಿ ಬರಬೇಕು.
ಈ ನಿಟ್ಟಿನಲ್ಲಿ ನಮ್ಮ ಕನ್ನಡ ಸಿನೆಮಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ರೀಲ್ ಮತ್ತು ರಿಯಲ್ ಲೈಫ್ ನಲ್ಲಿಯೂ ಬೊಂಬಾಟ್ ಜೋಡಿ ಎನಿಸಿದ್ದಾರೆ.

Milana Nagaraj Personal Life – ಮಿಲನಾ ವೈಯಕ್ತಿಕ ಬದುಕು

ಸ್ಮಲಿಂಗ್ ಸ್ಟಾರ್ ಖ್ಯಾತಿಯ ಮಿಲನಾ ನಾಗರಾಜ್ 1989 ರ ಎಪ್ರಿಲ್ 25 ರಂದು ಹಾಸನದಲ್ಲಿ ಜನಿಸಿದರು. ತಂದೆ ನಾಗರಾಜ್, ತಾಯಿ ಚಂದ್ರಕಲಾ ಹುಟ್ಟಿದ್ದು ಬೆಳೆದದ್ದು ಬಹುತೇಕ ಹಾಸನದಲ್ಲಿ.

ಆದರೂ ಇವರ ಜೀವನ ರೂಪುಗೊಂಡದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣವನ್ನು ಹಾಸನದಲ್ಲಿ ಮುಗಿಸಿದರು.

 

View this post on Instagram

 

A post shared by Milana Nagaraj (@milananagaraj)

Education

ಕಾಲೇಜು ಶಿಕ್ಷಣದ ಅವಧಿಯಲ್ಲಿ ಬ್ಯಾಚುಲರ್ ಇನ್ ಕಂಪ್ಯೂಟರ್ ಸೈನ್ಸ್ ಅನ್ನು ಆಯ್ಕೆ ಮಾಡಿ ಅಭ್ಯಾಸಿಸಿದರು. ಬೆಂಗಳೂರಿನ ಪ್ರಖ್ಯಾತ ವಿಕೆಐಟಿ Vivekananda Institute of Technology (VKIT) ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಈ ಚೆಲುವೆಗೆ ಶೈಕ್ಷಣಿಕ ಚಟುವಟಿಕೆಗಿಂತ ಮಿಗಿಲಾಗಿ ಪಠ್ಯೇತರ ಚಟುವಟಿಕೆ ಬಹಳ ಅಚ್ಚು ಮೆಚ್ಚು.

ಬಾಲ್ಯದಿಂದಲೂ ನೀರಿನಲ್ಲಿ ಆಟವಾಡುವ ವಿಪರೀತ ಚಟ ಮತ್ತು ಚಲವಂತ ಹುಡುಗಿ ಮಿಲನ. ಅದಕ್ಕಾಗಿ ಚಿಕ್ಕಂದಿನಲ್ಲಿರುವಾಗಲೇ ಆಕೆಗೆ ಈಜು ಕಲಿಕೆಯ ತರಬೇರಿಯನ್ನು ಆಕೆಯ ಪೋಷಕರು ನೀಡಿದರು.

ಮೊದಮೊದಲು ಖುಷಿಗಾಗಿ ಮೊಜಿಗಾಗಿ ಆಡುತ್ತಿದ್ದ ಈಜಿನಾಟ ಆಕೆಯ ಮನಸ್ಸಿನಲ್ಲಿ ಸಾಧನೆಯ ಕಿಚ್ಚನ್ನು ಹೊತ್ತಿಸಿತ್ತು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅತೀ ಚಿಕ್ಕ ವಯಸ್ಸಿನಲ್ಲಿ ಈಜು ಸ್ಪರ್ಧೆಯಲ್ಲಿ ಹಲವು ವಿಭಾಗದಲ್ಲಿ ಪ್ರಶಸ್ತಿ ವಿಜೇತಳಾದ ಮಿಲನಾಳ ಈ ಸಾಧನೆ ಪೋಷಕರಿಗೆ ಹೆಮ್ಮೆ ಅನಿಸುವ ಹಾಗೇ ಮಾಡಿಸಿತು.

ಮುಂದೆ ತರಬೇತಿ ಕೇಂದ್ರಗಳಲ್ಲಿ ಇನ್ನಷ್ಟು ತರಬೇತಿ ಪಡೆದು ರಾಜ್ಯಮಟ್ಟದಲ್ಲೂ ಗುರುತಿಸಲ್ಪಟ್ಟರು. ಇವರಿಗೆ ತನ್ನ ಈಜುವ ಕನಸ್ಸನ್ನು ಈಡೇರಿಸಲು ಸಾರಥಿಯಂತೆ ನಿಂತಿದ್ದು ಇವರ ಅಪ್ಪ. ರಾಷ್ಟ್ರೀಯ ಮಟ್ಟದಲ್ಲಿ 13 ಪ್ರಶಸ್ತಿಗೆ ಬಾಜಿನರಾದರು.

ಇನ್ನೆನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧಿಸಬೇಕು, ಮೆಡಲ್ ಗೆಲ್ಲಬೇಕು, ಎಲ್ಲ ಸಾಧ್ಯವಾಗುತ್ತಿದೆ ಕನಸು ನನಸಾಗುವ ಸಮಯ ಬಂದೆ ಬಿಟ್ಟಿತೆನ್ನುವಾಗ ಕನಸಿನ ಸಣ್ಣ ಕಿಚ್ಚಿಗೆ ತಣ್ಣಿರು ಎರೆಚಿದಂತೆ ಎಲ್ಲ ಬುಡಮೇಲಾಯ್ತು.

ಇವರ ದ್ವಿತೀಯ ಪಿಯುಸಿ ಪರೀಕ್ಷೆ ವ್ಯಾಸಂಗ ಅವಧಿಯಲ್ಲಿ ಅಪಘಾತ ವೊಂದರಲ್ಲಿ ಸಿಲುಕಿ ಬಹಳ ಸಂದಿಗ್ದ ಪರಿಸ್ಥಿತಿಗೆ ತಲುಪಿದ್ದರು.

ಅಪಘಾತದಿಂದಾಗಿ ಕಾಲಿನ ಮೂಳೆ ಪೆಟ್ಟಾಗಿ ಈಜಿನಲ್ಲಿ ಸಾಧಿಸಬೇಕೆಂಬ ಕನಸು ಈಡೇರಲು ಸಾಧ್ಯವಾಗಲಿಲ್ಲ.

ಹಾಗಿದ್ದರೂ ಎಂದಿಗೂ ತಮ್ಮ ಕನಸಿನ ಕುರಿತು ಮುಚ್ಚಿಡಲು ಇಚ್ಚಿಸಲಿಲ್ಲ ಇಂದಿಗೂ ಈ ಆಸೆ ಈಡೇರಬೇಕೆಂಬ ಹಂಬಲ ಮತ್ತು ಆಶಯ ಅವರಲ್ಲಿ ಸದಾ ಇದೆ.

ಈಜಿನಲ್ಲಿ ಸಾಧನೆ ಮಾಡಲಾಗದಿದ್ದರೂ ಏನಾದರು ಹೊಸತನ್ನು ಮಾಡಬೇಕು, ಕ್ರಿಯಾಶೀಲರಾಗಿರಬೇಕೆಂಬ ಈಕೆಯ ವ್ಯಕ್ತಿತ್ವ ಕ್ಕೆ ನಿಜಕ್ಕೂ ಸೈ ಎನ್ನಬೇಕು.

Also Read : Ashika Ranganath Biography | ಆಶಿಕಾ ರಂಗನಾಥ್ ಕನ್ನಡದ ನಟಿ

Milana Modeling Interest

ಇವರು ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಅವಧಿಯಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪರಿಣಿತಿ ಪಡೆದು ಗುರುತಿಸಲ್ಪಟ್ಟರು.ಈ ಆಸಕ್ತಿ ಹಲವು ಸ್ಪರ್ಧೆಯಲ್ಲಿ ವಿಜೇತರಾಗುವುದರೊಂದಿಗೆ ಮಾಡೆಂಲಿಗ್ ಕ್ಷೇತ್ರದ ಆಸಕ್ತಿಯನ್ನು ಸಹ ಇವರಲ್ಲಿ ಬೆಳೆಸಿತು.

ಇವರ ಕಾಲೇಜು ಶಿಕ್ಷಣದ ಅವಧಿಯಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅದರಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾದರು.

ಇದರೊಂದಿಗೆ ಮಾಡಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕೆಂಬ ಆಸಕ್ತಿ ಇನ್ನಷ್ಟು ಇಮ್ಮಡಿಗೊಳಿಸಿತ್ತು.

Career

2013ರಲ್ಲಿ ಸ್ಯಾಂಡಲ್ ವುಡ್ ನ ನಮ್ ದುನಿಯಾ ನಮ್ ಸ್ಟೈಲ್ ಚಿತ್ರಕ್ಕೆ ನಾಯಕಿಯಾಗಿ ಆಫರ್ ಬರುತ್ತದೆ. ಈ ಮೂಲಕ ಸಿನೆಮಾ ಕೆರಿಯರ್ ನ ಕುರಿತು ಯೋಚನೆ ಇರದ ಮಿಲನಾಗೆ ಈ ಆಫರ್ ಬೊಂಪರ್ ಲಾಟ್ರಿ ಹೊಡೆದಂತೆ ಎಂದೆಣಿಸಿ ಕತೆ ಕೂಡ ಇಷ್ಟವಾಗಿ ಅಭಿನಯಿಸಲು ಒಪ್ಪಿಬಿಡುತ್ತಾರೆ.

See also  ಕಾಸರ್‌ಗೋಡ್: ಅಕ್ರಮ ಶ್ರೀಗಂಧದ ವ್ಯಾಪಾರದಲ್ಲಿ ಪ್ರಮುಖ ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ

ಇಲ್ಲಿಂದ ಆರಂಭವಾದ ಸಿನಿ ಜರ್ನಿ ಲವ್ ಮಾಕ್ಟೇಲ್ ಸಿನೆಮಾ ಮೂಲಕ ಜನಮಾನ್ಯತೆ ಪಡೆದು ಅದೇ ಹಿರೋ ಜೊತೆ ಸಪ್ತಪದಿ ಇಟ್ಟು ಸಾಂಸಾರೀಕ ಜೀವನದಲ್ಲಿ ಇದೀಗ ಹಾಲು ಜೇನಿನಂತೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತೊಡಗಿಕೊಂಡಿದ್ದಾರೆ.

 

Milana Nagaraj Film Career – ಮಿಲನಾ ಸಿನಿ ಬದುಕು

ಮಿಲನಾ ನಾಗರಾಜ್ ಸಿನೆಮಾ ಕನಸು ಹೊತ್ತವರಲ್ಲ ಆದರೂ ಮಾಡಲಿಂಗ್ ಕ್ಷೇತ್ರದಲ್ಲಿದ್ದಾಗ ಸಿನೆಮಾ ನಿರೀಕ್ಷೆ ಸ್ವಲ್ಪ ಮಟ್ಟಿಗೆ ಇತ್ತು.

ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಲನಾ ಕ್ಯೂಟ್ ಬ್ಯೂಟಿ ಗುರುತಿಸಿಕೊಂಡು 2013ರರಲ್ಲಿ ನಮ್ ದುನಿಯಾ ನಮ್ ಸ್ಟೈಲ್.

 

View this post on Instagram

 

A post shared by Milana Nagaraj (@milananagaraj)

ಈ ಸಿನೆಮಾದಲ್ಲಿ ಕಾಲೇಜ್ ಹುಡುಗಿಯಾಗಿ ಗ್ಲಾಮರಸ್ ಆಗಿ ಮಿಲನಾ ಕಾಣಿಸಿಕೊಂಡಿದ್ದು ಹೊಸ ಮುಖ ಹೊಸ ರೀತಿಯ ಅಭಿನಯದ ಮೂಲಕ ಜನಮೆಚ್ಚುಗೆ ಪಡೆದರು.

2013ರಲ್ಲಿ ಬೃಂದಾವನದಲ್ಲಿ ಮಧು ಅನ್ನೊ ಹೆಸರಿನ ಮೂಲಕ ಚಾಲಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಕಾಣಿಸಿಕೊಂಡರು.

ಈ ಸಿನೆಮಾದಲ್ಲಿ ಮಿಲನಾ ಅವರಿಗೆ ಡಬ್ಬಿಂಗ್ ಆರ್ಟಿಸ್ಟ್ ಬೇರೆಯವರಿಗೆ ನೀಡಿಲಾಗಿದೆ.

ಚಿತ್ರದ ಮೊದಲರ್ಧ ಈಕೆಯ ಪಾತ್ರ ಪೋಷಕ ನಟಿಯಂತೆ ಎನಿಸಿದರು ದ್ವಿತೀಯಾರ್ಧದಲ್ಲಿ ಲೀಡಿಂಗ್ ಪಾತ್ರದಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

2015ರಲ್ಲಿ ಚಾರ್ಲಿ ಚಿತ್ರದಲ್ಲಿ ಪೂರ್ವಿ ಅನ್ನೊ ಪಾತ್ರವನ್ನು ನಿಭಾಯಿಸಿದ್ದು , 2017ರಲ್ಲಿ ಮಲಯಾಳಂನ ಅವುರಡೆ ರಾವುಕಲ್ ಚಿತ್ರದಲ್ಲಿ ಮೇಘ, 2017 ರಲ್ಲಿ ಕನ್ನಡದ ಜಾನಿ ಚಿತ್ರದಲ್ಲಿ ಐಶ್ವರ್ಯ, 2020ರಲ್ಲಿ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೇಲ್ ಚಿತ್ರದಲ್ಲಿ ಲವ್ಲಿ ಕಪಲ್ ಹಾಗೂ ವೈಫ್ ಪಾತ್ರ ನಿಧಿಯಾಗಿ ಬಹುತೇಕ ಸಿನಿ ಪ್ರಿಯರ ಮನಗೆದ್ದರು.

2020ರಲ್ಲಿ ಮತ್ತೆ ಉದ್ಭವ ಚಿತ್ರದಲ್ಲಿ ಸ್ಪಂದನಾ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದು ಲವ್ ಮಾಕ್ಟೇಲ್ ಚಿತ್ರ ಈಡಿ ಸಿನಿ ಬದುಕಿಗೆ ಪ್ರೇರಣೆಯಾಯಿತಂತೆ.

ಶೀಘ್ರ ಮಿಲಿ ನಿರೀಕ್ಷೆ
ಮಿಲನಾ ನಾಗರಾಜ್ ಓರ್ವಳು ಪ್ರತಿಭಾನ್ವಿತ ನಟಿ‌ ಮಾತ್ರವಲ್ಲದೇ ಪ್ರಖ್ಯಾತ ಈಜುಗಾರ್ತಿಯೂ ಹೌದು. ಅವರ ಜೀವನ ದೃಷ್ಟಾಂತ ಬಹುತೇಕ ಜನರಿಗೆ ಪ್ರೇರಣೆ ಇದ್ದಂತೆ.

ಈ ನಿಟ್ಟಿನಲ್ಲಿ ಡಾರ್ಲಿಂಗ್ ಕೃಷ್ಣ ತನ್ನ ಸತಿಯ ಜೀವನ ಕತೆಯನ್ನು ಸಿನೆಮಾ ಮೂಲಕ ನೀಡಿ ಜನಸಾಮಾನ್ಯರಿಗೆ ಪ್ರೇರಣೆ ಆಗಬೇಕೆಂಬ ಕನಸು ಹೊತ್ತಿದ್ದಾರೆ.

ಈ ನಿಟ್ಟಿನಲ್ಲಿ ಡಾರ್ಲಿಂಗ್ ಕೃಷ್ಣ ಸ್ವತ ತನ್ನ ಪತ್ನಿಯ ಕುರಿತ ಕತೆಯನ್ನು ನಿರ್ದೇಶಿಸಲಿರುವ ಕುರಿತು ಇಂಗ್ಲೀಷ್ ವಾಹಿನಿಯೊಂದರ ಸಂದರ್ಶನದಲ್ಲಿ ಸೂಚನೆ ನೀಡಿದ್ದಾರೆ.

ಚಿತ್ರದ ಹೆಸರು ಮಿಲಿ ಎಂದಾಗಿದ್ದು ಮಿಲನಾ ನಾಗರಾಜ್ ಅವರ ಮುದ್ದು ಹೆಸರನ್ನು ಶಾರ್ಟ್ ಫಾರ್ಮ್ ಆಗಿ ಬಳಸಿರುವುದನ್ನು ಕಾಣಬಹುದು.

ಆಕೆ ನಿಜ ಜೀವನದಲ್ಲಿ ಶ್ರೇಷ್ಠ ಈಜುಪಟುವಾಗಿದ್ದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡವರು ಹಾಗಿದ್ದು ಅವರು ಸಿನಿ ಬದುಕು ಸಾಗಿರುವ ಪಯಣವೇಕೆ, ಮಿಲನಾ ನಾಗರಾಜ್ ವ್ಯಕ್ತಿತ್ವವನ್ನು ಮಿಲ್ಲಿ ಚಿತ್ರದ ಮೂಲಕ ಸಿನಿಪ್ರಿಯರ ಮನಗೆಲ್ಲಲು ಸಜ್ಜಾಗುತಿದೆ ಈ ಕಪಲ್.

Darling Krishna and Milana Nagaraj – ಮದರಂಗಿ ವಲ್ಲೆ ಅಂದ ಮಿಲನಾ

ಡಾರ್ಲಿಂಗ್ ಕೃಷ್ಣ ಮೊದಲ ಸಿನೆಮಾ ಮದರಂಗಿಗೆ ಮಿಲನಾ ನಾಗರಾಜ್ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿ ನಟಿಸುವಂತೆ ಬೇಡಿಕೆಯೊಂದನ್ನು ಅವರ ಮುಂದಿಟ್ಟಿದ್ದರಂತೆ.

 

View this post on Instagram

 

A post shared by Milana Nagaraj (@milananagaraj)

 

ಅದರೊಂದಿಗೆ ನಮಗೆಲ್ಲ ತಿಳಿದಂತೆ ಕೃಷ್ಣ ಅವರು ಖಾಸಗಿ ವಾಹಿನಿಯೊಂದರ ಕೃಷ್ಣ ರುಕ್ಮಿಣಿ ಎಂಬ ಧಾರವಾಹಿ‌ ಮೂಲಕ ಕನ್ನಡ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದರು.

ಅದೇ ಹೊತ್ತಿಗೆ ಪುನೀತ್ ರಾಜ್ ಕುಮಾರ್ ಅವರ ಹುಡುಗರು ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ಬಳಿಕ ಮದರಂಗಿ ಚಿತ್ರದ ನಾಯಕನಾಗಿ ಅವರಿಗೆ ಆಫರ್ ಬಂದಿತ್ತು. ಮದರಂಗಿ ಚಿತ್ರದಲ್ಲಿ ನಾಯಕಿ ಹುಡುಕಾಟದಲ್ಲಿರುವಾಗ ಕಂಡಿದ್ದು ಮಿಲನಾ.

ನಮ್ ದುನಿಯಾ ನಮ್ವಸ್ಟೈಲ್ ಚಿತ್ರದಲ್ಲಿಯೇ ಈ ಇಬ್ಬರೂ ಮಿಲನಾ ಮತ್ತು ಕೃಷ್ಣ ಪರಿಚಯವಿದ್ದು ಈ ಮೂಲಕ ನಾಯಕಿಯಾಗಿ ನಟಿಸುವ ಮನವಿ ಮಿಲನಾ ಅವರ ಮುಂದಿಡಲಾಯಿತು. ಹೊಸ ನಾಯಕರೊಂದಿಗೆ ಸ್ಕ್ರೀನ್ ಶೇರ್ ಮಾಡುವುದರ ಕುರಿತು ಮಿಲನಾ ಗೊಂದಲದಲ್ಲಿದ್ದು ಈ ಆಫರ್ ಅನ್ನು ಬೇಡವೆಂದು ತಿರಸ್ಕರಿಸಿದರು.

See also  ಉಡುಪಿ : ಪ್ರವಾಹ ಪೀಡಿತ ಪ್ರದೇಶಗಳಿಗೆ NDRF ಜತೆ ತೆರಳಿದ ಶಾಸಕ ಕೆ. ರಘುಪತಿ ಭಟ್!

Travel Enthusiast Milana Nagaraj – ಪ್ರವಾಸಿ ಪ್ರಿಯೆ

ಮಿಲನಾ ನಾಗರಾಜ್ ಅವರು ಪ್ರವಾಸಿ ಪ್ರಿಯೆ. ಅವರ ಪ್ರವಾಸ ವಿಷಯ ಪ್ರಸ್ತಾಪಕ್ಕೂ ಮುನ್ನ ಇನ್ನೊಂದು ವಿಷಯ ನೀವು ತಿಳಿಯಬೇಕು.

ಲವ್ ಮಾಕ್ಟೇಲ್ ಸಿನೆಮಾ ಕತೆಯೂ ಬೇರೊಂದು ಸಿನೆಮಾ ಕಾರಣಕ್ಕೆ ಬಿಡದಿ ಯಿಂದ ಬೆಂಗಳೂರಿಗೆ ಬಂದ ಕೃಷ್ಣ ಅವರಿಗೆ ಸಡನ್ ಆಗಿ ಹೊಳೆದಿತ್ತು.

 

View this post on Instagram

 

A post shared by Milana Nagaraj (@milananagaraj)

ಇದೇ ಸಂದರ್ಭದಲ್ಲಿ ಸಿನೆಮಾ ಕಾರಣಕ್ಕಾಗಿ ದಿಲ್ಲಿಯಲ್ಲಿದ್ದ ಮಿಲನಾ ಅವರಿಗೆ ಕೆಲವೊಂದು ಸೀನ್ ಗಳ ಬಗ್ಗೆ ಇಬ್ಬರು ಗಾಢ ಚರ್ಚೆಗೆ ತೊಡಗಿ ಬಳಿಕ ಒಟ್ಟಾಗಿ ಸೇರಿ ಸ್ಕ್ರಿಪ್ಟ್ ಬರೆದರು.

ಅದೇ ಉತ್ತಮ ಕತೆಯಾಗಿ ಲವ್ ಮಾಕ್ಟೆಲ್ ಸಿನೆಮಾವಾಯಿತು. ಈ ಸಿನೆಮಾದ ಶೂಟಿಂಗ್ ವೇಳೆ ವಿವಿಧ ಸ್ಥಳಕ್ಕೆ ಭೇಟಿ ನೀಡಿದ್ದರು. ಕರ್ನಾಟಕದ ಕೊಡಗು, ಮಡಿಕೇರಿ, ಟೀ ಎಸ್ಟೇಟ್ ಕುದುರೆ ಮುಖ ಮುಂತಾದವುಗಳು ಮಿಲನಾ ನಾಗರಾಜ್ ಅವರ ನೆಚ್ಚಿನ ಸ್ಥಳಗಳು.

ಅದರಂತೆ ದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಲಡಾಖ್, ಕಾಶ್ಮಿರಾ ಮತ್ತು ಗೋವಾದಲ್ಲಿ ಪ್ರವಾಸಕ್ಕೆ ತೆರಳಿ ಅಲ್ಲಿನ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದ್ದಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಪ್ರವಾಸಿ ಪ್ರಿಯತೆಯನ್ನು ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Milana Nagaraj (@milananagaraj)

ಮಿಲನಾ ಅವರು ಮದುವೆಯಾದ ಬಳಿಕ ಮಾಲ್ಡಿವ್ಸ್ ಗೆ ಹನಿಮೂನ್ ಗೆ ತೆರಳಿದ್ದು ಲವ್ ಮಾಕ್ಟೇಲ್ ಸಿನೆಮಾದ ಇದೇ ಸ್ವರ್ಗ ಎಂಬ ಹಾಡನ್ನು ಸಹ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕ್ಯೂಟ್ ಕಪಲ್, ಸೂಪರ್ ಜೋಡಿ, ಲವ್ಲಿ ಕಪಲ್, ಮೇಡ್ ಫಾರ್ ಈಚ್ ಅದರ್ ಹೀಗೆ ವಿವಿಧ ಕಾಮೆಂಟ್ ಗಳ ಸುರಿಮಳೆ ಮಿಲನಾ ಹಾಗೂ ಕೃಷ್ಣ ಅಭಿಮಾನಿಗಳಿಂದ ಸುರಿದಿದೆ.

Fitness Secret of Milana Nagaraj – ಮಿಲನಾ ಫಿಟ್ನೆಸ್ ಸಿಕ್ರೆಟ್ ಏನು

ನಮಗೆಲ್ಲಾ ತಿಳಿದಂತೆ ಮಿಲನಾ ಅವರು ಪ್ರಖ್ಯಾತ ಈಜುಗಾರ್ತಿ ಆದಕ್ಕಾಗಿಯೇ ವರ್ಕ್ಅವ್ಟ್ ಮಾಡುತ್ತಿದ್ದು ಇದು ಅವರಿಗೆ ಸಿನೆಮಾ ಕೆರಿಯರ್ ರೂಪಿಸಲು ಸಹ ನೆರವಾಗಿದೆ. ಜಿಮ್, ಯೋಗಾ, ಪ್ರಾಣಯಾಮ, ಝಂಬಾ, ರೇಸ್, ಸೈಕ್ಲಿಂಗ್ ಇವರ ನೆಚ್ಚಿನ ಫಿಟ್ನೆಸ್ ಸಿಕ್ರೇಟ್.

ಅದರೊಂದಿಗೆ ಊಟಾ ತಿಂಡಿ ವಿಚಾರದಲ್ಲಿ ಹೆಚ್ಚು ಕಾಳಜಿ ದೈನಿಕ ಬದುಕಿನಲ್ಲಿ ಅಗತ್ಯವೆನ್ನುವ ಅಭಿಪ್ರಾಯ ಮಿಲನಾ ಅವರದ್ದಾಗಿದೆ. ಮೊಳಕೆ ಕಾಳು, ಮುಂತಾದ ವಿಟಮಿನ್ ಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎನ್ನುವುದು ಅವರ ನಿಲುವಾಗಿದೆ.

 

View this post on Instagram

 

A post shared by Milana Nagaraj (@milananagaraj)

ಸರ್ ಪ್ರೈಸ್ ಪ್ರಿಯೆ
ಮಿಲನಾಗೆ ಏನಾದರೂ ಸರ್ಪ್ರೈಸ್ ಆಗಿ ಕೊಡೊದು ಮತ್ತೆ ತನಗೂ ಬೇರೆಯವರು ಸರ್ ಪ್ರೈಸ್ ನೀಡುವುದು ಎಂದರೆ ಬಹಳ ಅಚ್ಚು ಮೆಚ್ಚಂತೆ.

ಹೀಗಿದ್ದರು ಲವ್ ಮಾಕ್ಟೇಲ್ ಸಿನೆಮಾಗೂ ಮೊದಲು ಯಾವುದೇ ಸಲಬ್ರೇಷನ್ ಗಳನ್ನು ಡಾರ್ಲಿಂಗ್ ಕೃಷ್ಣ ಆಚರಿಸಲು ಸಿದ್ಧರಾಗಿರಲಿಲ್ಲ. ಒಂದು ಸಿನೆಮಾ ಯಶಸ್ಸಿನ ಮೂಲಕ ಜನಮನ ಮಾತಾಗಿ ಬಳಿಕ ಸೆಲಬ್ರಿಟಿ ಸಲಬ್ರೇಶನ್ ಮಾಡಬೇಕೆನ್ನುವುದು ಕೃಷ್ಣ ಅವರ ಆಸೆ ಆಗಿತ್ತು.

ಅದಕ್ಕಾಗಿ ಮಿಲನಾ ಹುಟ್ಟು ಹಬ್ಬವನ್ನು ಸಿಂಪಲ್ ಮತ್ತು ಕ್ರೀಯೆಟಿವ್ ಆಗಿ ತುಂಬಾ ಸರ್ ಪ್ರೈಸ್ ನೀಡಿ ಕೃಷ್ಣ ಆಚರಿಸುತ್ತಾರೆ.

ನಿಧಿಮಾ ಟ್ರೆಂಡ್ ಹವಾ
ನಿಮಗಿದು ನೆನಪಿರಬಹುದು. ಲವ್ ಮಾಕ್ಟೇಲ್ ಚಿತ್ರ ವೀಕ್ಷಿಸಿದ ಪ್ರೇಕ್ಷಕರಿಗೆ ನನಗೂ ಒಂದು ಆದಿ ಅಂತಹ ಹುಡುಗ ಬೇಕೆಂದು / ನಿಧಿಮಾ ಅಂತಹ ಹುಡುಗಿ ಸಿಗಬೇಕು.

ಬದುಕನ್ನು ಸೂಪರ್ ಆಗಿ ಎಂಜಾಯ್ ಮಾಡ್ಬೇಕು, ತುಂಬ ಪ್ರೀತಿಸುತ್ತಲೇ ಇರಬೇಕು ಹೀಗೆ ಅದು ಇದು ಅಂತ ಸಾವಿರ ಕನಸು ಹೊತ್ತದ್ದು ಇದೆ. ಅದಕ್ಕೆ ಕಾರಣ ಈ ಇಬ್ಬರ (ವಿಜಯ್ ಕೃಷ್ಣ-ಮಿಲನ) ಮುದ್ದಾದ ಕಾಂಬಿನೇಶನ್.

ಇದರಲ್ಲಿ ಮಿಲನ ನಿಧಿಮಾ ಪಾತ್ರ ನಿರ್ವಹಿಸಿದ್ದು ಆಕೆ ವಿನೂತನ ಗೆಟಪ್ನಲ್ಲಿ ಕಂಡಿದ್ದು ಸಹ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನಬಹುದು.

ಬಾಬ್ ಕಟ್ ಹೇರ್ ಸ್ಟೈಲ್, ಸಿಂಪಲ್ ಮೇಕಪ್, ಮೇಕಪ್ ಮತ್ತು ಹೇರ್ ಸ್ಟೈಲ್ ಗೆ ಅನುಗುಣವಾಗಿ ಸಿಂಪಲ್ ಸರ, ಸರಳ ಮತ್ತು ಚೆನ್ನಾಗಿ ಲುಕ್ ನೀಡಬಲ್ಲ ಲೈಟ್ ಬಣ್ಣದ ಉಡುಪು ಇವುಗಳೆಲ್ಲಾ ಆ ಸಿನೆಮಾದ ಮೂಲಕ ನಿಧಿಮಾ ಸ್ಟೈಲ್ ಎಂದೆ ಪ್ರಖ್ಯಾತಿ ಪಡೆದಿದೆ.

See also  ಮಂಗಳೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುತಿಲ್ಲ!

ಅದು ವರೆಗೆ ಕರ್ಲಿ ಹೇರ್, ಲಾಂಗ್ ಹೇರ್, ಸ್ಟ್ರೈಟ್ ಹೇರ್ ಅಂದವರು ಮತ್ತೊಮ್ಮೆ ಬಾಬ್ ಕಟ್ ಜಮಾನಕ್ಕೆ ಜಿಗಿಯಲು ಈ ನಿಧಿಮಾ ಸ್ಟೈಲ್ ಸಾಕ್ಷಿಯಾಗಿದೆ.

ಬಹುತೇಕ ಕಾಲೇಜು ಕನ್ಯರು, ಟೀನೇಜ್ ಹುಡುಗಿಯರಿಂದ ಹಿಡಿದು ವಯಸ್ಸಾದ ಆಂಟಿಗಳವರೆಗೇ ಈ ನಿಧಿಮಾ ಟ್ರೆಂಡ್ ಗೆ ಮರುಳಾಗಿ ಅದನ್ನು ಅನುಕರಣೆ ಮಾಡಿದವರು ಇದ್ದಾರೆ.

Milana Nagaraj Marriage – ಲವ್ಲಿ ಕಪಲ್

ಡಾರ್ಲಿಂಗ್ ಕೃಷ್ಣ ಮಿಲನಾ ಅವರನ್ನು ತುಂಬಾ ಪ್ರೀತಿಸುತ್ತಿದ್ದು ಮಿಲ್ಲಿ, ಬೇಬ್ ಎಂದು ಕರೆಯುತ್ತಾರೆ. ಕೃಷ್ಣ ಅವರಿಗೆ ಯಾವುದೆ ದುರಾಭ್ಯಾಸ ಗಳಿಲ್ಲದಿರುವುದು, ಸಮಯ ಪ್ರಜ್ಞೆ, ಶಿಸ್ತು ಬದ್ಧ ಜೀವನ ಶೈಲಿ ಮಿಲನಾ ಅವರಿಗೆ ತುಂಬಾ ಇಷ್ಟವಂತೆ.

 

View this post on Instagram

 

A post shared by Milana Nagaraj (@milananagaraj)

ಇವರಿಬ್ಬರ ಪರಿಚಯ ಮಿಲನಾ ಅವರ ಮೊದಲ ಸಿನೆಮಾದಿಂದಲೇ ಆಗಿದ್ದರೂ ಜಸ್ಟ್ ಹಾಯ್ ಬಾಯ್ ಸ್ನೇಹಿತರಷ್ಟೇ ಇವರಾಗಿದ್ದರು.

ಡಾರ್ಲಿಂಗ್ ಕೃಷ್ಣ ಅವರ ಮೊದಲ ಸಿನೆಮಾ ಮದರಂಗಿಗೆ ಮಿಲನಾ ನಾಯಕಿಯಾಗಲು ಆಫರ್ ಬಂದರೂ ಕಾರಣಾಂತರಗಳಿಂದ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು.

ಹಾಗಿದ್ದರೂ ನಮ್ ದುನಿಯಾ ನಮ್ ಸ್ಟೈಲ್ ಸಿನೆಮಾ ಮೂಲಕ ಇವರಿಗೆ ಕೃಷ್ಣ ಅವರ ಪರಿಚಯವಾಯಿತು.

ಮೊದಲು ಪರಿಚಯ, ನಂತರ ಸ್ನೇಹ, ಸ್ನೇಹ ಬಲವಾಗಿ ಪ್ರೀತಿ ಎಂಬ ಪರಿಕಲ್ಪನೆಯಂತೆ ಇಲ್ಲಿಯೂ ನಡೆದಿರುವುದನ್ನು ನಾವು ಕಾಣಬಹುದು. ನಮ್ ದುನಿಯಾ ನಮ್ ಸ್ಟೈಲ್ ಸಿನೆಮಾ ರಿಲೀಸ್ ಬಳಿಕ ಕೃಷ್ಣಾ ಅವರಿಗೆ ನಮ್ಮ ಮಿಲನಾ ಬಗ್ಗೆ ವಿಶೇಷ ಭಾವನೆ ಮೂಡತೊಡಗಿತು.

Romeo Pet Dog of Couple Milana Nagaraj and Darling Krishna – ಮನೆಗೆ ಬಂದ ಹೊಸ ಅತಿಥಿ ರೋಮಿಯೊ

ಇತ್ತೀಚೆಗಷ್ಟೇ ಮಿಲನಾ ನಾಗರಾಜ್ ಅವರು ತಮ್ಮ ಮನೆಗೆ ಹೊಸ ಅತಿಥಿಯನ್ನು ಕರೆತಂದಿದ್ದು ಅವರ ಹೆಸರು ರೋಮಿಯೊ ಎಂದು ಪರಿಚಯಿಸಿದ್ದರು.

ಹೀಗೆಂದಾಗ ಮೊದಲು ಇದು ಯಾರೊ ಸಂಬಂಧಿಕರು ಎನಿಸಬಹುದು. ಆದರೆ ನಿಮ್ಮ ಊಹೆ ತಪ್ಪು.

ಕೃಷ್ಣ ಅವರು ಮಿಲನಾ ಅವರಿಗೆ ವಿಶೇಷವಾಗಿ ನಾಯಿ ಮರಿಯೊಂದನ್ನು ಉಡುಗೊರೆ ನೀಡಿದ್ದು ಅದಕ್ಕೆ ಮುದ್ದಾಗಿ ರೋಮಿಯೊ ಎಂದು ಹೆಸರಿಟ್ಟಿದ್ದಾರೆ.

 

View this post on Instagram

 

A post shared by Milana Nagaraj (@milananagaraj)

ಹೆಸರಿಗೆ ತಕ್ಕಂತೆ ರೋಮಿಯೊ ಮುದ್ದು ಮುದ್ದಾಗಿನ ತುಂಟತನಕ್ಕೆ ಮಿಲನಾ ಫುಲ್ ಫಿದಾ ಆಗಿದ್ದಾರೆ.
ಮಿಲನಾ ಅವರು ರೋಮಿಯೊಗಾಗಿಯೇ ಸಮಯವನ್ನು ಮಿಸಲಿಡುತ್ತಿದ್ದು ಅದರೊಂದಿಗೆ ಕಳೆದ ಕ್ಷಣಗಳನ್ನು ವೀಡಿಯೋ ಮಾಡಿ ಫೆಸ್ ಬುಕ್, ಇನ್ಸ್ಟ್ರಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಜನ ಮೆಚ್ಚುಗೆಯನ್ನು ಪಡೆದು ತುಂಬಾ ಲೈಕ್ಸ್ ಮತ್ತು ಕಮೆಂಟ್ ಬಂದಿತ್ತು.

Kaddu Mucchi Movie – ಕದ್ದು ಮುಚ್ಚಿ ಸಿನೆಮಾ

ಈ ಇಬ್ಬರು ಸಿನಿ ಕಪಲ್ ಗಳಿಗೆ ಸಿನೆಮಾನೇ ಪ್ರಪಂಚವಿದ್ದಂತೆ.

ಸಿನೆಮಾ ಕುರಿತು ಎಷ್ಟು ಮಾತನಾಡಿದರೂ ಇನ್ನೂ ಮಾತನಾಡಬೇಕೆಂಬ ಹಂಬಲ‌ಇವರಲ್ಲಿ ಸಾಮಾನ್ಯವಂತೆ.‌

ಇವರೆ ನಿರ್ದೇಶಿಸಿ ನಟಿಸಿರುವ ಲವ್ ಮಾಕ್ಟೇಲ್ ಸಿನೆಮಾವನ್ನು ಸಾಮಾನ್ಯ ಪ್ರೇಕ್ಷಕರಂತೆ ಗಾಂಧಿ ಕ್ಲಾಸ್ ನಲ್ಲಿ ಮುಂಭಾಗದಲ್ಲಿ ಪ್ರೇಕ್ಷಕರ ಮಧ್ಯ 3 ಬೇರೆ ಬೇರೆ ಸಿನೆಮಾ ಟ್ಯಾಕಿಸ್ ನಲ್ಲಿ ವೀಕ್ಷಿಸುವುದು ಬಹಳ ಖುಷಿ ತಂದಿತ್ತಂತೆ.

ಸುಮಾರು 800ಕ್ಕೂ ಅಧಿಕ ಪ್ರೇಕ್ಷಕರ ಸಿಳ್ಳೆ ಚಪ್ಪಾಳೆ ಕೇಳಿದಾಗ ಅದ್ಯಾವ ಹೀರೊ ಆದರೂ ಒಂದು ಸಾರ್ಥಕ ಭಾವನೆ ಮೂಡದಿರಲು ಸಾಧ್ಯ.

ತಮಾಷೆ ಎಂದರೇ ಇವರು ಜಾಕೇಟ್, ಮಂಕಿ ಕ್ಯಾಪ್ ಹಾಕಿ ಮುಖ ಮುಚ್ಚುತ್ತಿರುವುದು ಒಂದಿಷ್ಟು ಮಂದಿ ನೋಡಿ ಗುರುತಿಸುತ್ತಿದ್ದರಂತೆ ಆದರೆ ನಾವು ಈ ರೀತಿ ಸಿನೆಮಾ ವೀಕ್ಷಿಸುವುದು ಜನರಿಗೆ ತಿಳಿದು ಸಿನೆಮಾ ಮೂಡ್ ಹಾಳು ಮಾಡುವ ಉದ್ದೇಶ ನಮಗಿರಲಿಲ್ಲ.

ಅದಕ್ಕಾಗಿ ನಮ್ಮನ್ನು ನೋಡಿ ಗುರುತಿಸಿದವರಿಗೆ ಯಾರಿಗೂ ಹೇಳದಂತೆ ರಿಕ್ವೇಸ್ಟ್ ಮಾಡುತ್ತಿದ್ದೇವು ಎನ್ನುತ್ತಾರೆ ಮಿಲನಾ.

— ರಾಧಿಕಾ, ಕುಂದಾಪುರ


LEAVE A REPLY

Please enter your comment!
Please enter your name here