ಹಿಂದೂ ದೇವರ ಅವಹೇಳನ: ಆಪ್ ಮಾಜಿ ಶಾಸಕ ಅಮಾನತು

0

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ವಿಚಾರಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಹಾಕಿದ ಆಮ್ ಆದ್ಮಿ ಪಕ್ಷದ ಮಾಜಿ ಶಾಸಕ ಜರ್ನೈಲ್ ಸಿಂಗ್ ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ದೆಹಲಿಯ ರಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜರ್ನೈಲ್ ಸಿಂಗ್ ನನ್ನು ಅಮಾನತುಗೊಳಿಸಿದ ಆಮ್ ಆದ್ಮಿ ಪಕ್ಷ, ಪಕ್ಷವು ಜಾತ್ಯಾತೀತವಾಗಿದ್ದು ಯಾವುದೇ ಧರ್ಮವನ್ನು ನಿಂದಿಸುವವರಿಗೆ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಂತಹ ವರ್ತನೆ ಸಿಖ್ ಸಮುದಾಯ ಕೂಡ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ.

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಜರ್ನೈಲ್ ಸಿಂಗ್, ತನಗೆ ಅರಿವಿಲ್ಲದೆ ತನ್ನ ಮಗ ಆನ್ ಲೈನ್ ತರಗತಿಗಳ ಸಮಯದಲ್ಲಿ ತಪ್ಪಿ ಅದನ್ನು ಫೇಸ್ಬುಕ್ ನಲ್ಲಿ ಹಾಕಿದ ಎಂದು ದಿಕ್ಕು ತಪ್ಪಿಸುವ ಹೇಳಿಕೆಯನ್ನು ನೀಡಿದ್ದಾರೆ.

 


 

See also  Scan your phone and withdraw money at ATM!..know how?

LEAVE A REPLY

Please enter your comment!
Please enter your name here