ಉಡುಪಿ: ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ಮುಂದಾದ ರಿಷಬ್ ಶೆಟ್ಟಿ !

0


ಉತ್ತಮ ಸಮಾಜದ ಅಭಿಲಾಷೆಯಿಂದ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಯತ್ತ ಚಿಂತನೆ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯು ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು , ಇದಕ್ಕೆ ಹೈಟೆಕ್ ಟಚ್ ನೀಡಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ಈಗಾಗಲೇ ನಾಗರಿಕ ಸಬಲೀಕರಣ ಗುಂಪಿನೊಂದಿಗೆ ಕೈಜೋಡಿಸಿರುವ ಇವರು ಯುವ ಶಕ್ತಿ ಕರ್ನಾಟಕದೊಂದಿಗೆ ಸರ್ಕಾರೀ ಆಸ್ಪತ್ರೆಗಳ ನವೀಕರಣ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿದ ರಿಷಬ್ ಶೆಟ್ಟಿ ಉಡುಪಿ ಜಿಲ್ಲೆಯಲ್ಲಿ 11 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಇಲ್ಲಿ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯು ಹಳೆಯ ಆಸ್ಪತ್ರೆಯಾಗಿದ್ದು ಜಿಲ್ಲೆಯ ಜನರ ತುರ್ತು ಹಾಗೂ ಗಂಭೀರ ಪ್ರಕರಣಗಳನ್ನು ನಿಭಾಯಿಸಲು ಆಸ್ಪತ್ರೆಗೆ ಮೂಲಭೂತ ಸೌಕರ್ಯದ ಕೊರತೆಯಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಅಗತ್ಯ ಎಂದರು.

ಕೊರೊನದಿಂದಾಗಿ ಇಡೀ ದೇಶವೇ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದೆ. ಇಂತಹ ಸಮಯದಲ್ಲಿ ಕೂಡ ನಮ್ಮ ಜಿಲ್ಲೆಗೆ ಉತ್ತಮ ಆರೋಗ್ಯದ ಸೌಲಭ್ಯಗಳು ಸಿಗುತ್ತಿಲ್ಲ. ದೇಶದಲ್ಲಿ ಅರೋಗ್ಯ ಸೌಲಭ್ಯದ ಕೊರತೆ ಎಷ್ಟಿದೆ ಎಂದು ಕೋರೋಣ ಎತ್ತಿ ತೋರಿಸುತ್ತಿದೆ, ಇಂತಹ ಸಮಸ್ಯೆಗಳನ್ನು ಎದುರಿಸಲು ವ್ಯೆಧ್ಯಕೀಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಬೇಕಿದೆ ಎಂದರು.

____________________________________________________

See also  ಸೆಪ್ಟೆಂಬರ್ 24: ದಕ್ಷಿಣ ಕನ್ನಡ 266 ಹೊಸ ಕರೋನಾ ಪ್ರಕರಣ, 2 ಸಾವುಗಳು; ಉಡುಪಿ 74 ಹೊಸ ಪ್ರಕರಣಗಳನ್ನು ದಾಖಲಿಸಿದೆ

LEAVE A REPLY

Please enter your comment!
Please enter your name here