ಕ್ರಿಶ್ಚಿಯನ್ ಮಹಿಳೆಯ ಪೋಸ್ಟ್ ಈಗ ವಿವಾದಕ್ಕೆ ಕಾರಣವಾಗಿದೆ.

0

ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಮಹಿಳೆಯೊಬ್ಬಳು ತಮ್ಮ ನಾಯಿಯನ್ನು ಮುದ್ಧು ಕೃಷ್ಣನಂತೆ ವೇಷ ಧರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ, ಇದು ವಿವಾದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಪೋಷಕರು ತಮ್ಮ ಮಗುವನ್ನು, ಮುದ್ಧು ಕೃಷ್ಣನಂತೆ ವೇಷ ಧರಿಸುತ್ತಾರೆ. ಅದರೆ ‍ಪುತ್ತೂರಿನ ಕ್ರೈಸ್ತ ಮಹಿಳೆಯೊಬ್ಬರು ತಮ್ಮ ನಾಯಿಗೆ ಕೃಷ್ಣನ ವೇಷ ತೊಡಿಸಿ ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಪೋಸ್ಟ್ ಮಾಡಿದ ಮಹಿಳೆಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಅದು ಅನೇಕರನ್ನು ಕೆರಳಿಸಿದೆ. ಕೃಷ್ಣ ದೇವರನ್ನು ಅವಮಾನಿಸಿದ್ದಾಳೆ ಎಂದು ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದರಿಕೊಂಡ ಮಹಿಳೆ ಕೂಡಲೇ ಪೋಸ್ಟನ್ನು ಡಿಲೀಟ್‌ ಮಾಡಿದ್ದಾರೆ.

 


 

See also  ಹಿರಿಯಡ್ಕ : ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ ಕಾರು!

LEAVE A REPLY

Please enter your comment!
Please enter your name here