ಕಾಂಗ್ರೆಸ್ ನಲ್ಲಿ ಬಿರುಗಾಳಿ !

0

ಸೋನಿಯಾ ಗಾಂಧಿ ರಾಜೀನಾಮೆ ವಿಚಾರವಾಗಿ ಇಂದು ನಡೆದ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಹಾಗೂ ಟೀಕೆ ಟಿಪ್ಪಣಿಗಳು ಶುರುವಾದವು. ರಾಹುಲ್ ಗಾಂಧಿ ಯವರ ಟ್ವೀಟ್ ಭಾರಿ ವಿವಾಧಕ್ಕೊಳಗಾಗಿ ಕೆಲವು ಕಾಂಗ್ರೆಸ್ ಮುಖಂಡರು ರಾಜೀನಾಮೆ ಕೊಡುವುದಾಗಿ ಹೇಳಿಕೆ ಕೊಟ್ಟರು. ಕಾಂಗ್ರೆಸ್ ಪಕ್ಷವು ೨ ಭಿನ್ನ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದು, ಕೆಲವರು ಗಾಂಧಿಯೇತರ ನಾಯಕರು ಕಾಂಗ್ರೆಸ್ ಗೆ ಬೇಕು ಎಂದು ಮತ್ತು ಇನ್ನು ಕೆಲವರು ಗಾಂಧಿ ಪರಿವಾರವೇ ಇಂತಹ ಕಠಿಣ ಸಂದರ್ಭದಲ್ಲಿ ನಾಯಕರಾಗಿ ಬರಬೇಕು ಎಂದು ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದೆ ಹಾಗು ಬಂದಿರುವ ವರಧಿಯ ಪ್ರಕಾರ, ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಕಾಂಗ್ರೆಸ್ ಸ್ಪಷ್ಟನೆ ಕೊಟ್ಟಿದೆ.

See also  ಟಾಯ್ಲೆಟ್ ನಲ್ಲಿ ‌ಬಂಧಿಯಾದ ಚಿರತೆ ಮತ್ತು ನಾಯಿ...!

LEAVE A REPLY

Please enter your comment!
Please enter your name here